ಶನಿವಾರ, ಮೇ 15, 2021
24 °C

ಬೀದರ್ ಕೋಟೆಯಲ್ಲಿ ಬಾಲಿವುಡ್ ಬಂಟರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಹೌದು. ಬೀದರ್ ಕೋಟೆಗೆ ಬಾಲಿವುಡ್ ದಂಡು ಬಂದಿಳಿದಿದೆ.

ಕೆಲ ದಿನಗಳ ಹಿಂದಷ್ಟೆ ಕನ್ನಡ ಚಿತ್ರಗಳ ಹಾಡಿಗೆ ವೇದಿಕೆ ಒದಗಿಸಿದ್ದ ಕೋಟೆಯಲ್ಲಿ ತಮಿಳು ಹುಡುಗರು `ಮಾರಾಮಾರಿ~ ನಡೆಸಿದ್ದರು. ಇದೀಗ ಬಾಲಿವುಡ್‌ನ ಸರದಿ.ನಟ ಇಮ್ರಾನ್ ಹಾಸ್ಮಿ ಹಾಗೂ ನಟಿ ವಿದ್ಯಾಬಾಲನ್ ಅಭಿಯನದ `ಡರ್ಟಿ ಪಿಕ್ಚರ್ಸ್‌~ ಚಿತ್ರೀಕರಣಕ್ಕಾಗಿ ಬಾಲಿವುಡ್ ತಂಡ ನಗರಕ್ಕೆ ಆಗಮಿಸಿದೆ.ಕೋಟೆಯಲ್ಲಿ ಎರಡು ದಿನಗಳ ಕಾಲ ಹಾಡೊಂದರ ಚಿತ್ರೀಕರಣ ನಡೆಯಲಿದೆ. ಶುಕ್ರವಾರ ಹಾಡಿನ ಚಿತ್ರೀಕರಣಕ್ಕಾಗಿ ವಿಶೇಷ ತಯಾರಿ ನಡೆಸಲಾಗಿದ್ದು, ನಟ ಇಮ್ರಾನ್ ಬೆಡಗಿಯರೊಂದಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದರು. ಶುಕ್ರವಾರ ದಿವಾನೆ ಖಾಸ್‌ನಲ್ಲಿ ಚಿತ್ರೀಕರಣ ನಡೆದಿದ್ದು, ಶನಿವಾರ ದಿವಾನೆ ಆಮ್‌ನಲ್ಲಿ ಚಿತ್ರೀಕರಣ ನಡೆಯಲಿದೆ.ಚಿತ್ರೀಕರಣದ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಚಿತ್ರ ಪ್ರೇಮಿಗಳು ಕೋಟೆಗೆ ಆಗಮಿಸಿದರು. ಸಹ ನಟಿಯರು ತಮಿಳು, ತೆಲಗು, ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು. `ಕಿಸ್ಸ್‌ರ್ ಬಾಯ್~ ಇಮ್ರಾನ್ ಹಾಸ್ಮಿಯನ್ನು ನೋಡುವುದಕ್ಕಾಗಿ ಜನ ಸ್ಮಾರಕಗಳ ಮೇಲೆ ನಿಂತಿದ್ದರು. ಚಿತ್ರೀಕರಣದ ಚಿತ್ರವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದರು. `ಡರ್ಟಿ ಗರ್ಲ್~ ವಿದ್ಯಾಬಾಲನ್ ತಮ್ಮ ಸರದಿ ಬರುವವರೆಗೆ ಹವಾ ನಿಯಂತ್ರಿತ ಬಸ್‌ಗಳಲ್ಲಿ ಕುಳಿತು ಟಿ.ವಿ. ವೀಕ್ಷಿಸಿದರು. ಆದರೆ, ಸಾಕಷ್ಟು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದರಿಂದ ಸಮೀಪದಿಂದ ನೆಚ್ಚಿನ ನಟ- ನಟಿಯರು ಕಾಣಲು ಸಾಧ್ಯವಾಗಲಿಲ್ಲ.ಚಿತ್ರ ತಂಡ ಬೀದರ್ ತಾಲ್ಲೂಕಿನ ವಿಲಾಸಪುರ ಸಮೀಪ ಇರುವ ಜಂಗಲ್ ರೇಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದೆ. ಕಳೆದ ನಾಲ್ಕೈದು ವರ್ಷಗಳಿಂದ ನಡೆಯುತ್ತಿರುವ ಬೀದರ್ ಉತ್ಸವದಿಂದ ಬೀದರ್ ಕೋಟೆಯ ಹೆಸರು ಕರ್ನಾಟಕ ಮಾತ್ರವಲ್ಲದೆ, ಇಡೀ ದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಇದರ ಫಲಶ್ರುತಿಯಿಂದಾಗಿ ಈಗಾಗಲೇ ಕೋಟೆ ಅಂಗಳದಲ್ಲಿ ಪೆರೋಲ್, ಮನಸಾಲಾಜಿ, ಸಂಜು ವೆಡ್ಸ್ ಗೀತಾ, ಜರಾಸಂಧ, ಬಾಡಿಗಾರ್ಡ್ ಚಿತ್ರಗಳ ಚಿತ್ರೀಕರಣ ನಡೆದಿವೆ.ಇವೆಲ್ಲ ಕನ್ನಡ ಚಿತ್ರಗಳಾಗಿವೆ. ಇದರ ಜೊತೆಗೆ ಪ್ರಭುದೇವ್ ನಿರ್ದೇಶನದ ತಮಿಳು ಚಿತ್ರವೊಂದರ ಚಿತ್ರೀಕರಣ ಕೂಡ ನಡೆದಿದೆ. ಇದೀಗ ಬಾಲಿವುಡ್ ಕೂಡ ಬೀದರ್ ಕೋಟೆಯತ್ತ ಮುಖ ಮಾಡಿರುವುದು ಜಿಲ್ಲೆಯ ಜನರಲ್ಲಿ ಹೆಮ್ಮ ಉಂಟು ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.