ವಡೋದರ: ಮೋತಿಭಾಗ್ ಕ್ರೀಡಾಂಗಣದಲ್ಲಿ ಬಿಸಿಲಿನ ಕಾವು ಹೆಚ್ಚಾಗುತ್ತಿದ್ದಂತೆ ಬಲಗೈ ಬೌಲರ್ ಸ್ಟುವರ್ಟ್ ಬಿನ್ನಿ ಅವರ `ವೇಗ~ವೂ ಹೆಚ್ಚಾಗುತ್ತಿತ್ತು. ಅವರ ದಾಳಿಯ ಮುಂದೆ ಬರೋಡದ ಬ್ಯಾಟ್ಸ್ಮನ್ಗಳು ಪಟಪಟನೇ ಉರುಳಿ ಬಿದ್ದರು. ಇದರಿಂದ ಕರ್ನಾಟಕ ಶನಿವಾರ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು. ಆದರೆ, ಉತ್ತಮ ಆರಂಭ ಪಡೆದಿದ್ದ ಬರೋಡ ಮಂಕಾಯಿತು.

ವಾಣಿವಿಲಾಸ್ ಅರಮನೆ ಸಂಕೀರ್ಣದಲ್ಲಿರುವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ `ಬಿ~ ಗುಂಪಿನ ಪಂದ್ಯದಲ್ಲಿ ಎರಡನೇ ದಿನ ಕರ್ನಾಟಕದ ಬೌಲರ್ಗಳು ಪಾರಮ್ಯ ಮೆರೆದರು.

ಮೊದಲ ದಿನ ಕ್ಯಾಚ್ ಕೈ ಚೆಲ್ಲಿ ಮಾಡಿಕೊಂಡಿದ್ದ ಎಡವಟ್ಟನ್ನು ಪುನರಾವರ್ತಿಸಲಿಲ್ಲ. ಚುರುಕಾದ ಬೌಲಿಂಗ್ ನಡುವೆಯೂ ಬರೋಡ ಮೊದಲ ಇನಿಂಗ್ಸ್ನಲ್ಲಿ 123.4 ಓವರ್ಗಳಲ್ಲಿ 406 ರನ್ ಕಲೆ ಹಾಕಿತು.

ಐದು ವಿಕೆಟ್ ಕಬಳಿಸಿದ ಬಿನ್ನಿ ಹಾಗೂ ಮೂರು ವಿಕೆಟ್ ಪಡೆದ ಕೆ.ಪಿ. ಅಪ್ಪಣ್ಣ ಎದುರಾಳಿ ತಂಡವನ್ನು ಆಲ್ ಔಟ್ ಮಾಡಿ ಸಂಭ್ರಮದಿಂದಲೇ ಭೋಜನಕ್ಕೆ ತೆರಳಿದರು. ಈ ಮೊತ್ತವನ್ನು ಬೆನ್ನು ಹತ್ತಿರುವ ಕರ್ನಾಟಕ ಎರಡನೇ ದಿನದಾಟದ ಅಂತ್ಯಕ್ಕೆ 55 ಓವರ್ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 148 ರನ್ ಗಳಿಸಿದೆ.

ನಿರೀಕ್ಷೆ ಹೊತ್ತ ರಾಬಿನ್-ಮನೀಷ್: ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸುವ ಲೆಕ್ಕಾಚಾರ ಹೊಂದಿರುವ ಕರುನಾಡಿನ ತಂಡದ ಕನಸಿಗೆ ಆರಂಭಿಕ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಹಾಗೂ ಮನೀಷ್ ಪಾಂಡೆ ಕಾವಲಾಗಿದ್ದಾರೆ. ಎರಡು ಜೀವದಾನದ ಲಾಭ ಪಡೆದ ರಾಬಿನ್ ಅರ್ಧಶತಕ ಗಳಿಸಿದ್ದಾರೆ.

ಲಾಂಗ್ ಆನ್ ಹಾಗೂ ಲೆಗ್ ಸೈಡ್ನಲ್ಲಿ ಆಕರ್ಷಕ ಹೊಡೆತಗಳನ್ನು ಬಾರಿಸಿದ ರಾಬಿನ್ 19 ರನ್ ಗಳಿಸಿದ್ದಾಗ ಮೊದಲ ಜೀವದಾನ ಪಡೆದರು. ಎರಡನೇ ಸ್ಲಿಪ್ನಲ್ಲಿದ್ದ ಆದಿತ್ಯ ಕ್ಯಾಚ್ ಕೈ ಚೆಲ್ಲಿದರು. 53ನೇ ಓವರ್ನಲ್ಲಿ ವೇಗಿ ಇರ್ಫಾನ್ ಪಠಾಣ್ ಎಸೆತದಲ್ಲಿ ವಿಕೆಟ್ ಕೀಪರ್ ಪಿನಲ್ ಷಾ ಕೂಡಾ ಕ್ಯಾಚ್ ಕೈ ಬಿಟ್ಟು ಕರ್ನಾಟಕದ ಆಟಗಾರನಿಗೆ ಇನ್ನೊಂದು ಜೀವದಾನ ನೀಡಿದರು.

