ಬಿಹಾರದಲ್ಲಿ ಅಧಿಕಾರಿಗಳಿಗೆ ಸರ್ಕಾರದ ಕಟ್ಟೆಚ್ಚರಿಕೆ

7

ಬಿಹಾರದಲ್ಲಿ ಅಧಿಕಾರಿಗಳಿಗೆ ಸರ್ಕಾರದ ಕಟ್ಟೆಚ್ಚರಿಕೆ

Published:
Updated:

ಪಟ್ನಾ (ಐಎಎನ್‌ಎಸ್): ಮಾವೊವಾದಿಗಳು ಒರಿಸ್ಸಾದಲ್ಲಿ ಜಿಲ್ಲಾಧಿಕಾರಿಯನ್ನು ಅಪಹರಿಸಿರುವ ಹಿನ್ನೆಲೆಯಲ್ಲಿ ಬಿಹಾರದಲ್ಲೂ ನಕ್ಸಲ್‌ಪೀಡಿತ ಜಿಲ್ಲೆಗಳ ಉನ್ನತ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಸ ಮಾಡುವಾಗ ಎಚ್ಚರ ವಹಿಸಲು ಸರ್ಕಾರ ಸೂಚಿಸಿದೆ. ಬಿಹಾರದ 38 ಜಿಲ್ಲೆಗಳಲ್ಲಿ 34 ಜಿಲ್ಲೆಗಳು ನಕ್ಸಲ್ ಹಿಂಸಾಚಾರದಿಂದ ತತ್ತರಿಸಿದ್ದು ಈ ಭಾಗಗಳಲ್ಲಿರುವ ಉನ್ನತ ಅಧಿಕಾರಿಗಳು ತಮ್ಮ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯಸರ್ಕಾರ ಕಿವಿಮಾತು ಹೇಳಿರುವುದಾಗಿ  ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಚೇರಿಯ ಅಧಿಕಾರಿಯೊಬ್ಬರು ಶನಿವಾರ ಇಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry