ಸೋಮವಾರ, ಏಪ್ರಿಲ್ 12, 2021
23 °C

ಬಿತ್ತನೆ ಬೀಜ ಸಮಸ್ಯೆ ಸಂಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ಬಿತ್ತನೆ ಮಾಡಿದ ಬೀಜ ಈಗ ಹಾಳಾಗುತ್ತಿದೆ. ಮತ್ತೆ ಮಳೆ ಬಂದರೆ ಬಿತ್ತನೆ ಬೀಜ ಸಮಸ್ಯೆ ಎದುರಾಗಲಿದ್ದು, ಈ ಸಮಸ್ಯೆ ನಿವಾರಣೆಗೆ ಕೃಷಿ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು, ಶಿಕ್ಷಣ ಇಲಾಖೆ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆಗೆ ಇದೇ 19ರಂದು ಇಲಾಖೆ ಸಭೆಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಕರೆಯಬೇಕು, ನಿಜಾಮರ ಕಾಲದಿಂದಲೂ ಈಗಿರುವ ಜಾಗೆ ಆರೋಗ್ಯ ಇಲಾಖೆಗೆ ಸೇರಿದ್ದಾಗಿದ್ದರೆ ದಾಖಲಾತಿ ಪರಿಶೀಲಿಸಿ ನ್ಯಾಯಾಲಯದ ಮೊರೆ ಹೋಗಿಯಾದರೂ ಜಿಲ್ಲಾ ಆರೋಗ್ಯ ಇಲಾಖೆ ತನ್ನ ಜಾಗೆ ಉಳಿಸಿಕೊಳ್ಳಲು ಡಿಎಚ್‌ಒ ಪ್ರಯತ್ನಿಸಬೇಕು ಎಂಬುದು ಸೇರಿದಂತೆ ಹಲವು ಸೂಚನೆಗಳನ್ನು ಜಿ.ಪಂ. ಸಿಇಓ ಮನೋಜಕುಮಾರ್ ಜೈನ್ ಅಧಿಕಾರಿಗಳಿಗೆ ನೀಡಿದರು.ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ತನ್ವೀರಾ ಬಷಿರುದ್ದೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ 12ನೇ ಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ಮದ್ಯದ ಅಂಗಡಿಗಳು ಹೆಚ್ಚಾಗುತ್ತಿವೆ. ಅನುಮತಿ ಮತ್ತು ಅನುಮತಿ ರಹಿತ ಎರಡೂ ಸೇರಿವೆ. ಬಡ ಜನತೆ ಕುಡಿತಕ್ಕೆ ಬಲಿಯಾಗಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದಾರೆ. ಅಕ್ರಮ ಮದ್ಯದ ಅಂಗಡಿಗಳ ಮೇಲೆ ಅಬಕಾರಿ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಜಿ.ಪಂ ಅಧ್ಯಕ್ಷೆ ತನ್ವೀರಾ ಬಷಿರುದ್ದೀನ್ ಸೂಚಿಸಿದರು.ಸಭೆಗೆ ಆಗಮಿಸುವ ಅಧಿಕಾರಿಗಳು ಪರಿಪೂರ್ಣ ಮಾಹಿತಿ ತರಬೇಕು. ಹಾರಿಕೆ ಉತ್ತರ ನೀಡುವುದು ಸರಿಯಲ್ಲ. ತಮ್ಮ ಬದಲಾಗಿ ಬೇರೆ ಪ್ರತಿನಿಧಿ ಕಳುಹಿಸುವಾಗ ಪೂರ್ವ ಅನುಮತಿ ಅವಶ್ಯ. ಇದನ್ನು ಉಲ್ಲಂಘನೆ ಮಾಡುವ ಅಧಿಕಾರಿಗಳ ವಿರುದ್ಧ ಇಲಾಖೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.