ಯಮಕನಮರಡಿ: `ಆಧುನಿಕ ಯುಗದಲ್ಲಿ ಗ್ರಾಮೀಣ ವಲಯದ ಪ್ರತಿಯೊಬ್ಬರಿಗೂ ಬ್ಯಾಂಕಿನ ವ್ಯವಹಾರ ಜ್ಞಾನದ ಜೊತೆಗೆ ಖಾತೆ ತೆರೆಯುವುದು ಅವಶ್ಯವಾಗಿದೆ~ ಎಂದು ಯಮಕನಮರಡಿ ಸಿಂಡಿಕೇಟ್ ಬ್ಯಾಂಕಿನ ಶಾಖಾ ಪ್ರಬಂಧಕರಾದ ವೈ.ಪಿ. ಗಡಿನಾಯಿಕ ಹೇಳಿದರು.

ಗ್ರಾಮದ ಸಿಂಡಿಕೇಟ್ ಬ್ಯಾಂಕಿನ ಸಭಾಭವನದಲ್ಲಿ ಮಂಗಳವಾರ ನಡೆದ ಗ್ರಾಹಕರ ಮೇಳದಲ್ಲಿ ಅವರು ಮಾತನಾಡಿದರ. ಒಬ್ಬ ಒಂದು ಖಾತೆಯನ್ನು ತೆರೆದರೆ ಸುಮಾರು 7 ಸವಲತ್ತುಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರಲ್ಲದೇ, ಅವುಗಳನ್ನು ಹೇಗೆ ಬಳಕೆ ಮಾಡಬಹುದು ಹಾಗೂ ಅವುಗಳ ನಿಯಮಗಳ ಬಗ್ಗೆ ತಿಳಿಸಿ ಹೇಳಿದರು.

ರೈತರು, ವಿದ್ಯಾರ್ಥಿಗಳು, ನೇಕಾರರು, ವ್ಯಾಪಸ್ಥರಿಗೆ ಹಲವಾರು ಸಾಲ ಸೌಲಭ್ಯ ಜೊತೆಗೆ ಸಿಂದ್ ಸುರಕ್ಷಾ ವಿಮಾ ಯೋಜನೆಯನ್ನು ಕೊಡಲು ಸಿಂಡಿಕೇಟ್ ಬ್ಯಾಂಕ್ ಮುಂದಾಗಿದೆ. ಅದರ ಸದುಪಯೋಗ ಪಡೆದು ತಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬೇಕು ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಯಮಕನಮರಡಿ ಗ್ರಾಮ ಅಭಿವೃದ್ಧಿ ಅಧಿಕಾರಿ ಅನೀತಾ ಕ್ಯಾಥರಿನ್ ಮಾತನಾಡಿ ಈ ಬ್ಯಾಂಕಿನಿಂದ ಗ್ರಾಮೀಣ ಪ್ರದೇಶದ ಜನರು ಸಹಾಯ ಸಹಕಾರ ನೀಡಿ ತಮ್ಮ ವ್ಯವಹಾರವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವೈವಿಎಸ್ ಸಂಘದ ಕಾರ್ಯದರ್ಶಿ ಜೆ.ಎನ್. ಅವಾಡೆ ಅಧ್ಯಕ್ಷತೆ ವಹಿಸಿದ್ದರು. ವಿ.ಎನ್. ರಘುನಾಥ, ಮಹೇಶ ತುಬಚಿ, ಬಸವಣ್ಣಿ ಕೇದನೂರಿ, ಮಹಾವೀರ ಕುರಣಿ, ಎನ್.ಎಂ. ಹೊನ್ನಾಳಿ, ಯು.ಎಂ. ಅಂಬಿ ಮುಂತಾದವರು ಉಪಸ್ಥಿತರಿದ್ದರು. ಎಂ.ಬಿ. ಜಿರಳಿ ಸ್ವಾಗತಿಸಿದರು. ಪ್ರಭಾಕರ ಪ್ರಭು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.