ಬುಧವಾರ, ಜನವರಿ 22, 2020
16 °C

ಬೆಂಗಳೂರು ಮತ್ತು ಮೈಸೂರು ರೇಸ್ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸತತ ಮಳೆಯಿಂದಾಗಿ ರೇಸ್ ಟ್ರ್ಯಾಕ್ ಸ್ಪರ್ಧೆಗೆ ಸೂಕ್ತವಿಲ್ಲದ ಕಾರಣ, ಶನಿವಾರ ಮತ್ತು ಭಾನುವಾರ ನಡೆಯಬೇಕಿದ್ದ ಬೆಂಗಳೂರು ರೇಸ್ ದಿನಗಳನ್ನು ಮಂಗಳವಾರ (ಜೂನ್ 4) ಮತ್ತು ಬುಧವಾರದಂದು ನಡೆಸಲಾಗುವುದೆಂದು ಬೆಂಗಳೂರು ಟರ್ಫ್ ಕ್ಲಬ್  ಪ್ರಕಟಣೆಯಲ್ಲಿ ತಿಳಿಸಿದೆ.

ಈಗಾಗಲೇ ಪ್ರಕಟಿಸಿರುವ ರೇಸ್ ಕಾರ್ಡ್‌ನಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ. ಜೂನ್ 5ರಂದು (ಬುಧವಾರ) ನಡೆಯಬೇಕಿದ್ದ ಮೈಸೂರು ರೇಸ್ ದಿನವನ್ನು ಗುರುವಾರಕ್ಕೆ ಮುಂದೂಡಲಾಗಿದೆಯೆಂದು ಮೈಸೂರು ಟರ್ಫ್ ಕ್ಲಬ್ ಸಹ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)