ಮಳೆಯಾದಾರಿತ ರಾಷ್ಟ್ರೀಯ ಜಲಾನಯನ ಆಬಿವ್ಯದ್ದಿ ಯೋಜನೆಯಡಿಯಲ್ಲಿ ವಾರ್ಷಿಕ ಗುರಿ ರೂ 36.61 ಲಕ್ಷಗಳಂತೆ ಅನುದಾನ ಬಿಡುಗಡೆಯಾಗಿದ್ದು, ಮಾರ್ಚ 2012ರೊಳಗೆ ಅನುದಾನ ವಿನಿಯೋಗಿಸಲು ಹಾಗು ಯೋಜಿತ ಕಾರ‌್ಯಕ್ರಮಗಳನ್ನು ಪೂರ್ಣಗೊಳಿಸಲು ಸೂಚಿಸಿದಂತೆ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಬಂಜರು ಭೂಮಿ ಅಭಿವ್ಯದ್ದಿ ಯೋಜನೆಯಡಿ  ಮಾರ್ಚ 2012ರವರೆಗೆ ಹೆಚ್ಚಿನ ಪ್ರಗತಿ ಸಾದಿಸಲಾಗಿದೆ ಎಂದು ಜಲಾನಯನ ಆಬಿವ್ಯದ್ದಿ ಆದಿಕಾರಿಗಳು ಸಭೆಗೆ ತಿಳಿಸಿದರು.ಶಿಕ್ಷಣ ಇಲಾಖೆಯಲ್ಲಿ ಮಂಜೂರಾದ 10 ಶಾಲಾ ಕಂಪೌಂಡ್ ಕಾಮಗಾರಿಗಳಲ್ಲಿ 3 ಪೂರ್ಣಗೊಂಡಿದ್ದು, ಇನ್ನು 7 ಕಾಮಗಾರಿ ಪ್ರಗತಿಯಲ್ಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಭೆಗೆ ಹೇಳಿದರು.ದಾಖಲಾತಿ ಕುರಿತು ಇನ್ನೂ ಸರಿಯಾದ ವಿವರಗಳು ಬಂದಿರುವುದಿಲ್ಲ ಅವುಗಳನ್ನು ಕ್ರೋಢಿಕರಿಸಿ ಸಭೆಗೆ ತಿಳಿಸಲಾಗುವದು ಹಾಗು ಶಿಕ್ಷಕರ ಸಮಸ್ಯೆ ಎದುರಿಸುತ್ತಿರುವ ಶಾಲೆಗಳಿಗೆ ಜಿಲ್ಲೆಗೆ 236 ಶಿಕ್ಷಕರ ನೇಮಕಾತಿ ಕ್ರಮ ಜರುಗಿಸಲಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರಾದ ಭೂಪನಗೌಡ, ಜಾಫರ ಪಟೇಲ್ ಅವರ ಪ್ರಶ್ನೆಗೆ ಉತ್ತರಿಸಿದರು.1,67,000 ಸಸಿ ನೆಡುವ ಗುರಿ:  ಈ ಸಾಲಿನಲ್ಲಿ 1,67,000 ಸಸಿ ನೆಡುವ ಗುರಿ ಹೊಂದಲಾಗಿದ್ದು,  ಇದಕ್ಕಾಗಿ 130 ಲಕ್ಷ ರೂ ಅನುದಾನ ನಿಗದಿಯಾಗಿದೆ. ಮಳೆ ಇಲ್ಲದ ಪ್ರಯುಕ್ತ ಕಾರ್ಯ ಆರಂಭವಾಗಿಲ್ಲ. ಸಸಿಗಳು ತಯಾರಾಗಿದ್ದು, ಮಳೆ ಬಂದ ಕೂಡಲೇ ಕ್ರಮ ಜರುಗಿಸಲಾಗುವದೆಂದು  ಎಂದು ಅರಣ್ಯಾಧಿಕಾರಿ ಶಿವಕುಮಾರ ಅವರು ಸಭೆಗೆ ತಿಳಿಸಿದರು. ಸಿ ಇ ಓ ಮನೋಜ ಜೈನ ಅವರು ಮಾತನಾಡಿ ಎಲ್‌ಲ್ ತಾಲೂಕು ಕಾರ‌್ಯ ನಿರ್ವಾಹಕ ಆಧಿಕಾರಿಗಳು, ಹಾಗು ತೋಟಗಾರಿಕೆ ಆದಿಕಾರಿಗಳು ಮಳೆಗಾಲ ಆರಂಭವಾಗುತ್ತಿದ್ದಂತೆ ಸಸಿಗಳನ್ನು ನೆಡುವ ಕಾರ‌್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂದು ಸೂಚಿಸಿದರು.ಮಳೆಗಾಲ ಆರಂಭವಾಗಿದ್ದು, ಸಾಂಕ್ರಾಮಿ ರೋಗಗಳು ಹರಡದಂತೆ ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಸಲಹೆ ನೀಡಿದರು.ಸಭೆಯಲ್ಲಿ ಉಪಾಧ್ಯಕ್ಷೆ ಹರ್ಷಾ ಜಗನ್ನಾಥರಾಯ ಪಾಟೀಲ್,  ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಭೂಪನಗೌಡ ಪಾಟೀಲ್, ಕೃಷಿ ಕೈಗಾರಿಕೆ ಸ್ಥಾಯಿ ಸಮಿತಿ ಅದ್ಯಕ್ಷ ಜಾಫರ ಅಲಿ ಪಟೇಲ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪದ್ಮಾವತಿ ಅಯ್ಯನಗೌಡ, ಯೋಜನಾಧಿಕಾರಿ ಡಾ. ರೋಣಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.