ಮಂಗಳವಾರ, ಜನವರಿ 21, 2020
28 °C
ನಮ್‌ ಕ್ಯಾಂಪಸ್‌

ಬೆರಳ ತುದಿಯಲಿ ಜಿಲ್ಲೆ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓದಿನ ಜೊತೆ ಕ್ರಿಯಾಶೀಲತೆಗೆ ಹೂಂಕಾರ ಇಟ್ಟವರು ವಿದ್ಯಾವಾಹಿನಿ ಕಾಲೇಜು ಬಿಬಿಎಂ ಹಾಗೂ ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿಗಳು. ಕಾಲೇಜಿನ ಶೈಕ್ಷಣಿಕ ಪರಿಸರ, ಉಪನ್ಯಾಸಕರ ಪ್ರೋತ್ಸಾಹದಿಂದ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲೆಯನ್ನು ಸಮಗ್ರವಾಗಿ ಪರಿಚಯಿಸುವ ‘ಮೈ ತುಮಕೂರ್‌ ಡಾಟ್‌ ಆರ್ಗ್’ ಎಂಬ ವೆಬ್‌ಸೈಟ್‌ ರೂಪಿಸಿದ್ದಾರೆ.  ಶೈಕ್ಷಣಿಕ ಜಿಲ್ಲೆಯಾದ ತುಮಕೂರು ಶಿಕ್ಷಣಕ್ಕೆ ಮಾತ್ರ ಮೀಸಲಾಗಿಲ್ಲ. ಬದಲಿಗೆ ಪ್ರವಾಸೋದ್ಯಮವನ್ನೂ ಒಳಗೊಂಡಿದೆ. ತುಮಕೂರು ಅಪರಿಚಿತ ಎನ್ನುವವರಿಗೆ ವೆಬ್‌ಸೈಟ್‌ ದಾರಿ ಮಾಡಿಕೊಡುತ್ತಿದೆ.ಹೋಟೆಲ್‌, ವಸತಿ ಗೃಹ, ಬ್ಯಾಂಕ್‌, ಅಂಚೆ ಕಚೇರಿ, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಪ್ರೇಕ್ಷಣೀಯ ಸ್ಥಳಗಳು, ಅವುಗಳ ಸಂಕ್ಷಿಪ್ತ ಮಾಹಿತಿ, ಕ್ರಮಿಸಬೇಕಾದ ದೂರ, ಮಾರ್ಗ ಸೇರಿದಂತೆ ಅಗತ್ಯ ಮಾಹಿತಿ ವೆಬ್‌ಸೈಟ್‌ನಲ್ಲಿದೆ.ರಾಜ್ಯದ ಜನರಿಗೆ ಜಿಲ್ಲೆ ಕುರಿತ ಉಪಯುಕ್ತ ಮಾಹಿತಿ ಒಳಗೊಂಡ ವೆಬ್‌ಸೈಟ್‌ ನೀಡಬೇಕೆಂಬುದು ಕಾಲೇಜು ಶಿಕ್ಷಕರ ಆಶಯ. ಅದನ್ನು ವಿದ್ಯಾರ್ಥಿಗಳ ಮೂಲಕ ಯಶಸ್ವಿಗೊಳಿಸಬೇಕೆಂಬ ಬಯಕೆ ಕೊನೆಗೂ ಈಡೇರಿದೆ ಎಂದು ಬಿಸಿಎ ವಿಭಾಗದ ಮುಖ್ಯಸ್ಥೆ ಮಧುಪ್ರಿಯಾ, ಬಿಬಿಎಂ ವಿಭಾಗದ ಮುಖ್ಯಸ್ಥೆ ಅರುಣಾ ‘ಪ್ರಜಾವಾಣಿ’ ಜೊತೆ ತಮ್ಮ ಅನಿಸಿಕೆ ಹಂಚಿ­ಕೊಂಡರು.  ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳತ್ತ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಪ್ರಯತ್ನದಲ್ಲಿ ವೆಬ್‌ಸೈಟ್‌ ರೂಪುಗೊಂಡಿದೆ. ರಕ್ತನಿಧಿ, ಆಸ್ಪತ್ರೆ, ಎಟಿಎಂ, ಬ್ಯಾಂಕ್‌ಗಳ ವಿಳಾಸ ಕ್ಷಣಾರ್ಧದಲ್ಲಿ ಸಿಗಲಿದೆ.ವೆಬ್‌ಸೈಟ್‌ ರೂಪಿಸುವ ಕಾರ್ಯದಲ್ಲಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದರು.  ‌ ವೆಬ್‌ಸೈಟ್ ಆರಂಭಗೊಂಡ ಕೇವಲ ಒಂದು ತಿಂಗಳಲ್ಲಿ 5000 ಮಂದಿ ಭೇಟಿ ಕೊಟ್ಟಿದ್ದಾರೆ. ಬಿಸಿಎ ವಿಭಾಗದ ವಿದ್ಯಾರ್ಥಿಗಳಾದ ವಿ.ಅರುಣ್‌ಕುಮಾರ್‌, ಎಂ.ಯು.ಚೇತನ್‌, ಪಿ. ಚೇತನ್‌ ಕುಮಾರ್‌ ಬಿಬಿಎಂ ವಿದ್ಯಾರ್ಥಿಗಳಾದ ವಿ.ಪೂಜಾ, ಕೆ.ಲಾವಣ್ಯ ಆಂಬುಲನ್ಸ್‌ ಕುರಿತ ಮಾಹಿತಿ ಕಲೆಹಾಕಿದರೆ, ಶ್ರೀನಿವಾಸ್‌, ಟಿ.ಆರ್‌.ರಿಷಿ­ಕುಮಾರ್‌, ಪುನೀತ್‌ ಅವರ ತಂಡ ವೆಬ್‌ಸೈಟ್‌ಗೆ ಮಾಹಿತಿ ಸಂಗ್ರಹಿಸಲು ಶ್ರಮಿಸಿದವರಲ್ಲಿ ಪ್ರಮುಖರು.ಪ್ರೇಕ್ಷಣೀಯ ಸ್ಥಳದ ಮಾಹಿತಿ

