ಬಿಸಿಯೂಟ ಸೇವಿಸಿ 70 ವಿದ್ಯಾರ್ಥಿಗಳು ಅಸ್ವಸ್ಥ

ಭಾನುವಾರ, ಜೂಲೈ 21, 2019
22 °C

ಬಿಸಿಯೂಟ ಸೇವಿಸಿ 70 ವಿದ್ಯಾರ್ಥಿಗಳು ಅಸ್ವಸ್ಥ

Published:
Updated:

ಕೋಲಾರ:  ಬಿಸಿಯೂಟಕ್ಕೆಂದು ನೀಡಿದ್ದ ಚಿತ್ರಾನ್ನ ಸೇವಿಸಿ 70 ಮಕ್ಕಳು ಅಸ್ವಸ್ಥರಾದ ಘಟನೆ ತಾಲ್ಲೂಕಿನ ದೊಡ್ಡಹಸಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.ಮಧ್ಯಾಹ್ನ ಬಿಸಿಯೂಟಕ್ಕೆಂದು ಚಿತ್ರಾನ್ನ ನೀಡಿದ ನಂತರ ಹಲವರಿಗೆ ವಾಂತಿ, ಹೊಟ್ಟೆನೋವು ಮತ್ತು ಸುಸ್ತು ಕಾಣಿಸಿಕೊಂಡಿತು. ಕೂಡಲೆ ಶಾಲೆಯ 70 ವಿದ್ಯಾರ್ಥಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಬ್ಬರು ಮಕ್ಕಳು ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಲ್ಲೆ ಉಳಿಸಿಕೊಂಡು, ಉಳಿದ ಮಕ್ಕಳನ್ನು 108 ತುರ್ತು ವಾಹನದಲ್ಲಿ ಗ್ರಾಮಕ್ಕೆ ಕಳುಹಿಸಲಾಯಿತು.ಚಿತ್ರಾನ್ನ ಸೇವಿಸಿದ ಬಳಿಕ ವಾಂತಿ, ಹೊಟ್ಟೆನೋವು ಬಂದು ಸುಸ್ತಾಯಿತು. ನನ್ನ ಹಲವು ಸಹಪಾಠಿಗಳಿಗೂ ಹಾಗೇ ಆಯಿತು. ಕೂಡಲೆ ನಮ್ಮನ್ನು ಆಸ್ಪತ್ರೆಗೆ ಕರೆತಂದರು. ಈಗಲೂ ಸುಸ್ತಾಗುತ್ತಿದೆ ಎಂದು ತೀವ್ರ ಅಸ್ವಸ್ಥಗೊಂಡ ವಿದ್ಯಾರ್ಥಿನಿ ದಾಮಿನಿ ತಿಳಿಸಿದಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry