ಸೋಮವಾರ, ಜನವರಿ 20, 2020
26 °C
ಡಿ.2ರಿಂದ ಬಿಸಿಯೂಟ ನೌಕರರ ಮುಷ್ಕರ

ಬಿಸಿ ಊಟ ಸ್ಥಗಿತ: ಕ್ಷೀರ ಭಾಗ್ಯವೂ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಸಿ ಊಟ ಸ್ಥಗಿತ: ಕ್ಷೀರ ಭಾಗ್ಯವೂ ಇಲ್ಲ

ಗುಡಿಬಂಡೆ: ಕಳೆದ ಸೋಮವಾರದಿಂದ ತಾಲ್ಲೂಕಿನಾದ್ಯಂತ ಬಿಸಿಯೂಟ ನೌಕ­ರರು ಮುಷ್ಕರ ನಡೆಸುತ್ತಿದ್ದು, ತಾಲ್ಲೂಕಿನ ಸಾಕಷ್ಟು ಶಾಲೆ ಮಕ್ಕಳು ಮಧ್ಯಾಹ್ನ ಉಪವಾಸ ಇರು­ವಂತಾ­ಗಿದೆ. ಕ್ಷೀರ ಭಾಗ್ಯ ಯೋಜನೆಯೂ ಸ್ಥಗಿತಗೊಂಡಿದೆ.ಬಿಸಿಯೂಟ ಯೋಜನೆ ಖಾಸಗೀ­ಕರಣ ವಿರೋಧಿಸಿ, ಕನಿಷ್ಠ ಕೂಲಿ, ಸೇವೆ ಕಾಯಂಗೆ ಒತ್ತಾಯಿಸಿ ಬಿಸಿಯೂಟ ನೌಕರರು ಮುಷ್ಕರ ನಡೆಸುತ್ತಿದ್ದಾರೆ.ತಾಲ್ಲೂಕಿನಲ್ಲಿ 116 ಶಾಲೆಗಳ ಸುಮಾರು 7000 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿ ಊಟ ಸೇವಿಸು­ತ್ತಿದ್ದರು. ತಾಲ್ಲೂಕಿನ ಶೇ 30ರಷ್ಟು ಶಾಲೆಗಳಲ್ಲಿ ಬಿಸಿಯೂಟ ಮುಂದು­ವರೆದಿದೆ. ಶೇ 70ರಷ್ಟು ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ಇದರಿಂದ ಶಾಲಾ ಮಕ್ಕಳು ಉಪವಾಸ ಇರಬೇಕಾದ ಪರಿಸ್ಥಿತಿ ಇದೆ.ಸರ್ಕಾರಿ ಶಾಲೆಗಳಲ್ಲಿ ಅಡುಗೆ ಮಾಡುತ್ತಿರುವ ಬಿಸಿಯೂಟ ನೌಕರ­ರಿಗೆ ಸೂಕ್ತ ವೇತನ, ಸೇವಾ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿ ಶಾಲೆಗೆ ಒಬ್ಬರು ಮುಖ್ಯ ಅಡುಗೆಯವರು, ಅಡುಗೆ ಸಹಾಯಕ­ರನ್ನು ನೇಮಿಸಲಾಗಿದೆ. ತಿಂಗಳಿಗೆ ₨ 1,100 ನೀಡಲಾಗುತ್ತಿದೆ. ಈ ರೀತಿ ವರ್ಷ­ದಲ್ಲಿ 10 ತಿಂಗಳು ಮಾತ್ರ ವೇತನ ನೀಡಲಾಗುತ್ತಿದೆ.ಮುಷ್ಕರ ಯಾವಾಗ ನಿಲ್ಲಬಹುದು ಎಂಬ ಮಾಹಿತಿಯೂ ಇಲ್ಲ. ಕೆಲವು ವಿದಾರ್ಥಿಗಳು ಇತ್ತೀಚೆಗೆ ಮನೆಯಿಂದ ಊಟ ಕಟ್ಟಿಕೊಂಡು ಬರುತ್ತಿದ್ದಾರೆ. ಬಡ ವಿದ್ಯಾರ್ಥಿಗಳ ಮೇಲೆ ಮುಷ್ಕರ ಗಂಭೀರ ಪರಿಣಾಮ ಉಂಟು­ಮಾಡಿದೆ.

ಪ್ರತಿಕ್ರಿಯಿಸಿ (+)