ಬುಧವಾರ, ಮೇ 12, 2021
19 °C

ಬ್ಯಾಡ್ಮಿಂಟನ್ ಪಂದ್ಯಾವಳಿ: ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಬೆಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯು ರೂರಲ್ ಕಾಲೇಜಿನಲ್ಲಿ ಮೂರು ದಿನಗಳ ಕಾಲ  ನಡೆಯಿತು ಎಂದು ಕಾಲೇಜಿನ ದೈಹಿಕ ನಿರ್ದೇಶಕ ವಿಕ್ರಮ್ ತಿಳಿಸಿದ್ದಾರೆ.  ಪಂದ್ಯಾವಳಿಯಲ್ಲಿ ಪುರುಷ ವಿಭಾಗದಿಂದ 65 ಮತ್ತು ಮಹಿಳಾ ವಿಭಾಗದಿಂದ 25 ತಂಡಗಳು ಭಾಗವಹಿಸಿದ್ದವು. ಪುರುಷ ತಂಡಗಳನ್ನು ಉತ್ತರ ಮತ್ತು ದಕ್ಷಿಣ ವಲಯಗಳಾಗಿ  ವಿಂಗಡಿ ಪಂದ್ಯ ನಡಿಸಲಾಯಿತು.ಉತ್ತರ ವಲಯದಲ್ಲಿ ಎಂ.ಎಸ್.ರಾಮಯ್ಯ ಕಾಲೇಜು ಪ್ರಥಮ ಸ್ಥಾನ, ಗಾರ್ಡನ್‌ಸಿಟಿ ಕಾಲೇಜು ದ್ವಿತೀಯ ಸ್ಥಾನ, ದಕ್ಷಿಣ ವಲಯದಲ್ಲಿ ಸುರಾನಾ ಕಾಲೇಜು ಪ್ರಥಮ ಸ್ಥಾನ, ನ್ಯಾಷನಲ್ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದವು.ಅಂತಿಮವಾಗಿ ಪುರುಷರ ವಿಭಾಗದಲ್ಲಿ ಸುರಾನಾ ಕಾಲೇಜು ಪ್ರಥಮ ಸ್ಥಾನ, ಎಂ.ಎಸ್. ರಾಮಯ್ಯ ಕಾಲೇಜು ದ್ವಿತೀಯ ಸ್ಥಾನ ಗಳಿಸಿವೆ. ಮಹಿಳಾ ವಿಭಾಗದಲ್ಲಿ ಸೆಂಟ್ ಜೋಸೆಫ್ ಆರ್ಟ್ಸ್ ಸೈನ್ಸ್ ಕಾಲೇಜು ಪ್ರಥಮ ಸ್ಥಾನ, ಶೇಷಾದ್ರಿಪುರಂ ಕಾಲೇಜು ದ್ವೀತಿಯ ಸ್ಥಾನ ಗಳಿಸಿವೆ.  ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಎಂ. ರಾಮಕೃಷ್ಣ ವಿಜೇತರಿಗೆ ಟ್ರೋಫಿ ನೀಡಿದರು. ದೈಹಿಕ ನಿರ್ದೇಶಕ ವಿಕ್ರಮ್,  ಸಂಸ್ಥೆಯ ಕಾರ್ಯದರ್ಶಿ ಸಿ.ರಮೇಶ್, ನಿರ್ದೇಶಕರಾದ ಎಂ.ಎಲ್.ಶಿವಕುಮಾರ್, ತಿಮ್ಮಯ್ಯ, ಪ್ರಾಧ್ಯಾಪಕ ಸತೀಶ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.