ಹುಬ್ಬಳ್ಳಿ: ಬಿಸಿಲ ಝಳ, ಬಿಸಿ ಗಾಳಿ, ದೂಳಿನ ಸಿಂಚನ ನೆರೆದಿದ್ದ ಸಾವಿರಾರು ಜನರ ಉತ್ಸಾಹಕ್ಕೆ ಕಿಂಚಿತ್ತೂ ಭಂಗ ತಂದಿರಲಿಲ್ಲ. ಗಾಳಿಯೊಂದಿಗೆ ಸ್ಪರ್ಧೆಗೆ ಇಳಿದಂತೆ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದ್ದ ಎತ್ತುಗಳ ಜೋಡಿಯನ್ನು ಹುರಿದುಂಬಿಸಲು ಶಿಳ್ಳೆ, ಕೇಕೆ, ಚಪ್ಪಾಳೆಯ ಸುರಿಮಳೆಯಾಯಿತು...

ತಾಲ್ಲೂಕಿನ ಗೋಕುಲ ಗ್ರಾಮದಲ್ಲಿ ಧಾರಾವತಿ ಹನುಮಂತ ದೇವರ ದೇವಸ್ಥಾನದ ಕಲ್ಲಿನ ಕಟ್ಟಡದ ಸಹಾಯಾರ್ಥವಾಗಿ ಭಾನುವಾರ ನಡೆದ ರಾಜ್ಯ ಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಮೇಲಿನ ದೃಶ್ಯ ಕಂಡುಬಂದಿತು.
ಬಹುಮಾನವಾಗಿ ಇಡಲಾಗಿದ್ದ ಆರು ಬೈಕ್ಗಳು, ಚಿನ್ನ, ಬೆಳ್ಳಿ, ಕಬ್ಬಿಣದ ಚಕ್ಕಡಿ, ಫ್ರಿಜ್ ಸ್ಪರ್ಧಿಗಳ ಉತ್ಸಾಹವನ್ನು ಹೆಚ್ಚಿಸಿದ್ದವು. ಬೆಳಿಗ್ಗೆ 7ರಿಂದ ಆರಂಭವಾದ ಸ್ಪರ್ಧೆಯಲ್ಲಿ 126 ಜೋಡಿಗಳು ಪಾಲ್ಗೊಂಡಿದ್ದವು.

ಬೆಳಗಾವಿ ಜಿಲ್ಲೆಯ ವಾಗವಾಡಿಯ ಚವ್ವಾಟ ಪ್ರಸನ್ನ ಎತ್ತಿನ ಜೋಡಿ ಒಂದು ನಿಮಿಷದ ಅವಧಿಯಲ್ಲಿ 2006 ಅಡಿ ದೂರ ಕ್ರಮಿಸಿ ಪ್ರಥಮ ಬಹುಮಾನವಾದ ಹೊಂಡಾ ಶೈನ್ ಬೈಕ್ ಗೆದ್ದುಕೊಂಡವು. ಹಾವೇರಿ ಜಿಲ್ಲೆ ಬನ್ನೂರಿನ ಮಾರುತಿಪ್ರಸನ್ನ ಜೋಡಿ 1939 ಅಡಿ ಕ್ರಮಿಸಿ ದ್ವಿತೀಯ ಬಹುಮಾನ ಸೂಪರ್ ಸ್ಪ್ಲೆಂಡರ್ ಬೈಕನ್ನು ತಮ್ಮದಾಗಿಸಿಕೊಂಡವು.

ಸ್ಪರ್ಧೆ ವೀಕ್ಷಿಸಲು ಗೋಕುಲ, ಉಣಕಲ್, ಗಾಮನಗಟ್ಟೆ ಸೇರಿದಂತೆ ಸುತ್ತಲಿನ ಗ್ರಾಮಗಳು ಹಾಗೂ ಹುಬ್ಬಳ್ಳಿ–ಧಾರವಾಡದಿಂದಲೂ ಭಾರಿ ಸಂಖ್ಯೆಯಲ್ಲಿ ಉತ್ಸಾಹಿಗಳು ಬಂದಿದ್ದರು. ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಹಲವರು ಮರಗಳ ಕೆಳಗೆ ಆಶ್ರಯ ಪಡೆದರೆ ಬಹುತೇಕರು ಬಿಸಿಲಲ್ಲಿ ನಿಂತು ಸ್ಪರ್ಧೆಗಳನ್ನು ವೀಕ್ಷಿಸಿದರು. ಬಾಯಾರಿಕೆ ನೀಗಿಸಿಕೊಳ್ಳಲು ಐಸ್ಕ್ರೀಂ, ಕಲ್ಲಂಗಡಿ ಹಣ್ಣು, ಮಜ್ಜಿಗೆ, ಕಬ್ಬಿನಹಾಲು, ಜ್ಯೂಸ್ನ ಮೊರೆ ಹೋದರು.

