ಶನಿವಾರ, ಜೂನ್ 12, 2021
24 °C

ಬಿಯರ್‌ ರಸ್ತೆಯ ಹೊಸ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮ್ಯೂಸಿಕ್ ಸಿಸ್ಟಂನಿಂದ ಹೊಮ್ಮುತ್ತಿದ್ದ ಸಂಗೀತಕ್ಕೆ ಅನುಗುಣವಾಗಿ ತಬ್ಬಿ ನೃತ್ಯ ಮಾಡುತ್ತಿದ್ದ ಯುವ ಜೋಡಿಗಳು, ಬೀದಿ ಬದಿಯಲ್ಲಿ ಕುಳಿತು ಹಿತವಾಗಿ ವಯಲಿನ್‌ ನುಡಿಸುತ್ತಿದ್ದ ಸಂಗೀತಗಾರ, ಅಲ್ಲಲ್ಲಿ ನಿಲ್ಲಿಸಲಾಗಿದ್ದ ಆಕರ್ಷಕ ಪ್ರತಿಮೆಗಳು, ಉತ್ಸವಕ್ಕೆ ಕಳೆಕಟ್ಟುವಂತೆ ಸ್ಯಾಕ್ಸೊಫೋನ್‌ ನುಡಿಸುತ್ತಿದ್ದ ಕಲಾವಿದ, ಬಾಯಿಂದ ಬೆಂಕಿ ಉಗುಳುತ್ತಾ ಜಾದೂ ತೋರುತ್ತಿದ್ದ ವಿದೂಷಕ... ಅಬ್ಬಾ ಒಂದೇ, ಎರಡೇ? ಕಣ್ಣು ಹಾಯಿಸಿದಷ್ಟೂ ದೂರ ಕಾಣುತ್ತಿದ್ದ ಸ್ಥಳದ ತುಂಬೆಲ್ಲಾ ಇಂತಹ ನೂರಾರು ದೃಶ್ಯಗಳು ಕಾಣಿಸುತ್ತಿದ್ದವು. ಇವುಗಳನ್ನೆಲ್ಲಾ ಕಣ್ತುಂಬಿಕೊಂಡ ಜನರು ರೋಮಾಂಚನಗೊಂಡಿದ್ದರು.ಇಂಥದ್ದೊಂದು ಭಿನ್ನ ಅನುಭವವನ್ನು ನಗರಿಗರಿಗೆ ದೊರಕಿಸಿಕೊಟ್ಟಿದ್ದು ‘ಲಿ ಫಿಯೆಸ್ಟಾ’ ಉತ್ಸವ. ಭಿನ್ನ ಬಗೆಯ ಯೂರೋಪ್ ಶೈಲಿಯ ಆಹಾರ ಮತ್ತು ಮನರಂಜನೆ ತಾಣ ೧೫೩, ಬಿಯರ್ ಸ್ಟ್ರೀಟ್ ವಾರಾಂತ್ಯದ ಖುಷಿಗೆ ಸಾಕ್ಷಿಯಾಯಿತು. ‘ಎಲ್ಲರ ಮನರಂಜನೆಗಾಗಿ, ಮೋಜಿಗಾಗಿ’ ಎಂಬ ಉದ್ದೇಶದೊಂದಿಗೆ ಆಯೋಜಿಸಿದ್ದ ಈ ಉತ್ಸವದಲ್ಲಿ ನಗರಿಗರು ಮನರಂಜನೆಯ ಕಡಲಿನಲ್ಲಿ ತೇಲಿದರು.ಯೂರೋಪ್‌ನ ಸಾಂಪ್ರದಾಯಿಕ ಶೈಲಿಯ ಈ ಉತ್ಸವ ಇಲ್ಲಿನವರಿಗೆ ನೈಜ ಯೂರೋಪ್ ಹಬ್ಬದ ಅನುಭವ ನೀಡಿತು. 

ಸ್ಟಿಲ್ಟ್ ವಾಕರ್ಸ್ ಮತ್ತು ಮುಖವಾಡ ಧರಿಸಿದ ಕಲಾವಿದರು, ಜೀವಂತ ಪ್ರತಿಮೆಗಳು ಮತ್ತು ಬೆಂಕಿ ಸಾಹಸ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದರು. ಸ್ಟ್ರೀಟ್ ಮ್ಯೂಸಿಷಿಯನ್‌ಗಳು ಮತ್ತು ಟ್ಯಾಂಗೊ ಡಾನ್ಸರ್ಗಳ ಪ್ರದರ್ಶನ ಮೈನವಿರೇಳಿಸುವಂತಿತ್ತು. ಎಲ್ಲ ವಯೋಮಾನದವರು, ಕುಟುಂಬ ವರ್ಗದವರು, ಸ್ನೇಹಿತರೆಲ್ಲಾ ಒಂದೆಡೆ ಸೇರಿ ಬಿಯರ್ ಸ್ಟ್ರೀಟ್‌ನ ಸವಿಯನ್ನು ಸವಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.