ಸೋಮವಾರ, ಮೇ 17, 2021
23 °C

ಬೇಸಿಗೆಯಲ್ಲೂ ಬತ್ತದ ಹೆಗ್ಗಡೆ ಹುಂಡಿ ಕೆರೆ

ಪ್ರಜಾವಾಣಿ ವಾರ್ತೆ ಗೂಳೀಪುರ ನಾ. ಮಂಜು Updated:

ಅಕ್ಷರ ಗಾತ್ರ : | |

ಯಳಂದೂರು: `ಕೆರೆಯ ನೀರನು ಕೆರೆಗೆ ಚಲ್ಲಿರೋ ಎಂದಿದ್ದಾರೆ ದಾಸರು. ಕೆರೆ ಸಂರಕ್ಷಿಸಿ ಮಳೆ ನೀರು ನಿಲ್ಲಿಸಿ ಮನೆಗೆ ಬಳಸಿ ಎಂಬುದು ಆಧುನಿಕ ಜಲ ವಿಜ್ಞಾನ. ಇಂತಹ ಪ್ರಯತ್ನ ಫಲ ಕೊಟ್ಟಿದೆ ಈ ಊರಿನಲ್ಲಿ. ಇಲ್ಲಿ ಬೋರ್‌ವೆಲ್ ಇದ್ದರೂ ನೀರು ಒತ್ತುವವರಿಲ್ಲ, ಬೀದಿ ಬದಿಯಲ್ಲಿ ನಳಗಳಿದ್ದರೂ ಸ್ತ್ರೀಯರು ಸಾಲಾಗಿ ನೀರು ಹಿಡಿದು ಕೊಳ್ಳುವುದಿಲ್ಲ, ಮನೆಗೆ ಹಾಕಿರುವ ಸಣ್ಣ ಪ್ಲಾಸ್ಟಿಕ್ ಪೈಪ್‌ಗಳೇ ಕುಡಿಯುವ ನೀರಿನ ಅಗತ್ಯತೆ ಪೂರೈಸುತ್ತದೆ.ಮನೆಯ ಇನ್ನಿತರ ಅಗತ್ಯತೆಗೆ ಬೇಕಾದ ನೀರನ್ನು ಇವರಿಗೆ ಕೆರೆಯೇ ನೀಡುತ್ತದೆ. ಹಾಗಾಗಿ ಇಲ್ಲಿನ ಗ್ರಾಮೀಣರು ಮಾತ್ರ ವರ್ಷ ಪೂರ್ತಿ ಜೀವಜಲಕ್ಕಾಗಿ `ಕೆರೆ ಸಂರಕ್ಷಿಸಿ~ ಜಲಕ್ಷಾಮದಿಂದ ಪಾರಾಗಿದ್ದಾರೆ~.ಯಳಂದೂರು ತಾಲ್ಲೂಕಿನ ಅಂಬಳೆ ಪಂಚಾಯಿತಿಗೆ ಸೇರಿದ ಹೆಗ್ಗಡೆ ಹುಂಡಿ ಪುಟ್ಟಗ್ರಾಮ. ಜನಸಂಖ್ಯೆ 400 ದಾಟುವುದಿಲ್ಲ. ಆದರೆ ಇಲ್ಲಿ ಸುಮಾರು 1 ಹೆಕ್ಟೇರ್‌ನಲ್ಲಿ ಹರಡಿಕೊಂಡ ನಿಂಗರಾಜಮ್ಮನ ಕಟ್ಟೆ ವಿಸ್ತೀರ್ಣದಲ್ಲಿ ಚಿಕ್ಕದು. ಆದರೆ ಮಳೆ ಸುರಿದಾಗ ಕೆರೆ ತುಂಬುವಂತೆ ರೂಪಿಸಲಾಗಿದೆ. ಜನ ಹಾಗೂ ಜಾನುವಾರುನೀರಿನ ಮೂಲವಾಗಿ ಬಳಸಿಕೊಳ್ಳತ್ತಾರೆ.3 ಬೋರ್‌ವೆಲ್‌ಗಳೂ, 2 ನೀರು ತೊಂಬೆಗಳು, ಸಣ್ಣ ನಳಗಳೂ ಇಲ್ಲಿವೆ. ವಿದ್ಯುತ್ ಇದ್ದಲ್ಲಿ ನೀರೂ ಇಲ್ಲೂ ಚಾಲು ಆಗುತ್ತದೆ. ಬೇಸಿಗೆಯಲ್ಲಿ ಬೋರ್‌ವೆಲ್ ನೀರು ಬರುತ್ತದೆ. ಹಾಗಾಗಿ ಇಲ್ಲಿನ ನಿವಾಸಿ ಗಳೂ ನೀರಿಗಾಗಿ ಪರಿತಪಿಸುವುದಿಲ್ಲ. ಮನೆಗೆರಡು ಕೊಡ ಹಿಡಿದು ಕುಡಿಯಲೂ ಬಳಸುತ್ತಾರೆ. ಜಳಕ ಮಾಡಲೂ, ಸಾಕು ಪ್ರಾಣಿಗಳಿಗೆ, ಬಟ್ಟೆತೊಳೆಯಲೂ  ಬಹುತೇಕರೂ ಕೆರೆಯ ನೀರನ್ನೇ ಆಶ್ರಯಿಸಿದ್ದಾರೆ. ಹೀಗಾಗಿ ನೀರಿನ ದಾಹ  ಬಾಧಿಸಿಲ್ಲ ಎನ್ನುತ್ತಾರೆ ಗ್ರಾಮದ ರಾಮೇಗೌಡ ಹಾಗೂ ನಾಗಮ್ಮ.