ಬೀದರ್: ನೆರೆಯ ಗುಲ್ಬರ್ಗ ಕ್ಷೇತ್ರದ ಸಂಸದ, ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರೈಲ್ವೆ ಖಾತೆ ಸಂಪುಟ ಸಚಿವರಾಗಿ ಹೊಣೆ ದೊರೆತ ಹಿಂದೆಯೇ ಜಿಲ್ಲೆಯ ಬಹು ನಿರೀಕ್ಷಿತ, ನೆನೆಗುದಿಯಲ್ಲಿ ಇರುವ ರೈಲ್ವೆ ಯೋಜನೆಗಳ ಕಾಮಗಾರಿ ಕೂಡ ಚುರುಕು ಪಡೆಯುವ ನಿರೀಕ್ಷೆ ಗಡಿ ಜಿಲ್ಲೆಯಲ್ಲಿ ವ್ಯಕ್ತವಾಗಿದೆ.

ಬೀದರ್-ಗುಲ್ಬರ್ಗ ರೈಲು ಮಾರ್ಗದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಬೀದರ್ ಮತ್ತು ಬೆಂಗಳೂರು ನಡುವೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂಬುದು ರೈಲು ಸಂಚಾರಕ್ಕೆ ಸಂಬಂಧಿಸಿದ ಗಡಿ ಜಿಲ್ಲೆಯಲ್ಲಿ ಕೇಳಿ ಬರುತ್ತಿರುವ ಪ್ರಮುಖ ಬೇಡಿಕೆಗಳು.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಪೂರ್ಣ ಬಜೆಟ್ ಮಂಡಿಸುವ ಅವಕಾಶ ದೊರೆಯದಿದ್ದರೂ ಬರುವ ಅಧಿವೇಶನದಲ್ಲಿ ಮಂಡಿಸಬೇಕಾಗಿರುವ ಪೂರಕ ಅಂದಾಜು ಸಂದರ್ಭದಲ್ಲಿ ಆದರೂ ಬೇಡಿಕೆಗಳಿಗೆ ಸ್ಪಂದಿಸಲು ಖರ್ಗೆ ಒತ್ತು ನೀಡಬಹುದು ಎಂಬ ನಿರೀಕ್ಷೆ ಇದೆ.

ಕನಿಷ್ಠ 12 ಗಂಟೆಗಳ ರಾತ್ರಿ ಪ್ರಯಾಣದಲ್ಲಿ ರಾಜಧಾನಿ ಬೆಂಗಳೂರು ತಲುಪುವಂತೆ ಬೀದರ್-ಬೆಂಗಳೂರು ನಡುವೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂಬುದು ಪ್ರತಿ ಬಾರಿ ರೈಲ್ವೆ ಬಜೆಟ್ ಮಂಡನೆ ಸಂದರ್ಭದಲ್ಲಿ ಕೇಳಿ ಬರುವ ಬೇಡಿಕೆ. ಪ್ರಸ್ತುತ ಇರುವ ಏಕೈಕ ರೈಲು ನಾಂದೇಡ್ನಿಂದ ಹೊರಟು ಬೀದರ್ಗೆ ಮಧ್ಯಾಹ್ನ 12.30ಕ್ಕೆ ಬರಲಿದೆ. ಇಲ್ಲಿಂದ ನಿರ್ಗಮಿಸುವ ರೈಲು ಬೆಂಗಳೂರು ತಲುಪುವುದು ಮಾರನೇ ದಿನ ಬೆಳಿಗ್ಗೆ. ಹೆಚ್ಚು ಕಡಿಮೆ 20 ಗಂಟೆಗಳ ಪ್ರಯಾಣ!

ಇದನ್ನು ತಪ್ಪಿಸಲು ರೈಲು ಬೀದರ್ನಿಂದ ಸಂಜೆ 6 ಗಂಟೆಗೆ ನಿರ್ಗಮಿಸಿ, ಬೆಳಿಗ್ಗೆ 9ರ ವೇಳೆಗೆ ಬೆಂಗಳೂರು ತಲುಪುವಂತೆ ವೇಳೆ ಪರಿಷ್ಕರಿಸಬೇಕು ಎಂಬುದು ಬೇಡಿಕೆ. ಆದರೆ, ಸಮಯ ಬದಲಿಸುವ ವಾಗ್ದಾನ ಹಲವು ಬಾರಿ ದೊರೆತಿದ್ದರೂ, ಕೃತಿ ರೂಪಕ್ಕೆ ಬಂದಿಲ್ಲ.

ಅದೇ ರೀತಿ ಬೀದರ್ - ಗುಲ್ಬರ್ಗ ನಡುವಿನ ಮಾರ್ಗ ಅಭಿವೃದ್ಧಿಯು ಬಹು ವರ್ಷಗಳ ಬೇಡಿಕೆಯೇ ಆಗಿದೆ. ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ರೈಲ್ವೆ ಸಚಿವರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಬೀದರ್-ಗುಲ್ಬರ್ಗ ರೈಲು ಮಾರ್ಗದ ಸಮೀಕ್ಷೆಯನ್ನು ಘೋಷಿಸಿದ್ದರು.

ಬಳಿಕ ಬಂಗಾರು ಲಕ್ಷ್ಮಣ್ ರೈಲ್ವೆ ಖಾತೆ ಸಚಿವರಾಗಿದ್ದಾಗ 1997ರಲ್ಲಿ ಶಿಲಾನ್ಯಾಸ ನಡೆಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಮಗಾರಿ ಇನ್ನೂ ಆಮೆಗತಿಯಲ್ಲಿದ್ದು, ಪೂರ್ಣವಾಗುವ ಸೂಚನೆಗಳೇ ಕಾಣುತ್ತಿಲ್ಲ.

