ಮಂಗಳವಾರ, ಜನವರಿ 21, 2020
27 °C

ಬ್ಯಾಟರಿಚಾಲಿತ ಕಾರು ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನ ಪರಿಷತ್ ಸದಸ್ಯರಿಗೆ ಶಾಸಕರ ಭವನದಿಂದ ಸದನಕ್ಕೆ ಬಂದು ಹೋಗಲು ಅನುಕೂಲ ಕಲ್ಪಿಸಿಕೊಡುವ ದೃಷ್ಟಿಯಿಂದ ಬ್ಯಾಟರಿಚಾಲಿತ ಕಾರು ಖರೀದಿಸಲಾಗುವುದು ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದರು.2011ರ ಜೂನ್‌ನಲ್ಲಿ ನಡೆದ ಅಧಿವೇಶನದಲ್ಲಿ ತಾತ್ಕಾಲಿಕವಾಗಿ ಸದಸ್ಯರಿಗೆ ಬ್ಯಾಟರಿಚಾಲಿತ ಕಾರಿನ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ಕಾಯಂ ಆಗಿ ಬಳಸುವ ದೃಷ್ಟಿಯಿಂದ ಆ ರೀತಿಯ ಕಾರು ಖರೀದಿಸಲು ನಿರ್ಧರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಇದೇ 30ರ ಒಳಗೆ ಖರೀದಿ ಮಾಡುವ ವಿಶ್ವಾಸವಿದೆ. ಒಂದು ವೇಳೆ ಸಾಧ್ಯವಾಗದಿದ್ದರೆ ತಾತ್ಕಾಲಿಕವಾದ ವ್ಯವಸ್ಥೆ ಮಾಡುತ್ತೇವೆ. ಎಂಟು ಆಸನಗಳನ್ನು ಹೊಂದಿರುವ ಈ ಕಾರು ಶಾಸಕರ ಭವನದಿಂದ ವಿಧಾನಸೌಧಕ್ಕೆ ಬಂದು- ಹೋಗಲು ಹತ್ತು ನಿಮಿಷ ಕಾಲಾವಕಾಶ ತೆಗೆದುಕೊಳ್ಳುತ್ತದೆ ಎಂದರು.

ಪ್ರತಿಕ್ರಿಯಿಸಿ (+)