ಬರೋಡ ತಂಡದವರು ಜೀವದಾನ ನೀಡಿದ ತಪ್ಪಿಗೆ ದೊಡ್ಡ ಬೆಲೆ ತೆರಬೇಕಾಯಿತು. ಈ ಅಂಶವು ಪಂದ್ಯದ ತಿರುವಿಗೆ ಮಹತ್ವದ ಕಾರಣವಾಯಿತು. ಇಲ್ಲವಾದರೆ, ಕರ್ನಾಟಕ ಆರಂಭಿಕ ಸಂಕಷ್ಟಕ್ಕೆ ಸಿಲುಕುತ್ತಿತ್ತು. ಬಲಗೈ ಬ್ಯಾಟ್ಸ್ಮನ್ ಕೆ.ಬಿ. ಪವನ್ (56, 116 ಎಸೆತ, 8 ಬೌಂಡರಿ) ಹಾಗೂ ರಾಬಿನ್ (ಔಟಾಗದೆ 67, 166 ಎಸೆತ, 10 ಬೌಂಡರಿ) ಕಲೆ ಹಾಕಿ ಬುನಾದಿ ಗಟ್ಟಿಗೊಳಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 38.1 ಓವರ್ಗಳಲ್ಲಿ 112 ರನ್ಗಳನ್ನು ಪೇರಿಸಿತು.

ವೇಗಿ ಗಗನ್ದೀಪ್ ಓವರ್ನಲ್ಲಿ ಔಟಾದ ಪವನ್ 161 ನಿಮಿಷ ಕ್ರೀಸ್ಗೆ ಕಚ್ಚಿಕೊಂಡು ನಿಂತು ಬರೋಡದ ಬೌಲರ್ಗಳನ್ನು ಕಾಡಿದರು. ಅವಕಾಶ ಸಿಕ್ಕಾಗಲೆಲ್ಲಾ ಚೆಂಡನ್ನು ಬೌಂಡರಿಗೆ ಅಟ್ಟಿದರು. ಆಫ್ ಸೈಡ್ನಲ್ಲಿ ಸಿಡಿಸಿದ ನಾಲ್ಕು ಬೌಂಡರಿಗಳು ಹಾಗೂ ಅವರ ತಾಳ್ಮೆಯ ಆಟ ಗಮನ ಸೆಳೆಯಿತು.

ಬಲಗೈ ಬ್ಯಾಟ್ಸ್ಮನ್ ಗಣೇಶ್ ಸತೀಶ್ ಐದು ರನ್ ಗಳಿಸಿದ್ದಾಗ ಎಡಗೈ ಬೌಲರ್ ಗಗನ್ದೀಪ್ ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು. ಗಣೇಶ್ ಔಟಾದ ನಂತರ ಬಂದ ಮನೀಷ್ ರಾಜ್ಯದ ಇನಿಂಗ್ಸ್ ಮುನ್ನಡೆ ಕನಸಿಗೆ ಬೆನ್ನೆಲುಬಾಗಿದ್ದಾರೆ. ಅವರು ಎರಡು ಬೌಂಡರಿ ಸೇರಿದಂತೆ ಹತ್ತು ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.

ಮಧ್ಯಾಹ್ನದ ಚಹಾ ವಿರಾಮದ ವೇಳೆಗೆ 25 ಓವರ್ಗಳಲ್ಲಿ 75 ರನ್ ಗಳಿಸಿದ್ದ ರಾಜ್ಯ ತಂಡ ನಂತರ ವೇಗವಾಗಿ ರನ್ ಗಳಿಸುವತ್ತ ಗಮನ ನೀಡಿತು.

