ಶನಿವಾರ, ಜುಲೈ 31, 2021
21 °C

ಬುಧವಾರ, 4-5-1961

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋತಿಲಾಲ್ ನೆಹರೂ ಶತಮಾನ ಸಮಾರಂಭ

ಅಲಹಾಬಾದ್, ಮೇ 3 - ನಾಲ್ಕು ದಿನ ಅವಧಿಯ ಮೋತಿಲಾಲ್ ನೆಹರೂ ಜನ್ಮ ದಿನ ಶತಮಾನೋತ್ಸವವನ್ನು ಪ್ರಧಾನ ಮಂತ್ರಿ ನೆಹರೂ ಅವರು ಇಲ್ಲಿ ಇಂದು ಉದ್ಘಾಟಿಸಿದರು.ಇಲ್ಲಿನ ಸ್ವರಾಜ್ ಭವನದಲ್ಲಿ ದಿವಂಗತ ಮೋತಿಲಾಲ್ ನೆಹರೂರವರು ಬಳಸುತ್ತಿದ್ದ ವಸ್ತುಗಳು ಹಾಗೂ ಅವರ ಛಾಯಾಚಿತ್ರಗಳ ಪ್ರದರ್ಶನವೊಂದನ್ನು ಶ್ರೀ ನೆಹರೂ ಉದ್ಘಾಟಿಸಿದರು. ಪ್ರಧಾನ ಮಂತ್ರಿ ಕರ್ಫೂರವನ್ನು ಹೊತ್ತಿಸಿದರು.ಮಂಡಲಿ ರಚನೆ


ನವದೆಹಲಿ, ಮೇ 3 - ಕೃಷ್ಣಾ ಮತ್ತು ಗೋದಾವರಿ ನದಿಗಳ ಮೇಲೆ ಹೊಸದಾಗಿ ಮತ್ತೆ ಯಾವ ನೀರಾವರಿ ಹಾಗೂ ವಿದ್ಯುತ್ ಯೋಜನೆಗಳನ್ನು ನಿರ್ಮಿಸಲು ಸಾಧ್ಯವೆನ್ನುವುದನ್ನು ಕಂಡುಕೊಳ್ಳಲು ನದಿಗಳಲ್ಲಿ ದೊರಕುವ ನೀರಿನ ಸರಬರಾಜನ್ನು ನಿರ್ಧರಿಸಲು ಮಂಡಲಿಯೊಂದನ್ನು ರಚಿಸಲಾಗಿದೆಯೆಂದು ಪಾರ್ಲಿಮೆಂಟಿನ ಉಭಯ ಸದನಗಳಲ್ಲಿ ಇಂದು ಪ್ರಕಟಿಸಲಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.