ಬುಧವಾರ, ಮೇ 25, 2022
30 °C

ಬೇಟೆ, ಅರಣ್ಯ ಲೂಟಿ: ಮಾಹಿತಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ‘ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿರುವವರ ಬಗ್ಗೆ ಅಥವಾ ಅರಣ್ಯ ಸಂಪತ್ತನ್ನು ಲೂಟಿ ಮಾಡುತ್ತಿರುವವರ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ದೂರವಾಣಿ ಸಂಖ್ಯೆ 8088059555 ಗೆ ಕರೆ ಮಾಡಿ, ಇಲ್ಲವೇ 09639566677ಗೆ ಎಸ್‌ಎಂಎಸ್ ರವಾನಿಸಿದರೆ ತಕ್ಷಣ ಕ್ರಮಕೈಗೊಳ್ಳಲಾಗುವುದು’ ಎಂದು ಅರಣ್ಯ ಸಚಿವ ಸಿ.ಎಚ್. ವಿಜಯ್‌ಶಂಕರ್        ಹೇಳಿದರು.ನಗರದ ಮಲ್ಲೇಶ್ವರದಲ್ಲಿರುವ ಅರಣ್ಯ ಭವನದಲ್ಲಿ ನಿಯಂತ್ರಣ ಕೊಠಡಿ ಹಾಗೂ ಮಾಹಿತಿ ಸಂವಹನ ತಂತ್ರಜ್ಞಾನ ಕೇಂದ್ರವನ್ನು ಸೋಮವಾರ ಉದ್ಘಾಟಿಸಿದ ನಂತರ ಅವರು ಮಾತನಾಡಿದರು.‘ದಿನದ 24 ಗಂಟೆಯೂ ಈ ಸೇವೆ ಲಭ್ಯವಾಗಿದ್ದು, ಇದನ್ನು ಬಳಸುವ ಮೂಲಕ ಸಾರ್ವಜನಿಕರು ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಇಲಾಖೆಯ ಜೊತೆ ಕೈಜೋಡಿಸಬೇಕು. ಮಾಹಿತಿದಾರರ ವಿವರಗಳನ್ನು ಗೋಪ್ಯವಾಗಿಡಲಾಗುವುದು’ ಎಂದು ಅವರು ಭರವಸೆ ನೀಡಿದರು.‘ಕಾಡುಗಳ್ಳತನ ನಡೆಯುತ್ತಿರುವುದು ಹಾಗೂ ಕಾಡುಪ್ರಾಣಿಗಳನ್ನು ದುಷ್ಕರ್ಮಿಗಳು ಬೇಟೆಯಾಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೂ ಅದನ್ನು ಇಲಾಖೆಯ ಅಧಿಕಾರಿಗಳಿಗೆ ತಲುಪಿಸಲು ಅವರಿಗೆ ಸೂಕ್ತ ಮಾರ್ಗವಿರಲಿಲ್ಲ. ಈ ಸಂವಹನ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಮಾಹಿತಿ ಕೊಠಡಿಯನ್ನು ತೆರೆಯಲಾಗಿದೆ. ಇದಲ್ಲದೇ, ಇಲಾಖೆಯ ವೆಬ್‌ಸೈಟ್‌ನಲ್ಲಿಯೂ (www.aranya.gov.in) ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಬಹುದಾಗಿದೆ’ ಎಂದರು.