ಬರೋಡದ ಬೌಲಿಂಗ್ ಇನಿಂಗ್ಸ್ ಆರಂಭಿಸಿದ ಎಡಗೈ ವೇಗಿ ಹಾಗೂ ಸ್ಥಳೀಯ ಜನರ ನೆಚ್ಚಿನ `ಭಯ್ಯಾ~ ಬೌಲಿಂಗ್ನಲ್ಲೂ ಮೋಡಿ ಮಾಡುತ್ತಾರೆಂದು ನಿರೀಕ್ಷೆ ಮಾಡಲಾಗಿತ್ತು. ಮೊದಲ ದಿನ ಅವರಿಗೆ ವಿಕೆಟ್ ಕೆಡವಲು ಸಾಧ್ಯವಾಗಲಿಲ್ಲ. ಆದರೆ, ಎದುರಾಳಿ ತಂಡಕ್ಕೆ ಹೆಚ್ಚು ರನ್ ಬಿಟ್ಟುಕೊಡಲಿಲ್ಲ. ಇರ್ಫಾನ್ ಮೊದಲ ಸ್ಪೆಲ್ನಲ್ಲಿ 7 ಓವರ್ಗಳಲ್ಲಿ 11 ರನ್ ಮಾತ್ರ ನೀಡಿದರು.

ಕಳಚಿ ಬಿದ್ದ ಜೊತೆಯಾಟ: ಮೊದಲ ದಿನದ ಜೊತೆಯಾಟದಲ್ಲಿ ಕರ್ನಾಟಕದ ಬೌಲರ್ಗಳ ಬೆವರಿಳಿಸಿದ್ದ ಇರ್ಫಾನ್ ಪಠಾಣ್ ಹಾಗೂ ಆದಿತ್ಯ ವಾಗ್ಮೋಡ್ ಜೋಡಿಯನ್ನು ಶನಿವಾರ ವಿನಯ್ ಪಡೆಯ ಬೌಲರ್ಗಳು ಬೇಗನೇ ಅಲುಗಿಸಿದರು. ಆದಿತ್ಯ 129 ರನ್ ಗಳಿಸಿದ್ದಾಗ ವೇಗಿ ಬಿನ್ನಿ ಪೆವಿಲಿಯನ್ ಹಾದಿ ತೋರಿಸಿದರು. ಈ ಬೌಲರ್ನ ವೇಗಕ್ಕೆ ಮಧ್ಯದ ವಿಕೆಟ್ ಎಗರಿ ಬಿದ್ದ ರೀತಿ ಆಕರ್ಷಕವಾಗಿತ್ತು.

ಅದಿತ್ಯ ವಿಕೆಟ್ ಪತನವಾದ ನಂತರ ಇರ್ಫಾನ್ (121) ಕೂಡಾ ಹೆಚ್ಚು ಒತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ತಂಡದ ಒಟ್ಟು ಮೊತ್ತ 334 ಆಗಿದ್ದಾಗ ಬಿನ್ನಿ ಮತ್ತೊಮ್ಮೆ ತಮ್ಮ `ವೇಗ~ದ ತಾಕತ್ತು ತೋರಿಸಿದರು. ಈ ಪ್ರಮುಖ ಎರಡು ವಿಕೆಟ್ಗಳನ್ನು ಪಡೆದ ಆಲ್ರೌಂಡರ್ ಬಿನ್ನಿ ಬರೋಡ ಪಡೆಗೆ ಕಾಡಿದರು. ಬೌಲಿಂಗ್ನಲ್ಲೂ ನಿಖರತೆ ತೋರಿದ ಈ ವೇಗಿ ಅತ್ಯುತ್ತಮ `ಲೇನ್, ಲೆಂಗ್ತ್~ ಮತ್ತು ಯಾರ್ಕರ್ ಎಸೆದರು. 23 ಓವರ್ಗಳಲ್ಲಿ ಕೇವಲ 65 ರನ್ ನೀಡಿದ್ದೇ ಇದಕ್ಕೆ ಸಾಕ್ಷಿ.

ಮೊದಲ ದಿನ 308 ರನ್ ಕಲೆ ಹಾಕಿದ್ದ ಬರೋಡ ಎರಡನೇ ದಿನ 33.3 ಓವರ್ಗಳಲ್ಲಿ ಕೇವಲ 98 ರನ್ ಗಳಿಸಿ ಆರು ವಿಕೆಟ್ ಕಳೆದುಕೊಂಡಿತು. ಏಳು ರನ್ಗಳ ಅಂತರದಲ್ಲಿ ಇರ್ಫಾನ್ ಹಾಗೂ ಆದಿತ್ಯ ವಿಕೆಟ್ ಪತನವಾಯಿತು. ಬಿನ್ನಿ ಹಾಗೂ ಅಪ್ಪಣ್ಣ ಚುರುಕಾಗಿ ದಾಳಿ ನಡೆಸಿ ಬರೋಡದ ದಿಢೀರ್ ಕುಸಿತಕ್ಕೆ ಕಾರಣರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.