ಬೆಂಗಳೂರು(ಪಿಟಿಐ): ಭಾನುವಾರ ಬೆಳಿಗ್ಗೆ ಬೆಳಗಾವಿಯಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಇಬ್ಬರು ಪೋಲಿಸರು ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ.

ಮೃತರನ್ನು ಸಬ್ ಇನ್ಸ್ಪೇಕ್ಟರ್ ಶೀವಪ್ಪ(50), ಕಾನ್ಸ್ಟೇಬಲ್ ನ್ಯಾಮಣ್ಣನವರ್(30). ದಾರಿಹೋಕ ರವಿ(32) ಎಂದು ಗುರುತಿಸಲಾಗಿದೆ.

ಉರುಳಿ ಬಿದಿದ್ದ ಲಾರಿಯೊಂದನ್ನು ಪೋಲಿಸರು ತೆರವುಗೊಳಿಸುತ್ತಿದ್ದಾಗ ಆ ಮಾರ್ಗವಾಗಿ ವೇಗವಾಗಿ ಬಂದ ಮತ್ತೊಂದು ಲಾರಿ ಡಿಕ್ಕಿ ಒಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಜಿಲ್ಲಾ ಪೋಲಿಸ್ ಅಧಿಕಾರಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಪೊಲೀಸರು ರಸ್ತೆಯಿಂದ ಉರುಳಿ ಬಿದ್ದ ಲಾರಿ ತೆರವು ಮಾಡುವುದನ್ನು ನೋಡುತ್ತಿದ್ದ ರವಿ ಎಂಬ ದಾರಿಹೋಕನೂ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಪೊಲೀಸರು ಲಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಚಾಲಕ ಪರಾರಿಯಾಗಿದ್ದಾನೆಂದು ಅವರು ಅಪಘಾತದ ವಿವರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.