ಮಂಗಳೂರು: ಹ್ಯಾಟ್ರಿಕ್ ದಾಖಲೆಗಳೊಂದಿಗೆ ಮಿಂಚಿದ ಮಾನ್ಯಾ ವಾದ್ವಾ ಗಳಿಸಿಕೊಟ್ಟ 3 ಚಿನ್ನದ ಪದಕಗಳೊಂದಿಗೆ ಕರ್ನಾಟಕದ ಈಜುಪಟುಗಳು ನಗರದಲ್ಲಿ ಶನಿವಾರ ಆರಂಭಗೊಂಡ ರಾಷ್ಟ್ರೀಯ 5ನೇ ಫಿನ್ ಸ್ವಿಮ್ಮಿಂಗ್ ಚಾಂಪಿಯನ್ಷಿಪ್ನಲ್ಲಿ 9 ಚಿನ್ನದೊಂದಿಗೆ ಒಟ್ಟು 22 ಪದಕಗಳನ್ನು ಗಳಿಸಿ ಪದಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ವಿಒನ್ ಈಜು ಕೇಂದ್ರ, ಭಾರತ ಅಂಡರ್ ವಾಟರ್ ಸ್ಪೋರ್ಟ್ಸ್ ಫೆಡರೇಷನ್ ಮತ್ತು ಕರ್ನಾಟಕ ಫಿನ್ಸ್ವಿಮ್ಮಿಂಗ್ ಸಂಸ್ಥೆ ಆಯೋಜಿಸಿರುವ ಚಾಂಪಿಯನ್ಷಿಪ್ನಲ್ಲಿ ಬೆಂಗಳೂರಿನ ರಾಜ್ ವಾದ್ವ ಮತ್ತು ಮಂಜುಳಾ ಅವರ ಪುತ್ರಿ, ಡಿಪಿಎಸ್ನ 8ನೇ ಗ್ರೇಡ್ ವಿದ್ಯಾರ್ಥಿನಿ ಮಾನ್ಯಾ ಜೂನಿಯರ್ ‘ಡಿ’ ವಿಭಾಗದ 50 ಮೀಟರ್ಸ್ ಸರ್ಫೇಸ್ ಸ್ವಿಮ್ಮಿಂಗ್ ಮತ್ತು 200 ಮೀ ಬೈಫಿನ್ಸ್ನಲ್ಲಿ ಚಿನ್ನ ಗೆದ್ದುಕೊಂಡರು. 4x100 ಮೀ ಬೈಫಿನ್ ರಿಲೆಯಲ್ಲಿ ದಾಖಲೆಯೊಂದಿಗೆ ಚಿನ್ನ ಗೆದ್ದ ಕರ್ನಾಟಕ ತಂಡದಲ್ಲೂ ಅವರು ಇದ್ದರು.

ಮುಂಜಾನೆ ಚಳಿಯಲ್ಲಿ ಆರಂಭಗೊಂಡ ದಿನದ ಮೊದಲ ಸ್ಪರ್ಧೆಯಲ್ಲೇ ಕರ್ನಾಟಕ ಪದಕ ಗೆದ್ದಿತು. ಪುರುಷರ ‘ಎ’ ವಿಭಾಗದ 800 ಮೀಟರ್ಸ್ ಬೈಫಿನ್ಸ್ನಲ್ಲಿ ಮಹಮ್ಮದ್ ಅಬ್ದುಲ್ ಬಾಸಿತ್ ಬೆಳ್ಳಿ ಪದಕ ಗಳಿಸಿದರು. ಒಡಿಶಾದ ಅನ್ಶುಮನ್ ಅವರ ಪ್ರಬಲ ಪೈಪೋಟಿ ಮೀರಿ ಅವರು ಕರ್ನಾಟಕದ ಖಾತೆ ತೆರೆದರು. 9 ಚಿನ್ನ, 7 ಬೆಳ್ಳಿ ಮತ್ತು 6 ಕಂಚಿನ ಪದಕ ಗೆದ್ದುಕೊಂಡ ಕರ್ನಾಟಕ 96 ಪಾಯಿಂಟ್ ಗಳಿಸಿದೆ. 19 ಚಿನ್ನ, 23 ಬೆಳ್ಳಿ ಮತ್ತು 18 ಕಂಚಿನ ಪದಕಗಳೊಂದಿಗೆ 197 ಪಾಯಿಂಟ್ ಗಳಿಸಿರುವ ಪಶ್ಚಿಮ ಬಂಗಾಳ ಅಗ್ರಸ್ಥಾನದಲ್ಲಿದೆ. ಗೋವಾ ಮತ್ತು ಉತ್ತರಪ್ರದೇಶ ತಲಾ 3 ಚಿನ್ನ ಗಳಿಸಿದೆ.

