ರಾಯ್ಪುರ (ಐಎಎನ್ಎಸ್): `ಜನಚೇತನ ಯಾತ್ರೆ~ಯ ಬೆಂಗಳೂರು ಭೇಟಿಯು ರದ್ದಾಗಿದೆ ಎನ್ನುವ ವಿಷಯವನ್ನು ಭಾನುವಾರ ನಿರಾಕರಿಸಿರುವ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಪೂರ್ವ ನಿಗದಿಯಂತೆ ಬೆಂಗಳೂರಿಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

`ಬೆಂಗಳೂರು ಭೇಟಿಯ ನಿಗದಿತ ಕಾರ್ಯಕ್ರಮವು ರದ್ದಾಗಿರುವ ವಿಷಯ ನನಗೆ ತಿಳಿದಿಲ್ಲ. ಅದು ರದ್ದಾಗಿರುವುದನ್ನು ನಾನು ನಿಮ್ಮಿಂದ (ಪತ್ರಕರ್ತರು) ಕೇಳಿದೆ. ಕರ್ನಾಟಕಕ್ಕೆ ಭೇಟಿ ನೀಡಿದ ವೇಳೆ ಬೆಂಗಳೂರಿಗೆ ಭೇಟಿ ನೀಡುವೆ~ ಎಂದು ಅವರು ತಿಳಿಸಿದರು.

ಭ್ರಷ್ಟಾಚಾರದ ಆರೋಪದ ಮೇಲೆ ಜೈಲು ಸೇರಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇನ್ನೂ ಕೆಲ ಸಚಿವರ ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ಈ ಎಲ್ಲ ವಿದ್ಯಮಾನಗಳಿಂದ ಇರುಸು ಮುರುಸುಗೊಂಡಿರುವ ಅಡ್ವಾಣಿ ಅವರು `ಜನಚೇತನ ಯಾತ್ರೆ~ ಅಂಗವಾಗಿ ನಗರದಲ್ಲಿ ಇದೇ 30ರಂದು ಹಮ್ಮಿಕೊಂಡಿದ್ದ ಬಹಿರಂಗ ಸಭೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಬಹಿರಂಗ ಸಭೆಯನ್ನು ರದ್ದು ಮಾಡಲಾಗಿದೆ ಎಂದು ಶನಿವಾರ ತಿಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.