ಹಳ್ಳಿಯ ಸುತ್ತಮುತ್ತ 200-250 ಅಡಿಗೆ ನೀರು ಬರುತ್ತದೆ. ಕೆರೆ ಯಾವಾಗಲೂ ತುಂಬಿ ನಿಲ್ಲುವುದರಿಂದ ನೀರಿನ ಇಳುವರಿ ಕಡಿಮೆಯಾಗಿಲ್ಲ. 20 ವರ್ಷಗಳಿಂದ ಕೆರೆಯ ನೀರು ಈ ಕಟ್ಟೆಯಲ್ಲಿ ಒಣಗಿರುವುದನ್ನು ನೋಡೇ ಇಲ್ಲ ಎಂದು ಗ್ರಾಮಸ್ಥ ನಂಜೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.ಈಗ ಕಳೆಗಿಡಗಳೂ ಬೆಳೆದಿವೆ ಇವು ಕೆರೆ ಉಳಿಸುವ ಸಂಸ್ಕೃತಿಗೆ ಕಂಟಕವಾಗಿದೆ. ಆದರೆ ನೀರಿನ ಬವಣೆ ಇಲ್ಲ. ಆದರೆ ಕೆಲವರೂ ಜಾನುವಾರುಗಳನ್ನು ಇಲ್ಲೇ ಬಿಟ್ಟು ನೀರು ಕುಡಿಸುತ್ತಾರೆ ಹಾಗೂ ಶುಚಿಗೊಳಿಸುತ್ತಾರೆ. ಬಟ್ಟೆಯನ್ನು ಒಗೆಯುತ್ತಾರೆ, ಬದಲಿಗೆ ಕಲುಷಿತವಾಗ ದಂತೆ ಕಾಪಾಡಬೇಕು ಎನ್ನುತ್ತಾರೆ ಹಿರಿಯರು.ತಾಲ್ಲೂಕಿನಲ್ಲಿ ಹಳ್ಳಿಗೆ 1 ಕೆರೆಯಂತೆ 33 ಗ್ರಾಮಗಳಿಗೂ ಇಲ್ಲಿ ಕೆರೆ-ಕಟ್ಟೆಗಳನ್ನು ಮೈಸೂರು ಅರಸರೂ ಕಟ್ಟಿಸಿದ್ದರು. ಮಳೆ ಬಿದ್ದಾಗ ಜಲ ಕೊಯಿಲಿಗೆ ಹೆಚ್ಚು ಆದ್ಯತೆ ನೀಡಲಾಗಿತ್ತು. ಆದರೆ ಇತ್ತೀಚೆಗೆ ಕೆರೆ-ಕಟ್ಟೆಗಳೂ ಕಡಿಮೆಯಾಗುತ್ತಿವೆ. ಹಾಗಾಗಿ ಅಂತರ್ಜಲ ಕುಸಿಯುತ್ತಿದೆ. ಜಿಲ್ಲೆಯಲ್ಲಿ ಈ ಬಾರಿ 211 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ.ತಾಲ್ಲೂಕಿನಲ್ಲಿ 2011ರ ಮೇ ನಲ್ಲಿ 118.6ಮಿ.ಮೀ, ಜೂನ್ 66.6 ಮೀ.ಮೀ, ಜುಲೈ 40.6 ಮಿ.ಮೀ, ಆಗಸ್ಟ್ 89.6 ಮಿ.ಮೀ, ಸೆಪ್ಟೆಂಬರ್ 21.6 ಮಿ.ಮೀ, ಅಕ್ಟೋಬರ್ 117.8 ಮಿ.ಮೀ ಹಾಗೂ ನವೆಂಬರ್‌ನಲ್ಲಿ 151.2 ಮಿ.ಮೀ ಮಳೆ ಸುರಿದಿದೆ. ಒಟ್ಟಾರೆ 758.6 ಮೀ.ಮೀ ಜಲಧಾರೆಯಾಗಿದ್ದರೂ ಸಂಗ್ರಹಣೆಗೆ ಒತ್ತು ನೀಡಿಲ್ಲ. ಈ ಬಾರಿಯಾದರೂ ಮಳೆಗೂ ಮುನ್ನ ಜಲ ಮೂಲಗಳನ್ನು ಉಳಿಸಿ, ಕೆರೆ-ಕಟ್ಟೆ ತುಂಬಿಸಲೂ ಮುಂದಾಗುವರೆ ಕಾದು ನೋಡಬೇಕು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.