ಸೋಮವಾರ, ಮೇ 10, 2021
26 °C

ಬೀಜ, ಗೊಬ್ಬರ ಸಂಗ್ರಹದತ್ತ ರೈತರ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವನಬಾಗೇವಾಡಿ:  ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ   ಗುರುವಾರ ಮಧ್ಯಾಹ್ನ ಮಳೆ ಸುರಿಯಿತು. ಬುಧವಾರ ರಾತ್ರಿ 11. 30ಕ್ಕೆ ಆರಂಭವಾದ ಮಳೆ ಒಂದು ಗಂಟೆಗಿಂತ ಹೆಚ್ಚು ಕಾಲ ಸುರಿಯಿತು. ಮಳೆಯ ಅರ್ಭಟ ಜೋರಾಗಿತ್ತು. ಗುರುವಾರ ಮಧ್ಯಾಹ್ನ ವೇಳೆ ಪಟ್ಟಣ ಹಾಗೂ ಸುತ್ತಮುತ್ತಲೂ ಪ್ರದೇಶಗಳಲ್ಲಿ ಕೆಲ ಹೊತ್ತು ಮಳೆಯಾಯಿತು.



ಮಳೆಯಿಂದಾಗಿ ಅಲ್ಲಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಅಲ್ಲದೇ ಜಮೀನಿನಲ್ಲಿ ನೀರು ಹರಿದು ಬದುವಿನಲ್ಲಿ ನೀರು ನಿಂತಿದೆ. ಹೊಲಗಳಲ್ಲಿ ನೀರು ನಿಂತು ಕೆರೆಯ ಪರಿಸ್ಥಿತಿ ಕಂಡುಬಂತು.




ಕಳೆದ ಒಂದು ವಾರದಿಂದ ಆರಂಭವಾದ ಮಳೆಯಿಂದಾಗಿ  ರೈತರನ್ನು ಕೃಷಿ ಚಟುವಟಿಕೆಯಲ್ಲಿ ತೊಡಗುವ ಉತ್ಸಾಹ ಹೆಚ್ಚಿಸಿದೆ. ಯಾವ ಬೆಳೆಯನ್ನು ಬೆಳೆಯಬೇಕು  ಎಂಬ ಯೋಚನೆಯಲ್ಲಿ ತೊಡಗಿದ ರೈತರು ಬೀಜ, ಗೊಬ್ಬರಗಳನ್ನು ಸಂಗ್ರಹಿಸುವತ್ತ ಗಮನ ಹರಿಸುತ್ತಿದ್ದಾರೆ. 



ತಾಲ್ಲೂಕಿನ ವಿವಿಧ ಮಳೆ ಮಾಪನ ಕೇಂದ್ರದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ದಾಖಲಾದ ಮಳೆ ವಿವಿರ ಹೀಗಿದೆ.

ಬಸವನಬಾಗೇವಾಡಿ (47.4 ಮಿ.ಮೀ), ಆಲಮಟ್ಟಿ (28.4 ಮಿ.ಮೀ), ಆರೇಶಂಕರ (17.4 ಮಿ.ಮೀ), ಹೂವಿನಹಿಪ್ಪರಗಿ (40.2 ಮಿ.ಮೀ), ಮಟ್ಟಿಹಾಳ (8 ಮಿ.ಮೀ), ಮನಗೂಳಿ ಕೆಂದ್ರದಲ್ಲಿ (19 ಮಿ.ಮೀ) ಮಳೆಯಾದ ವರದಿಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.