ಟೋಕಿಯೊ (ಐಎಎನ್ಎಸ್): ಭಾರತದ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ 21-17, 21-10ರಲ್ಲಿ ಸಿಂಗಪುರದ ಮಿಂಗ್ತೈನ್ ಫೂ ಎದುರು ಜಯ ಪಡೆದು ಎರಡನೇ ಸುತ್ತಿಗೆ ಪ್ರವೇಶಿಸಿದರು.

ಬುಧವಾರ ನಡೆದ ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಪಿ. ಕಶ್ಯಪ್ 19-21, 21-14, 21-14ರಲ್ಲಿ ಡೆನ್ಮಾರ್ಕ್ನ ವಿಕ್ಟೊರ್ ಎಕ್ಸೆಲ್ಸೆನಾ ಮೇಲೂ, ಅಜಯ್ ಜಯರಾಮನ್ 21-18, 21-19ರಲ್ಲಿ ಟೈನ್ ಮಿನ್ಹಾ ನುಯಿನ್ ವಿರುದ್ಧವೂ ಜಯ ಸಾಧಿಸಿದರು.

ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲಾ ಗುಟ್ಟಾ ಜೋಡಿ ಮಹಿಳೆಯರ ವಿಭಾಗದ ಡಬಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ 21-8, 21-17ರಲ್ಲಿ ಚೈನೀಸ್ ತೈಪೆಯಾದ ಸಿನ್ ಯುನ್ ಚಾಂಗ್-ಚೇಯ್ ವೆನ್ ಲಾಯಿ ಜೋಡಿ ಎದುರು ಜಯ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.