ಮಿರ್ಚಿ–ಗಿರಮಿಟ್ಟು ಸೇರಿದಂತೆ ವಿವಿಧ ಖಾದ್ಯಗಳು ನೆರೆದವರಿಗೆ ಸಾಥ್ ನೀಡಿದವು. ಮಧ್ಯಾಹ್ನದ ಹಸಿವನ್ನು ಸಂಘಟಕರು ನೀಡಿದ ಪಲಾವ್ ನೀಗಿಸಿತು. ಕುಡಿಯುವ ನೀರಿಗೆ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಗಾವಿ, ಉತ್ತರಕನ್ನಡ, ಗದಗ, ಕೊಪ್ಪಳ, ಹಾವೇರಿ ಸೇರಿದಂತೆ ವಿವಿಧೆಡೆಯಿಂದ ಟೆಂಪೋ, ಲಾರಿಗಳಲ್ಲಿ ಎತ್ತುಗಳನ್ನು ಸ್ಪರ್ಧೆಗೆ ಕರೆತರಲಾಗಿತ್ತು. ನಿತ್ಯದ ಕೃಷಿ ಬದುಕಿಗೆ ಅಗತ್ಯವಿರುವ ಪರಿಕರಗಳ ಮಾರಾಟ ವ್ಯವಸ್ಥೆಯೂ ಜೋರಾಗಿತ್ತು.

ಫಲಿತಾಂಶ: 3ನೇ ಸ್ಥಾನ: ಕುರುವತ್ತಿ ಬಸವೇಶ್ವರ ಪ್ರಸನ್ನ. ಚಿಕ್ಕಮಲ್ಲಿಗವಾಡ, ಧಾರವಾಡ ತಾಲ್ಲೂಕು. ಕ್ರಮಿಸಿದ ದೂರ: 1934 ಅಡಿ. ಬಹುಮಾನ–ಹೀರೊ ಹೊಂಡಾ ಫ್ಯಾಶನ್ ಪ್ರೋ ಬೈಕ್. 4: ಆಂಜನೇಯ ಪ್ರಸನ್ನ: ಉಣಕಲ್, ಹುಬ್ಬಳ್ಳಿ ತಾಲ್ಲೂಕು. ಕ್ರಮಿಸಿದ ದೂರ: 1931 ಅಡಿ. ಬಹುಮಾನ– ಹೀರೊ ಹೊಂಡಾ ಬೈಕ್. 5: ಕಲ್ಮೇಶ್ವರ ಪ್ರಸನ್ನ. ಅನಿಗೋಳ, ಬೆಳಗಾವಿ ಜಿಲ್ಲೆ. ಕ್ರಮಿಸಿದ ದೂರ: 1918.10 ಅಡಿ. ಬಹುಮಾನ– ಒಂದು ಕಬ್ಬಿಣದ ಚಕ್ಕಡಿ. 6: ಕರಿಯಮ್ಮದೇವಿ ಪ್ರಸನ್ನ: ನಂದಿಗುಡ್ಡ. ಬೆಳಗಾವಿ ಜಿಲ್ಲೆ. ದೂರ: 1918 ಅಡಿ. ಬಹುಮಾನ– ಒಂದು ಹೋರಿ. 7: ಬಸವೇಶ್ವರ ಪ್ರಸನ್ನ. ಸುತ-ಗಟ್ಟೆ. ಧಾರವಾಡ ತಾಲ್ಲೂಕು. ದೂರ: 1915.6 ಅಡಿ. ಬಹುಮಾನ–ಫ್ರಿಜ್್. 8: ಕರಿಯಮ್ಮದೇವಿ ಪ್ರಸನ್ನ. ಗಾಮನಗಟ್ಟಿ. 1913.9 ಅಡಿ. ದೂರ: 1913.9 ಅಡಿ. ಬಹುಮಾನ–ಒಂದು ಎಲ್ಸಿಡಿ ಟಿವಿ. 9: ಗ್ರಾಮದೇವತೆ ಪ್ರಸನ್ನ. ಬನ್ನೂರು. ಹಾವೇರಿ ಜಿಲ್ಲೆ. ಕ್ರಮಿಸಿದ ದೂರ:1910.10 ಅಡಿ. ಬಹುಮಾನ–10 ತೊಲ ಬೆಳ್ಳಿ. 10: ಸೋಮಪ್ಪ ರೊಟ್ಟಿ. ನಾಯಕರ ಹೂಲಿಹಟ್ಟಿ. ಧಾರವಾಡ ತಾಲ್ಲೂಕು. ದೂರ 1910 ಅಡಿ. ಬಹುಮಾನ– 10 ತೊಲ ಬೆಳ್ಳಿ ಸಮೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.