ಶುಕ್ರವಾರ, ಮೇ 7, 2021
20 °C

ಬಿತ್ತನೆ ಬೀಜ ಮಾರಾಟದ ಆರೋಪ: ಎಸಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ಸರ್ಕಾರದ ಸಹಾಯಧನದಲ್ಲಿ ತಾಲ್ಲೂಕಿನ ರೈತರಿಗೆ ವಿತರಿಸಬೇಕಾಗಿದ್ದ ಬಿತ್ತನೆ ಬೀಜಗಳನ್ನು ಬೇರೆ ತಾಲ್ಲೂಕಿನ ರೈತರಿಗೆ ಮಾರಾಟ ಮಾಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಶಿರಸಿಯ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಇಲ್ಲಿನ ಕೃಷಿ ಇಲಾಖೆಗೆ ಭೇಟಿ ನೀಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ಜರುಗಿದೆ.ತಾಲ್ಲೂಕಿನ ರೈತನ ಹೆಸರಿನಲ್ಲಿ ಬಿಲ್ ಮಾಡಿ ಬೇರೆ ತಾಲ್ಲೂಕಿನ ರೈತರೊಬ್ಬರಿಗೆ 75 ಕೆ.ಜಿ. ಅಭಿಲಾಷ  ಭತ್ತದ ಬೀಜಗಳನ್ನು ವಿತರಿಸಿದ್ದ ಕೃಷಿ ಇಲಾಖೆಯ ಸಿಬ್ಬಂದಿ ಮಲ್ಲಿಕಾರ್ಜುನ ದೇವಿಕೊಪ್ಪ ಅವರನ್ನು ಉಪವಿಭಾಗಾಧಿಕಾರಿ ತರಾಟೆಗೆ ತೆಗೆದುಕೊಂಡರು.`ಇಲ್ಲಿನ ರೈತರ ಹೆಸರಿನಲ್ಲಿ ಬಿಲ್ ಮಾಡಿ ಬೀಜಗಳನ್ನು ಮಾರಿದರೆ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ' ಎಂದರು.ಕೃಷಿ ಇಲಾಖೆಯ ಸಿಬ್ಬಂದಿ ಮಲ್ಲಿಕಾರ್ಜುನ ದೇವಿಕೊಪ್ಪ ಮಾತನಾಡಿ, `ನಮ್ಮ ಇಲಾಖೆಯ ಸಿಬ್ಬಂದಿಯೊಬ್ಬರ ಸಂಬಂಧಿಕ ರೈತರೊಬ್ಬರು ಬಂದು ಬಿತ್ತನೆ ಬೀಜಗಳನ್ನು ಕೇಳಿದ್ದರಿಂದ ಮುಂಡಗೋಡ ತಾಲ್ಲೂಕಿನ ರೈತನ ಹೆಸರಿನಲ್ಲಿ ಬಿಲ್ ಮಾಡಿ ಮಾರಾಟ ಮಾಡಲಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ. ಇದೊಂದು ಸಲ ಕ್ಷಮಿಸಬೇಕು' ಎಂದರು.ನಂತರ ಕೃಷಿ ಇಲಾಖೆಯಲ್ಲಿ ಸಂಗ್ರಹವಿರುವ ಬಿತ್ತನೆ ಬೀಜಗಳನ್ನು ಪರಿಶೀಲಿಸಿದ ಉಪವಿಭಾಗಾಧಿಕಾರಿ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜಗಳನ್ನು ವಿತರಿಸಿ ಎಂದು ಸಿಬ್ಬಂದಿಗೆ ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.