ಸೋಮವಾರ, ಮೇ 17, 2021
27 °C

ಬಿತ್ತನೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ ಸುಮಾರು ಒಂದು ಗಂಟೆಗಳ ಕಾಲ ಗುಡುಗು ಸಿಡಿಲ ಅಬ್ಬರದೊಂದಿಗೆ ಧಾರಾಕಾರ ಮಳೆ ಸುರಿಯಿತು.ಮಳೆಯಿಂದ ಕೆಲವು ಹೊಲಗಳಲ್ಲಿ, ತಗ್ಗು ಪ್ರದೇಶ, ಹಳ್ಳ ಮತ್ತು ನದಿಗಳಲ್ಲಿ ನೀರು ನಿಂತಿರುವ ದೃಶ್ಯ ಶುಕ್ರವಾರ ಕಂಡುಬಂದಿತು.ಕಳೆದ ಒಂದು ವಾರದಿಂದ ಹದಭರಿತ ಮಳೆಯಾಗುತ್ತಿರುವುದರಿಂದ ರೈತರ ಮುಖದಲ್ಲಿ ಮಂಧಹಾಸ ಮೂಡಿದೆ. ಬಿತ್ತನೆಗೆ ಯಾವ ಬೀಜ ಸೂಕ್ತ, ಇಳುವರಿ ಹೆಚ್ಚಿದರೆ ಲಾಭ ಯಾವುದರಿಂದ ಎಂದೆಲ್ಲ ಮಾತುಗಳು ಕೇಳಿಬರುತ್ತಿವೆ. ಕೃಷಿ ಕಾರ್ಯದ ಕುರಿತ ಮಾತುಕತೆ, ಸಲಹೆ, ಸೂಚನೆ ನೂತನ ತಂತ್ರಜ್ಞಾನಗಳೆಲ್ಲವೂ ರೈತರ ಆಸಕ್ತಿಯ ಮಾತುಕತೆಗೆ ಸೇರಿವೆ. ಕ್ರಮೇಣ ರಾಜಕೀಯ ಚರ್ಚೆಗಳು ನೇಪಥ್ಯಕ್ಕೆ ಸರಿಯುತ್ತಿವೆ. ಕೃಷಿಯ ಲಾಭ, ಲೆಕ್ಕಾಚಾರಗಳು ಊರ ಮುಂದಿನ ಕಟ್ಟೆಯಲ್ಲಿ ಪ್ರಮುಖ ಚರ್ಚೆಗಳಾಗಿವೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ರೈತರು ಹೊಲವನ್ನು ಸ್ವಚ್ಛಗೊಳಿಸಿ, ಉತ್ತುವಲ್ಲಿ ನಿರತರಾಗಿದ್ದಾರೆ.ರೈತ ಸಂಪರ್ಕ ಕೇಂದ್ರದಲ್ಲಿಯೂ ಬಿತ್ತನೆ ಬೀಜ, ಗೊಬ್ಬರ ಕೊಳ್ಳಲು ರೈತರು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂದಿತ್ತು. ಮಳೆ ರೈತರ ಉತ್ಸಾಹ ಇಮ್ಮಡಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.