ಗುರುವಾರ , ಮೇ 13, 2021
16 °C

ಬೆಲೆ ಏರಿಕೆಯಿಂದ ಸಾಮಾನ್ಯರ ಬದುಕು ದುಸ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: `ಹಣದುಬ್ಬರದಿಂದ ರೈತರ ಜೀವನ ಡೋಲಾಯಮಾನ ಸ್ಥಿತಿ ತಲುಪಿದೆ. ಅವಶ್ಯ ಪದಾರ್ಥಗಳ ಬೆಲೆ ಏರಿಕೆಯಿಂದ ಬಡವರು, ಕೆಳ ಹಾಗೂ ಮಧ್ಯಮ ವರ್ಗದವರ ಬದುಕು ದುಸ್ತರವಾಗಿದೆ~ ಎಂದು ಮಿರಾಂಡ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಎಸ್.ಎನ್.ಕಾತರಕಿ ಅಭಿಪ್ರಾಯಪಟ್ಟರು.ಸರ್ ಎಂ.ವಿಶ್ವೇಶ್ವರಯ್ಯ ಅವರ 151ನೇ ಜನ್ಮ ದಿನದ ಅಂಗವಾಗಿ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ `ಜಾಗತೀಕರಣದಿಂದ ಭಾರತದ ಆರ್ಥಿಕ ವಲಯದಲ್ಲಿನ ಬದಲಾವಣೆಗಳು~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಭ್ರಷ್ಟಾಚಾರ ಎಲ್ಲ ಹಂತಗಳಲ್ಲೂ ತಾಂಡವವಾಡುತ್ತಿದೆ. ರಾಷ್ಟ್ರವನ್ನು ತಿದ್ದುವ ಕೆಲಸ ಇಂದು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ~ ಎಂದರು.ವಿಭಾಗದ ಮುಖ್ಯಸ್ಥರಾದ ಪ್ರೊ. ಎಸ್. ಎಂ. ಹೆಗಡೆ, ಜ್ಯೋತಿ, ವ್ಯ.ವಿ.ರತ್ನ, ಅರವಿಂದ ರೆಡ್ಡಿ ವಿಷಯ ಮಂಡಿಸಿದರು. ಪ್ರಾಚಾರ್ಯ ಡಾ. ಬಸವರಾಜಯ್ಯ ಅವರು ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.