ಭಾನುವಾರ, ಫೆಬ್ರವರಿ 28, 2021
31 °C

ಬುದ್ಧಿಶಕ್ತಿಯಿಂದಾಗಿ ದೇಶಕ್ಕೆ ವಿಶ್ವಮಾನ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬುದ್ಧಿಶಕ್ತಿಯಿಂದಾಗಿ ದೇಶಕ್ಕೆ ವಿಶ್ವಮಾನ್ಯತೆ

ಮಂಡ್ಯ:  ಸ್ವಾತಂತ್ರ್ಯಕ್ಕೂ ಮುನ್ನ ದೇಶದ ಸಂಪತ್ತನ್ನು ಬೇರೆ ದೇಶದವರು ಕೊಳ್ಳೆ ಹೊಡೆದಿದ್ದಾರೆ. ಆದರೆ, ಬುದ್ಧಿ ಶಕ್ತಿ ತೆಗೆದುಕೊಂಡು ಹೋಗಲು ಯಾರಿಂದಲೂ ಸಾಧ್ಯವಾಗಿಲ್ಲ. ಅದರಿಂದಾಗಿ ದೇಶ ವಿಶ್ವದಲ್ಲೇ ಮಾನ್ಯತೆ ಪಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್‌ ಹೇಳಿದರು.ನಗರದ ಸರ್‌ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಹಲವು ಭಾಷೆ, ಧರ್ಮ, ಸಂಸ್ಕೃತಿ ದೇಶದಲ್ಲಿವೆ. ಅನೇಕತೆ ನಡುವಿನಲ್ಲಿಯೇ ಏಕತೆ ಇದೆ. ಒಗ್ಗಟ್ಟು, ಬೌದ್ಧಿಕ ಶಕ್ತಿ ನಮ್ಮ ದೇಶದ ಬಲವಾಗಿದೆ ಎಂದು ತಿಳಿಸಿದರು.ಬಿ.ಆರ್‌. ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದಿಂದಾಗಿ ಎಲ್ಲರಿಗೂ ಹಕ್ಕು ಹಾಗೂ ಅವಕಾಶಗಳು ಸಿಕ್ಕಿವೆ. ಮಹಾತ್ಮಾಗಾಂಧೀಜಿ ಸೇರಿ ಹಲವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ಸ್ವತಂತ್ರರಾಗಿದ್ದೇವೆ ಎಂದರು.ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನದಲ್ಲಿ ವಿಶ್ವಕ್ಕೆ ಸರಿಸಾಟಿಯಾದ ಸಾಧನೆಯನ್ನು ದೇಶ ಮಾಡಿದೆ. ಅದರಲ್ಲಿ ಕರ್ನಾಟಕದ ಪಾಲೂ ದೊಡ್ಡದಾಗಿದೆ. ಸಾಧನೆ ಮಾಡಬೇಕಾಗಿರುವುದು ಬಹಳಷ್ಟಿದೆ ಎಂದು ಹೇಳಿದರು.ಅಭಿವೃದ್ಧಿ ಏಕಕಾಲದಲ್ಲಿ ಆಗುವು ದಿಲ್ಲ. ಅದೊಂದು ನಿರಂತರ ಪ್ರಕ್ರಿಯೆ. ಬದಲಾದ ಕಾಲಕ್ಕೆ ಅನುಗುಣವಾಗಿ ಜನರ ಆಶೋತ್ತರಗಳು ಬದಲಾಗುತ್ತವೆ. ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ನಿರಂತರವಾಗಿ ನಡೆಯುತ್ತದೆ ಎಂದರು.ನೀರಾವರಿ, ಕೈಗಾರಿಕೆ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಲಾಗಿದೆ. ಜಿಲ್ಲೆ ಕೃಷಿ ಪ್ರಧಾನವಾಗಿದ್ದು, ಆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಜನತೆಯ ಸಹಕಾರದೊಂದಿಗೆ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿಗೊಳಿಸುವ  ಸಂಕಲ್ಪ ಮಾಡಲಾಗಿದೆ ಎಂದರು.ಶಾಂತಿ, ಸಹಬಾಳ್ವೆ ಹಾಗೂ ನೆಮ್ಮದಿಯಿಂದ ನೆಲೆಸಬೇಕಾದ ದೇಶದಲ್ಲಿ ಅಶಾಂತಿ, ಭಯದ ವಾತಾವರಣ ಸೃಷ್ಟಿಸುವ ದುಷ್ಟಶಕ್ತಿಗಳು ತಲೆ ಎತ್ತುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಅಂತಹ ಶಕ್ತಿಗಳ ದಮನಕ್ಕೆ ಸರ್ಕಾರ ಮುಂದಾಗಿದ್ದು, ಸಾರ್ವಜನಿಕರೂ ಸಹಕಾರ ನೀಡಬೇಕು ಎಂದು ಹೇಳಿದರು.ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಲವಾರು ಅಭಿವೃದ್ಧಿ ಯೋಜನೆ ಜಾರಿಗೆ ತರಲಾಗಿದೆ. ಬೇಕಾದಷ್ಟು ಭಾಗ್ಯ ಜಾರಿಗೊಳಿಸಲಾಗಿದೆ. ಎಲ್ಲರೂ ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಅವುಗಳನ್ನು ನಿಮ್ಮನ್ನು ತಲುಪಿದಾಗಲೇ ಯೋಜನೆ ಮಾಡಿದ್ದು ಸಾರ್ಥಕವಾಗುತ್ತದೆ ಎಂದರು.ವಿಧಾನಪರಿಷತ್‌ ಸದಸ್ಯ ಎನ್‌. ಅಪ್ಪಾಜಿಗೌಡ, ನಗರಸಭೆ ಅಧ್ಯಕ್ಷ ಲೋಕೇಶ್‌್, ಉಪಾಧ್ಯಕ್ಷೆ ಉಷಾರಾಣಿ, ಜಿಲ್ಲಾಧಿಕಾರಿ ಅಜಯ್‌ ನಾಗಭೂಷಣ್‌, ಜಿಲ್ಲಾ ಪಂಚಾಯಿತಿ ಸಿಇಒ ಬಿ. ಶರತ್‌, ಜಿಲ್ಲಾ ಪೊಲೀಸ್‌ ವರಿಷ್ಠ ಸುಧೀರ್ ಕುಮಾರ್‌ ರೆಡ್ಡಿ ಇದ್ದರು.ಪ್ರಶಸ್ತಿ ಪ್ರದಾನ ಮಾಡದೇ ಹೊರಟ ಸಚಿವ

