ಬೆಂಗಳೂರು: ಕರ್ನಾಟಕದ ಸಿಂಧು ಭಾರದ್ವಾಜ್, ಜಾಕ್ವೆಲಿನ್ ರೋಸ್ ಕುನ್ನತ್ ಹಾಗೂ ಜೆ.ಎಂ. ನಿಶ್ಚಿತಾ ಅವರು ಇಲ್ಲಿ ನಡೆಯುತ್ತಿರುವ ಐಎಫ್ಸಿಐ 76ನೇ ಸೀನಿಯರ್ ರಾಷ್ಟ್ರೀಯ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಮಹಿಳಾ ವಿಭಾಗದ ಸಿಂಗಲ್ಸ್ನಲ್ಲಿ ಪ್ರಧಾನ ಹಂತಕ್ಕೆ ಪ್ರವೇಶಿಸಿದ್ದಾರೆ.

ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಕೋರ್ಟ್ನಲ್ಲಿ ಬುಧವಾರ ನಡೆದ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸಿಂಧು 21-12, 21-16ರಲ್ಲಿ ಕೇರಳದ ಎಂ.ಎಚ್. ಹರಿತಾ ಎದುರು ಗೆಲುವು ಪಡೆದು ಪ್ರಧಾನ ಹಂತ ಪ್ರವೇಶಿಸಿದರು. ಈ ಸುತ್ತಿನ ಪಂದ್ಯಗಳು ಶನಿವಾರ ಆರಂಭವಾಗಲಿವೆ.

ಜಾಕ್ವೆಲಿನ್ 22-20, 15-21, 22-20ರಲ್ಲಿ ರಾಜ್ಯದವರೇ ಆದ ಮಹಿಮಾ ಅಗರ್ವಾಲ್ ಮೇಲೂ, ನಿಶ್ಚಿತಾ 21-15, 21-16ರಲ್ಲಿ ಗುಜರಾತ್ನ ನಿಮ್ಮಿ ಪಾಟೀಲ್ ವಿರುದ್ಧವೂ ಜಯ ಪಡೆದರು. ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಆರ್.ಎನ್. ಸೂರಜ್ ಸೋಲು ಕಂಡರು. ರೈಲ್ವೇಸ್ನ ಕೆ. ದೀಪಕ್ 21-11, 21-13ರಲ್ಲಿ ಕರ್ನಾಟಕದ ಆಟಗಾರನಿಗೆ ಸೋಲುಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.