ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಯಶಸ್ಸು ಪಡೆಯಲು ಬೌಲರ್ಗಳು ಪ್ರಮುಖ ಪಾತ್ರ ನಿಭಾಯಿಸಬೇಕಾಗಿದೆ ಎಂದು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ತಿಳಿಸಿದ್ದಾರೆ.

‘ಉತ್ತಮ ಬೌಲಿಂಗ್ ಪ್ರದರ್ಶನ ನೀಡುವುದು ಅಗತ್ಯವಾಗಿದೆ. ಏಕೆಂದರೆ ಪಂದ್ಯ ಗೆಲ್ಲಲು ಎದುರಾಳಿಯ 20 ವಿಕೆಟ್ ಪಡೆಯಬೇಕು. ಹಾಗಾಗಿ ಬೌಲರ್ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ’ ಎಂದು ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಹಿ ನುಡಿದಿದ್ದಾರೆ.

‘ಹಿರಿಯ ಹಾಗೂ ಅನುಭವಿ ವೇಗಿ ಜಹೀರ್ ಖಾನ್ ಈ ಸರಣಿಯಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ. ಯುವ ಬೌಲರ್ಗಳಿಗೆ ಮಾರ್ಗದರ್ಶನ ನೀಡಬೇಕಾಗಿದೆ. ಆದರೆ ಅವರ ಮೇಲೆ ಸದ್ಯ ಯಾವುದೇ ಒತ್ತಡ ಇಲ್ಲ. ಹಾಗೇ, ಆಫ್ ಸ್ಪಿನ್ನರ್ ಆರ್.ಅಶ್ವಿನ್ ಪಾತ್ರವೂ ಮಹತ್ವದ್ದಾಗಿದೆ’ ಎಂದಿದ್ದಾರೆ.

ಅನನುಭವಿ ಮಧ್ಯಮ ಕ್ರಮಾಂಕದಿಂದ ಉತ್ತಮ ಪ್ರದರ್ಶನ ಮೂಡಿಬರುವ ಭರವಸೆಯನ್ನು ದೋನಿ ವ್ಯಕ್ತಪಡಿದ್ದಾರೆ. ‘ನಾವು ಇಲ್ಲಿ ಯಾವುದೇ ಪ್ರಯೋಗ ಮಾಡುತ್ತಿಲ್ಲ. ತಂಡಕ್ಕೆ ಆಯ್ಕೆಯಾಗಿ ರುವ ಎಲ್ಲಾ ಆಟಗಾರರು ಪ್ರತಿಭಾ ವಂತರು. ದೇಶಿ ಕ್ರಿಕೆಟ್ನಲ್ಲಿ ಅವರೆಲ್ಲಾ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರು ಇಲ್ಲೂ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರಬೇಕು’ ಎಂದು ತಿಳಿಸಿದ್ದಾರೆ.

ಸಚಿನ್ ಅನುಪಸ್ಥಿತಿಯಲ್ಲಿ ನಡೆಯುತ್ತಿ ರುವ ಮೊದಲ ಸರಣಿ ಕುರಿತಂತೆ ಪ್ರತಿ ಕ್ರಿಯಿಸಿರುವ ಅವರು, ‘ಸಚಿನ್ ಇನ್ನು ಮುಂದೆ ತಂಡದಲ್ಲಿ ಆಡುವುದಿಲ್ಲ ಎಂಬ ವಾಸ್ತವವನ್ನು ಒಪ್ಪಿ ಕೊಂಡು ನಾವು ಕಣಕ್ಕಿಳಿಯಬೇಕಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.