ವೈರ್‌ಲೆಸ್ ಸೇವೆಗೆ ಪುನಃಶ್ಚೇತನ: ‘ಹಲವು ವರ್ಷಗಳಿಂದ ನಿಷ್ಕ್ರಿಯ    ವಾಗಿದ್ದ ಇಲಾಖೆಯ ವೈರ್‌ಲೆಸ್ ಸೇವೆಯನ್ನು ಪುನಃಶ್ಚೇತನಗೊಳಿಸಲಾಗು   ತ್ತಿದೆ’ ಎಂದು ಸಚಿವರು ತಿಳಿಸಿದರು.ಪೊಲೀಸ್ ಇಲಾಖೆಯು ಬಳಸುವ ಮಾದರಿಯಲ್ಲಿ ಈ ಸೇವೆಯನ್ನು ಬಲಪಡಿಸುವುದಾಗಿ ಅವರು ಭರವಸೆ ನೀಡಿದರು.ಸಿಬ್ಬಂದಿಗಳಿಗೂ ವೇದಿಕೆ: ಇಲಾ  ಖೆಯ ಸಿಬ್ಬಂದಿಗಳ ಮಾಹಿತಿಯನ್ನು ಕ್ರೋಢೀಕರಿಸುವ ‘ಪರ್ಸನಲ್ ಇನ್‌ಫಾರ್ಮೆಷನ್ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್’ ಹಾಗೂ ಸಿಬ್ಬಂದಿಗಳ ಅಹವಾಲುಗಳನ್ನು ಸ್ವೀಕರಿಸಲು  ‘ಕೋರ್ಟ್ ಕೇಸ್ ಮಾನಿಟರಿಂಗ್   ಸಿಸ್ಟಮ್ಸ್’ಗೂ ಸಚಿವರು ಚಾಲನೆ ನೀಡಿದರು.  ವರ್ಗಾವಣೆ ಬಯಸುವ ಸಿಬ್ಬಂದಿಗಳೂ ಈ ವೇದಿಕೆಯನ್ನು ಬಳಸಿಕೊಳ್ಳಬಹುದಾಗಿದೆ. ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಈ ವೇದಿಕೆಗಳು ಲಭ್ಯ ಇವೆ. ಇಲಾಖೆಯಲ್ಲಿ ಸುಮಾರು 8,000ಕ್ಕೂ ಹೆಚ್ಚು ಸಿಬ್ಬಂದಿ ವರ್ಗವಿದೆ.  ಇದೇ ಸಂದರ್ಭದಲ್ಲಿ ಸಚಿವರು ಇಲಾಖೆಯ ದ್ವೈವಾರ್ಷಿಕ ನಿಯತಕಾಲಿಕ ‘ಅರಣ್ಯ ವಾರ್ತೆ’ ಬಿಡುಗಡೆಗೊಳಿಸಿದರು.ಪ್ರವೇಶ ಶುಲ್ಕ ಹೆಚ್ಚಳ

 ಬೆಂಗಳೂರು:  ‘ಮೋಜು ಮಾಡಲು ಅರಣ್ಯಧಾಮಗಳಿಗೆ ಬರುವವರ ಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರವೇಶ ಶುಲ್ಕವನ್ನು ಹೆಚ್ಚಿಸಲಾಗಿದೆ’ ಎಂದು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಹೇಳಿದರು.ಎಲ್ಲ ತಾಣಗಳಲ್ಲಿಯೂ ದರ ಹೆಚ್ಚಿಸಿಲ್ಲ. ಎಲ್ಲಿ ಪ್ರೇಕ್ಷಕರ ದಟ್ಟಣೆ ಹೆಚ್ಚಾಗಿದೆಯೋ ಅಲ್ಲಿ ಮಾತ್ರ ಈ ಕ್ರಮಕೈಗೊಳ್ಳಲಾಗಿದೆ. ಆದರೆ, ಮಕ್ಕಳಿಗೆ ಯಾವುದೇ ರೀತಿಯ ಶುಲ್ಕವನ್ನು ಹೆಚ್ಚಿಸಿಲ್ಲ ಎಂದು ಅವರು ತಿಳಿಸಿದರು. ‘ಶುಲ್ಕ ಹೆಚ್ಚಳದಿಂದ ಬರುವ ಹಣ ಸರ್ಕಾರಕ್ಕೆ ಬರುವುದಿಲ್ಲ. ಈ ಹಣವನ್ನು ಕಾಡುಜನರ ಅಭಿವೃದ್ಧಿಗಾಗಿ ಬಳಸುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.