ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿಯೂ ಆದ ರೈಲ್ವೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜ್ಯೋತಿ ಪ್ರಕಾಶ್ ಮಿರ್ಜಿ ಅವರನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರನ್ನಾಗಿ ವರ್ಗ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಆದೇಶ ಹೊರಬಿದ್ದ ನಂತರ ಸೋಮವಾರ ಸಂಜೆ ಅವರು ಪೊಲೀಸ್ ಆಯುಕ್ತರಾಗಿ ಅಧಿಕಾರವಹಿಸಿಕೊಂಡರು. ಇದುವರೆಗೂ ಪೊಲೀಸ್ ಆಯುಕ್ತರಾಗಿದ್ದ ಶಂಕರ್ ಬಿದರಿ ಅವರನ್ನು ರೈಲ್ವೆಯ ಹೆಚ್ಚುವರಿ ಪೊಲೀಸ್ಮಹಾನಿರ್ದೇಶಕರಾಗಿ ವರ್ಗ ಮಾಡಲಾಗಿದೆ.

ಇವರಲ್ಲದೆ, ಇನ್ನೂ ನಾಲ್ಕು ಮಂದಿ ಅಧಿಕಾರಿಗಳನ್ನು ವರ್ಗ ಮಾಡಲಾಗಿದೆ. ಅವರೆಂದರೆ,ಕಮಲ್ಪಂತ್- ಐಜಿಪಿ (ಪೂರ್ವ ವಲಯ ದಾವಣಗೆರೆ). ಮಾಲಿನಿ ಕೃಷ್ಣಮೂರ್ತಿ- ಐಜಿಪಿ (ಕೇಂದ್ರ ವಲಯ). ಡಾ.ಬಿ.ಎ.ಮಹೇಶ್- ಎಸ್ಪಿ, ಸಿಐಡಿ, ಬೆಂಗಳೂರು. ಡಿ.ಪ್ರಕಾಶ್- ಎಸ್ಪಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.