ಗುರುವಾರ , ಮೇ 13, 2021
16 °C

ಬೆಂಗಳೂರಿನಿಂದ ಪುರಿಗೆ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪುರಿಗೆ ತೆರಳುವ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿ. ಬೆಂಗಳೂರಿನಿಂದ ಪುರಿಗೆ ತೆರಳುವ ರೈಲುಗಳ ಮೇಲಿರುವ ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ನೈಋತ್ಯ ರೈಲ್ವೆ ಹೊಸ ರೈಲು ಗಾಡಿ ಆರಂಭಿಸಿದೆ. ಇದು ಈ ವರ್ಷದ ಅಂತ್ಯದವರೆಗೆ ಸಂಚರಿಸಲಿದೆ.ಬೆಂಗಳೂರು ನಗರ ರೈಲು ನಿಲ್ದಾಣದಿಂದ ಪ್ರತಿ ಶನಿವಾರ ರಾತ್ರಿ 11.55ಕ್ಕೆ ಹೊರಡುವ `ಪುರಿ ಸಾಪ್ತಾಹಿಕ ಗರೀಬ್ ರಥ ಎಕ್ಸ್‌ಪ್ರೆಸ್~ ಸೋಮವಾರ ಬೆಳಿಗ್ಗೆ 5.50ಕ್ಕೆ ಪುರಿ ತಲುಪಲಿದೆ. ಈ ರೈಲು ಗಾಡಿಯ ಸಂಚಾರ ಶನಿವಾರದಿಂದ ಆರಂಭವಾಗಿದೆ.ಪುರಿಯಿಂದ ಪ್ರತಿ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಹೊರಡುವ ರೈಲು ಶನಿವಾರ ರಾತ್ರಿ 10.45ಕ್ಕೆ ಬೆಂಗಳೂರು ತಲುಪಲಿದೆ. ಇದರ ಸಂಚಾರ ಶುಕ್ರವಾರದಿಂದಲೇ ಆರಂಭವಾಗಿದೆ ಎಂದು ನೈಋತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.