ಮಂಗಳವಾರ, ಜೂನ್ 15, 2021
24 °C
ಮೇಲ್ಮನವಿ ಸಲ್ಲಿಸಲು ಭಾರತ ನಿರ್ಧಾರ

ಬ್ಯಾಂಕ್‌ ಖಾತರಿ ನಗದಿಗೆ ಇಟಲಿ ಕೋರ್ಟ್‌ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅತಿಗಣ್ಯರಿಗಾಗಿ ಬಳಸಲು ಹೆಲಿ­ಕಾಪ್ಟರ್‌ ಖರೀದಿ ಹಗರ­ಣಕ್ಕೆ ಸಂಬಂಧಿಸಿ­ದಂತೆ ಅಗಸ್ಟಾ ­ವೆಸ್ಟ್‌­­­­ಲ್ಯಾಂಡ್‌ ಕಂಪೆನಿ ನೀಡಿರುವ ₨2360 ಕೋಟಿ ಮೊತ್ತದ ಬ್ಯಾಂಕ್‌ ಖಾತರಿಯನ್ನು ನಗದೀಕರಿಸಿ­ಕೊಳ್ಳುವ ಭಾರತದ ಪ್ರಯತ್ನಕ್ಕೆ ಇಟಲಿ ನ್ಯಾಯಾ­ಲಯ ತಡೆಯಾಜ್ಞೆ ನೀಡಿದೆ.ಇಟಲಿ ನ್ಯಾಯಾಲಯದ ಈ ಆದೇ­ಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಭಾರತ ನಿರ್ಧರಿಸಿದೆ ಎಂದು ರಕ್ಷಣಾ ಸಚಿವಾಲ­ಯದ ವಕ್ತಾರರು ಮಂಗಳ­ವಾರ ಇಲ್ಲಿ ತಿಳಿಸಿದರು.ಅತಿಗಣ್ಯರ ಬಳಕೆಗಾಗಿ ಅಗಸ್ಟಾವೆಸ್ಟ್‌ ಲ್ಯಾಂಡ್‌ ಕಂಪೆನಿಯಿಂದ ₨3600 ಕೋಟಿ ಮೌಲ್ಯದ ಹೆಲಿಕಾಪ್ಟರ್‌ಗಳನ್ನು  ಖರೀದಿಸಲು ಭಾರತ ಒಪ್ಪಂದ ಮಾಡಿ­ಕೊಂಡಿತ್ತು. ಆದರೆ ಇದರಲ್ಲಿ ಯಾವುದೇ ಲಂಚದ ವ್ಯವಹಾರ ಇರ­ಬಾರದು ಎಂಬ ಷರತ್ತು  ವಿಧಿಸಿತ್ತು. ಈ ಷರತ್ತು ಉಲ್ಲಂಘಸಿದಕ್ಕಾಗಿ ದಂಡದ ರೂಪದಲ್ಲಿ ಬ್ಯಾಂಕ್‌ ಭದ್ರತೆ ನಗದೀಕರಿ­ಸಿಕೊಳ್ಳಲು ಭಾರತ ಮುಂದಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.