ಮಂಡ್ಯ: ಉತ್ತಮ ಸೇವೆಗಾಗಿ ಸರ್ಕಾರಿ ನೌಕರರಿಗೆ ನೀಡುವ ಜಿಲ್ಲಾ ಸರ್ವೋತ್ತಮ ಪ್ರಶಸ್ತಿಯನ್ನು ಪ್ರದಾನ ಮಾಡದೇ ಅಂಬರೀಷ್‌ ಗಣರಾಜ್ಯೋತ್ಸವ ಸಮಾರಂಭ ದಿಂದ ತೆರಳಿದರು.ಧ್ವಜಾರೋಹಣದ ಭಾಷಣದ ನಂತರ ಕೆಲವೇ ಕ್ಷಣಗಳಲ್ಲಿ ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಘೋಷಿಸಲಾಯಿತು.

ಪರೇಡ್‌ನಲ್ಲಿ ಭಾಗವಹಿಸಿ, ಬಹುಮಾನ ಪಡೆದ ತಂಡಗಳಿಗೆ ಬಹುಮಾನ ವಿತರಿಸಿ ಅಂಬರೀಷ್ ಹೊರ ನಡೆದರು. ಸರ್ವೋತ್ತಮ ಪ್ರಶಸ್ತಿ ವಿತರಿಸಬೇಕು ಎಂಬ ಮನವಿಗೆ ‘ನೀವೇ ಮಾಡಿಕೊಳ್ಳಿ’ ಎಂದು ಹೇಳಿ ಹೊರಟು ಹೋದರು.ನಂತರ ಜಿಲ್ಲಾಧಿಕಾರಿ ಅಜಯ್‌ ನಾಗಭೂಷಣ್ ಅವರು ಪುರಸ್ಕೃತರಿಗೆ ಪ್ರಶಸ್ತಿ ವಿತರಣೆ ಮಾಡಿದರು. ಸಚಿವರಿಂದ ಸ್ವೀಕರಿಸಲಿದ್ದೇವೆ ಎಂದುಕೊಂಡಿದ್ದ ನೌಕರರಿಗೆ ನಿರಾಸೆಯಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.