ಜೂನಿಯರ್ ‘ಡಿ’ ವಿಭಾಗದ 50 ಮೀಟರ್ಸ್ ಸರ್ಫೇಸ್ ಸ್ವಿಮ್ಮಿಂಗ್ನಲ್ಲಿ ಮಾನ್ಯ 25:65 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಪಶ್ಚಿಮ ಬಂಗಾಳದ ಜೋಯಾ ಜನ್ನತ್ 2023ರಲ್ಲಿ (25:71ಸೆ) ಮಾಡಿದ್ದ ದಾಖಲೆಯನ್ನು ಮಾನ್ಯಾ ಮುರಿದರು. 200 ಮೀ ಬೈಫಿನ್ಸ್ನಲ್ಲಿ ಉತ್ತರಾಖಂಡದ ರಾವತ್ ಕಳೆದ ವರ್ಷ ಮಾಡಿದ್ದ ದಾಖಲೆಯನ್ನು ಹಿಂದಿಕ್ಕಿದ ಮಾನ್ಯಾ 2ನಿ 8:42 ಸೆಕೆಂಡುಗಳಲ್ಲಿ ಗುರಿ ಸಾಧಿಸಿದರು.

ರಿಲೆಯಲ್ಲಿ ಕರ್ನಾಟಕ ತಂಡ 4ನಿ 6:57 ಸೆಕೆಂಡುಗಳ ಸಾಧನೆ ಮಾಡಿ ಪಶ್ಚಿಮ ಬಂಗಾಳವನ್ನು ಹಿಂದಿಕ್ಕಿತು. ಕಳೆದ ಬಾರಿ ಉತ್ತರಾಖಂಡ ಮಾಡಿದ್ದ ದಾಖಲೆಯನ್ನು ಮುರಿಯಿತು. ಜೂನಿಯರ್ ‘ಸಿ’ ಬಾಲಕ ಬಾಲಕಿಯರ ವಿಭಾಗದಲ್ಲೂ ಜೂನಿಯರ್ ಮತ್ತು ‘ಇ’ ಬಾಲಕರ ವಿಭಾಗದಲ್ಲೂ ಕರ್ನಾಟಕ ದಾಖಲೆಯೊಂದಿಗೆ ಚಿನ್ನ ಗಳಿಸಿತು.

ಕರ್ನಾಟಕದ ಈಜುಪಟುಗಳು ಗೆದ್ದ ವೈಯಕ್ತಿಕ ಪದಕಗಳು: ಜೂನಿಯರ್ ‘ಬಿ’ 400 ಮೀ ಬೈಫಿನ್ಸ್ನಲ್ಲಿ ಕರ್ನಾಟಕದ ದೇಶ್ನಾ ಶೆಟ್ಟಿ, ಜೂನಿಯರ್ ‘ಸಿ’ 200 ಮೀ ಬೈಫಿನ್ಸ್ನಲ್ಲಿ ಲಿಖಿತ್ ರಾಮಚಂದ್ರ ಚಿನ್ನ ಗೆದ್ದರು. ಜೂನಿಯರ್ ಬಾಲಕರ ‘ಎ’ 200 ಮೀ ಬೈಫಿನ್ಸ್ನಲ್ಲಿ ಧನ್ವಿತ್ ಮತ್ತು ಮಹಮ್ಮದ್ ಬಾಸಿತ್, ಜೂನಿಯರ್ ‘ಜಿ’ ಬಾಲಕಿಯರ 50 ಮೀ ಸರ್ಫೇಸ್ನಲ್ಲಿ ಅಹಾನಾ ಅಭಿಷೇಕ್ ಮತ್ತು ಶಾನ್ವಿ ಸಮನ್ವಿತಾ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗಳಿಸಿದರು. ಬಾಲಕಿಯರ ‘ಡಿ’ 200 ಮೀ ಬೈಫಿನ್ಸ್ನ ಸಿರಿಗೌರಿ ಬೆಳ್ಳಿ, ರೀಮಾ ಕಂಚು ಗಳಿಸಿದರು. ಜೂನಿಯರ್ ‘ಸಿ’ ವಿಭಾಗದ 50 ಮೀ ಸರ್ಫೇಸ್ನಲ್ಲಿ ಶ್ರಾವ್ಯಾ ಬೆಳ್ಳಿ ಗಳಿಸಿದರು. ಜೂನಿಯರ್ ಬಾಲಕರ ‘ಇ’ ವಿಭಾಗದ 50 ಮೀ ಸರ್ಫೇಸ್ನಲ್ಲಿ ಸುಧನ್ವ ಯುವರಾಜ್, ಜೂನಿಯರ್ ಬಾಲಕಿಯರ ‘ಬಿ’ ವಿಭಾಗದ 50 ಮೀ ಸರ್ಫೇಸ್ನಲ್ಲಿ ಅನಿಕಾ ಉದಯ್, ಜೂನಿಯರ್ ‘ಸಿ’ 200 ಮೀ ಬೈಫಿನ್ಸ್ನಲ್ಲಿ ಶ್ರಾವ್ಯಾ ಎಸ್ ಕಂಚು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.