ತುಮಕೂರಿನ ಸಿದ್ದಗಂಗಾ ಮಠ, ದೇವರಾಯನದುರ್ಗ, ನಾಮದ ಚಿಲುಮೆ, ಕೈದಾಳ, ಶಿರಾದ ಮಲಿಕ್‌ ರಿಹಾನ್‌ ಗೋರಿ, ಜುಮ್ಮಾ ಮಸೀದಿ, ಮಾರ್ಕೋನಹಳ್ಳಿ ಜಲಾಶಯ, ತುರುವೇಕೆರೆಯ ಹೊಯ್ಸಳ ದೇವಸ್ಥಾನ, ಗಂಗಧರೇಶ್ವರ, ಶಂಕರೇಶ್ವರ ದೇವಸ್ಥಾನ, ಕೊರಟಗೆರೆಯ ಗೊರವನಹಳ್ಳಿ ಲಕ್ಷ್ಮೀ ದೇವಾಲಯ, 18ನೇ ಶತಮಾನದಲ್ಲಿ ನಿರ್ಮಾಣವಾದ ಟುರಕೋರಾ ಶೈಲಿಯ ಸೀಬಿ ನರಸಿಂಹ ದೇವಾಲಯ, ಮಧುಗಿರಿಯ ಚನ್ನರಾಯದುರ್ಗ, ಪಾವಗಡದಲ್ಲಿರುವ ವಿಜಯನಗರದ ಅರಸರ ಕಾಲದ ಸ್ನೇಕ್‌ ಹಿಲ್‌ ಇತರ ಸ್ಥಳಗಳ ಮಾಹಿತಿ ಇಲ್ಲಿ ಲಭ್ಯವಿದೆ.ವಿದ್ಯಾರ್ಥಿಗಳೇ ರೂಪಿಸಿದ: www.mytumkur.org

ಪ್ರತಿಕ್ರಿಯಿಸಿ (+)