ಸೋಮವಾರ, ಜೂಲೈ 6, 2020
24 °C

ಬೀದಿ ನಾಯಿಗೂ ದತ್ತು ಭಾಗ್ಯ...!

ಅಮಿತ್ ಮೃಗವಧೆ Updated:

ಅಕ್ಷರ ಗಾತ್ರ : | |

ಬೀದಿ ನಾಯಿಗೂ ದತ್ತು ಭಾಗ್ಯ...!

ಉದ್ಯಾನನಗರಿಯಲ್ಲಿ ಜನರಿಗೆ ಕಳ್ಳಕಾಕರಿಗಿಂತ ಬೀದಿನಾಯಿಗಳ ಭಯವೇ ಹೆಚ್ಚು. ಇದು ನಮ್ ಏರಿಯಾ ಎಂದು ರಸ್ತೆಯಲ್ಲಿ ಓಡಾಡುವವರ ಮೇಲೆ ಎರಗಲು ಬರುವ ನಾಯಿಗಳ ಹಾವಳಿಗೆ ಕಡಿವಾಣ ಹಾಕುವುದು ಬಿಬಿಎಂಪಿಗೂ ದೊಡ್ಡ ತಲೆನೋವು.ಹೀಗೆ ಕಾಡುವ ಬೀದಿನಾಯಿಗಳಿಗೆ ನಿಯಂತ್ರಣ ಹಾಕಲು ಜೆ.ಸಿ ರಸ್ತೆಯಲ್ಲಿರುವ ಜೈನ್ ವಿವಿ ಕ್ಯಾಂಪಸ್ ವಿದ್ಯಾರ್ಥಿಗಳು ಪಣತೊಟ್ಟಿದ್ದಾರೆ. ಬೀದಿ ನಾಯಿ ಮರಿಗಳನ್ನು ಹುಡುಕಿ ತಂದು ಅವುಗಳನ್ನು ಸಾಕುವಂತೆ ಪ್ರೇರೇಪಿಸುವ ಮೂಲಕ ಮರಿಗಳಿಗೆ ಆಶ್ರಯ ಒದಗಿಸುವುದರ ಜೊತೆಗೆ ಬೀದಿನಾಯಿಗಳ ಸಂಖ್ಯೆ ಬೆಳೆಯದಂತೆ ಮಾಡುವುದು ಈ ವಿದ್ಯಾರ್ಥಿಗಳ ಉದ್ದೇಶ.ಇದರ ಅಂಗವಾಗಿ 100 ವಿದ್ಯಾರ್ಥಿಗಳ ತಂಡ, ಸಮುದಾಯ ರೇಡಿಯೊ ವಾಹಿನಿ ‘ರೇಡಿಯೋ ಆಕ್ಟಿವ್ 90.4’ ಮತ್ತು  ‘ದಿ ಗೋಲ್ಡನ್ ಹಸ್ಕ್’ ಎಂಬ ಸ್ವಯಂಸೇವಾ ಸಂಸ್ಥೆ ಸಹಯೋಗದೊಂದಿಗೆ ‘ಬೆಂಗಳೂರಿನ ಬೀದಿ ಪ್ರಾಣಿಗಳ ನಿರ್ವಹಣೆ ಮತ್ತು ಕ್ಷೇಮಾಭಿವೃದ್ಧಿ’ ಯೋಜನೆಯಡಿ ನಾುಮರಿಗಳ ಉಚಿತ ದತ್ತು ಸ್ವೀಕಾರ ಶಿಬಿರ ನಡೆಸುತ್ತಿದೆ.ಇಂಥ ಒಂದು ಶಿಬಿರದಲ್ಲಿ ನಗರದ ವಿವಿಧ ಮೂಲೆಗಳ ಬೀದಿಗಳಿಂದ ಹುಡುಕಿ ತಂದಿದ್ದ ನಾಯಿಮರಿಗಳೆಲ್ಲವನ್ನೂ ಗಂಟೆಯೊಳಗೇ ಜನರು ಕೊಂಡುಕೊಂಡಿದ್ದು ವಿಶೇಷ. ನಂತರ ಬಂದವರು ನಾಯಿಮರಿಗಳು ಖಾಲಿಯಾಗಿದ್ದರಿಂದ ನಿರಾಶರಾದರು.ಬೀದಿನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಲು ಸಾರ್ವಜನಿಕರಿಂದ ಸಹಿ ಸಂಗ್ರಹವನ್ನೂ ಮಾಡುತ್ತಿದ್ದಾರೆ.‘ನಗರದಲ್ಲಿ ಬೀದಿನಾಯಿಗಳ ಕಾಟ ತೀವ್ರವಾಗಿದೆ. ನಾಯಿಗಳ ಸಂಖ್ಯೆ ಬೆಳೆಯದಂತೆ ಕಡಿವಾಣ ಹಾಕುವುದು ಇದರ ನಿಯಂತ್ರಣಕ್ಕೆ ಇರುವ ಸುಲಭ ಮಾರ್ಗಗಳಲ್ಲಿ ಒಂದು. ಅದಕ್ಕಾಗಿ ಬೀದಿ ನಾಯಿಮರಿಗಳನ್ನು ತಂದು ದತ್ತು ಸ್ವೀಕಾರ ಕಾರ್ಯಕ್ರಮ ನಡೆಸುತ್ತಿದ್ದೇವೆ. ಬೀದಿನಾಯಿಗಳ ನಿರ್ವಹಣೆ ಮತ್ತು ಕ್ಷೇಮದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ. ಬೀದಿನಾಯಿಗಳು ಸಾಕುನಾಯಿಗಳಾದಾಗ ಈ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ದೊರಕುತ್ತದೆ’ ಎನ್ನುತ್ತಾರೆ ಶಿಬಿರದ ಸಂಯೋಜಕ ವಿದ್ಯಾರ್ಥಿ ಪೀಯೂಷ್.ಈ ವಿದ್ಯಾರ್ಥಿಗಳು ಜೆ.ಸಿ.ರಸ್ತೆ, ಅರಮನೆ ರಸ್ತೆ ಮತ್ತು ಕನಕಪುರ ರಸ್ತೆಗಳಲ್ಲಿ ಬೀದಿ ನಾಯಿಮರಿಗಳಿಗೆ ಆಶ್ರಯ ಕಲ್ಪಿಸಿದ್ದಾರೆ. ಆಸಕ್ತರು ನಾಯಿಮರಿಗಳನ್ನು ಕೊಳ್ಳುವುದಲ್ಲದೆ, ತಾವು ವಾಸಿಸುವ ಪ್ರದೇಶದಲ್ಲಿ ನಾಯಿಮರಿಗಳಿದ್ದರೆ ಅವುಗಳ ಬಗ್ಗೆ 99456 86274, 22355490 ಸಂಪರ್ಕಿಸಬಹುದು ಅಥವಾ
straypas@gmail.com   ವಿಳಾಸಕ್ಕೆ ಇ-ಮೇಲ್ ಮಾಡಬಹುದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.