ಬೆಂಗಳೂರು: ವಿಶ್ವದ ಪ್ರಮುಖ ಫುಟ್ಬಾಲ್ ಕ್ಲಬ್ಗಳಲ್ಲಿ ಒಂದಾಗಿರುವ `ಕ್ಲಬ್ ಅಟ್ಲೆಟಿಕೋ ಬೋಕಾ ಜೂನಿಯರ್'ನ ಬೋಕಾ ಜೂನಿಯರ್ಸ್ ಫುಟ್ಬಾಲ್ ಸ್ಕೂಲ್ ಇಂಡಿಯಾ (ಬಿಜೆಎಫ್ಎಸ್ಐ) ಸಂಸ್ಥೆ ತನ್ನ ಮೊದಲ ಶಾಖೆಗೆ ಅಧಿಕೃತವಾಗಿ ಶುಕ್ರವಾರ ಚಾಲನೆ ನೀಡಿತು.

ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ `ಬಿಜೆಎಫ್ಎಸ್ಐ' ಸಂಸ್ಥೆಯ ವ್ಯವಸ್ಥಾಪಕ ಫ್ರಾನ್ಸಿಸ್ಕೊ ಮೊರಿಯಾ, `ಈ ಅವಕಾಶ ಬಳಸಿಕೊಂಡು ದೇಶದಲ್ಲಿ ಫುಟ್ಬಾಲ್ ಕ್ರೀಡೆಯನ್ನು ಅಭಿವೃದ್ಧಿ ಪಡಿಸಲು ಬದ್ಧರಾಗಿದ್ದೇವೆ' ಎಂದರು.

`ಯುವ ವಿದ್ಯಾರ್ಥಿಗಳಿಗೆ ದಕ್ಷಿಣ ಅಮೆರಿಕ ಶೈಲಿಯ ಫುಟ್ಬಾಲ್ ಕಲಿಯಲು ಇದೊಂದು ಅವಕಾಶ' ಎಂದ ಅವರು, `ಡೇವಿಡ್ ಅವರು ಅನುಭವಿ ವೃತ್ತಿಪರ ಕೋಚ್ ಆಗಿದ್ದು, ಯುವ ಪ್ರತಿಭೆಯನ್ನು ಗುರುತಿಸಿ ಪೋಷಿಸುವುದು ಅವರ ವೈಶಿಷ್ಟ್ಯ' ಎಂದರು.

ಸಂಸ್ಥೆಯ ರಾಷ್ಟ್ರೀಯ ತಾಂತ್ರಿಕ ನಿರ್ದೇಶಕ ಡೇವಿಡ್ ಮೊಲಿನರ್ ಮಾತನಾಡಿ, `ಭಾರತದಲ್ಲಿ ಪ್ರತಿಭೆಗಳಿಗೆ ಬರವಿಲ್ಲ. ನಮ್ಮ ತಂಡ ಫುಟ್ಬಾಲ್ ತರಬೇತಿಯಲ್ಲಿ ಸೂಕ್ತ ಅನುಭವ ಹೊಂದಿದೆ. ಅಕಾಡೆಮಿಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಸೂಕ್ತ ಅವಕಾಶ ನೀಡಲಾಗುವುದು' ಎಂದರು.

`ಬಿಜೆಎಫ್ಸಿಐ' ಸಂಸ್ಥೆ ನಗರದ ವೈಟ್ಫೀಲ್ಡ್ನ ಐಟಿಪಿಬಿ ಹಾಗೂ ಸರ್ಜಾಪುರದ ಪ್ಲೇ ಎಕ್ಸ್ ಗೇಮ್ಸನಲ್ಲಿ ಜುಲೈ 6ರಿಂದ ತನ್ನ ಮೊದಲ ಅಕಾಡೆಮಿ ನಡೆಸಲಿದೆ. ಇದೇ 10 ರಿಂದ 14 ರ ವರೆಗೆ ಸಂಸ್ಥೆಯ ಮೊದಲ ಶಿಬಿರವನ್ನೂ ನಡೆಸಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.