ಪಟ್ನಾ (ಐಎಎನ್ಎಸ್): ಅಂತರರಾಷ್ಟ್ರೀಯ ಬಿಲ್ ಮತ್ತು ಮಿಲಿಂದಾ ಗೇಟ್ಸ್ ಪ್ರತಿಷ್ಠಾನಕ್ಕೆ ದೇಣಿಗೆ ಸಂಗ್ರಹಿಸಲು ಬುಧವಾರ ಇಲ್ಲಿಗೆ ಆಗಮಿಸಿದ ಸಾಫ್ಟ್ವೇರ್ ದೈತ್ಯಸಂಸ್ಥೆ ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ಗೇಟ್ಸ್ ಮತ್ತು ಪತ್ನಿ ಮಿಲಿಂದಾ ಬುಧವಾರ ಕೆಲವು ಗ್ರಾಮಗಳಿಗೂ ಭೇಟಿ ನೀಡಿದರು.

ಪಟ್ನಾಗೆ ಆಗಮಿಸುತ್ತಿದ್ದಂತೆ ಈ ದಂಪತಿ ಸಮೀಪದ ದಾನಪುರ ಉಪ ವಿಭಾಗದ ಜಮ್ಸಾತ್ ಮತ್ತು ಸಬ್ಜಪುರ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಜತೆ ಮಾತುಕತೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಲ್ ಗೇಟ್ಸ್, ಬಿಹಾರ ಸರ್ಕಾರದ ಸಹಭಾಗಿತ್ವದೊಂದಿಗಿನ ತಮ್ಮ ಪ್ರತಿಷ್ಠಾನದ ಆರೋಗ್ಯ ಕಾರ್ಯಕ್ರಮವು ಇಲ್ಲಿ ಜನರಿಗೆ ಯಾವ ರೀತಿ ಉಪಯೋಗವಾಗುತ್ತಿದೆ ಎಂಬುದನ್ನು ಅರಿಯಲು ಬಂದಿರುವುದಾಗಿ ಹೇಳಿದರು.

‘ಗ್ರಾಮಸ್ಥರ ಜತೆ ಮಾತುಕತೆ ನಡೆಸಿ ಅವರ ಸಮಸ್ಯೆಗಳ ಬಗ್ಗೆ ತಿಳಿಯಲು ಯತ್ನಿಸಿದರು’ ಎಂದು ಬಿಲ್ ಗೇಟ್ಸ್ಜಿಲ್ಲೆಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ರೈತರಿಗೆ ನೆರವು ನೀಡುವ ಸಿಎಸ್ಐಎಸ್ಎ ಸಂಸ್ಥೆಗೂ ಅವರು ಭೇಟಿ ನೀಡಿದರು. ಜಾರಿಯಲ್ಲಿರುವ ಪ್ರತಿಷ್ಠಾನದ ಯೋಜನೆಯ ಬಗ್ಗೆ ಸಮುದಾಯ ಆರೋಗ್ಯ ಕಾರ್ಯಕರ್ತರು ಮತ್ತು ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ನಂತರ ಅವರು ಮುಖ್ಯಮಂತ್ರಿ ನಿತೀಶ್ಕುಮಾರ್, ಹಿರಿಯ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.