ಪ್ರಸ್ತುತ, ಬೀದರ್ ಕಡೆಯಿಂದ ಹಳ್ಳಿಖೇಡ (ಕೆ) ನಡುವೆ ಕಾಮಗಾರಿ ಪೂರ್ಣಗೊಂಡಿದ್ದು, ಗುಲ್ಬರ್ಗದ ಕಡೆಯಿಂದ ಸುಲ್ತಾನ್ಬಾದ್ವರೆಗೂ ಕಾಮಗಾರಿ ಆಗಿದೆ. ಈಗ ಹಳ್ಳಿಖೇಡ (ಕೆ) ಮತ್ತು ಸುಲ್ತಾನ್ಬಾದ್ ನಡುವೆ ಕಾಮಗಾರಿ ಚುರುಕುಗೊಳ್ಳಬೇಕಾಗಿದೆ. ಭೂ ಸ್ವಾಧೀನ ಆಗದೇ ಇರುವುದು ವಿಳಂಬಕ್ಕೆ ಕಾರಣ ಎನ್ನಲಾಗಿದೆ.

ಸಂಪರ್ಕದ ವಿಸ್ತಾರ: ಒಮ್ಮೆ ಈ ಮಾರ್ಗ ಪೂರ್ಣಗೊಂಡು ಕಾರ್ಯಾರಂಭ ಮಾಡಿದರೆ ದೆಹಲಿ, ಗುಜರಾತ್ ಸಂಪರ್ಕವು ಹತ್ತಿರವಾಗಲಿದೆ. ಪ್ರಯಾಣದ ಅವಧಿಯು ಕಡಿಮೆ ಆಗಲಿದ್ದು, ಜಿಲ್ಲೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಪ್ರಗತಿಗೂ ನೆರವಾಗಲಿದೆ.

`ಖರ್ಗೆ ಅವರು ರೈಲ್ವೆ ಖಾತೆ ಸಚಿವರಾದ ಹಿನ್ನೆಲೆಯಲ್ಲಿ ನಮ್ಮ ನಿರೀಕ್ಷೆ ಹೆಚ್ಚಿದೆ. ಪ್ರಮುಖವಾದ ಈ ಎರಡು ಬೇಡಿಕೆಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಚಿವರು ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ' ಎನ್ನುತ್ತಾರೆ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ್.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ರೈಲ್ವೆ ಖಾತೆ ಹೊಣೆ ದೊರೆತಿರುವ ಹಿನ್ನೆಲೆಯಲ್ಲಿ ರೈಲ್ವೆ ಯೋಜನೆಗಳು ಚುರುಕು ಪಡೆಯುವ ಕುರಿತು ವಿಧಾನಪರಿಷತ್ತಿನ ಮಾಜಿ ಸದಸ್ಯ ಕಾಜಿ ಅರಶದ ಅಲಿ ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಗುಲ್ಬರ್ಗ ಸ್ವತಃ ಖರ್ಗೆ ಅವರೇ ಪ್ರತಿನಿಧಿಸುತ್ತಿರುವ ಕ್ಷೇತ್ರ. ಬೀದರ್ ಕ್ಷೇತ್ರವನ್ನು ಧರ್ಮಸಿಂಗ್ ಪ್ರತಿನಿಧಿಸುತ್ತಿದ್ದಾರೆ. ಈ ಭಾಗದ ಅಗತ್ಯ, ಸಮಸ್ಯೆಗಳ ಅರಿವು ಅವರಿಗೆ ಚೆನ್ನಾಗಿಯೇ ಇದೆ. ಹೀಗಾಗಿ, ಕಾಮಗಾರಿ ಚುರುಕು ಪಡೆಯಲು ಒತ್ತು ನೀಡಬಹುದು ಎಂದು ಅಭಿಪ್ರಾಯಪಟ್ಟರು.

ಪೂರಕ ಅಂದಾಜು ಮಂಡಿಸುವಾಗ ಅಥವಾ ಸಚಿವರಾಗಿ ಇರುವ ವಿಶೇಷ ಅಧಿಕಾರ ಬಳಸಿ ಸಂಪುಟದ ಅನುಮೋದನೆ ಪಡೆದೂ ಈ ಯೋಜನೆಗಳಿಗೆ ಹೆಚ್ಚಿನ ಹಣಕಾಸು ಒದಗಿಸುವ ನಿರೀಕ್ಷೆ ಇದೆ ಎಂದು ಅಭಿಪ್ರಾಯಪಟ್ಟರು.

ಒಟ್ಟಾರೆ ರೈಲ್ವೆ ಯೋಜನೆಗಳ ವಿಷಯದಲ್ಲಿ ಜಿಲ್ಲೆಯ ಜನರಿಗೆ ಪ್ರತಿ ಬಾರಿಯೂ ಭರವಸೆಯೇ ದೊರೆಯುತ್ತಿದೆ. ನೂತನ ರೈಲ್ವೆ ಸಚಿವ ಖರ್ಗೆ ಮೂಲತಃ ಜಿಲ್ಲೆಯವರೇ. ಹೀಗಾಗಿ ಕನಿಷ್ಠ ಆ ಭರವಸೆಗಳು ಇನ್ನಾದರೂ ಸಾಕಾರಗೊಳ್ಳಬಹುದು ಎಂಬ ನಿರೀಕ್ಷೆಗಳು ಗರಿಗೆದರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.