ಸೋಮವಾರ, ಮೇ 23, 2022
30 °C

ಬ್ಯಾಸ್ಕೆಟ್‌ಬಾಲ್: ಐಬಿಬಿಸಿ, ಬಾಷ್ ತಂಡ ಚಾಂಪಿಯನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಬಿಬಿಸಿ ಮತ್ತು ಬಾಷ್ ತಂಡಗಳು ಕ್ರಮವಾಗಿ ರಾಜ್ಯ `ಬಿ' ಡಿವಿಷನ್ ಮತ್ತು `ಸಿ' ಡಿವಿಷನ್ ಬ್ಯಾಸ್ಕೆಟ್‌ಬಾಲ್ ಲೀಗ್‌ನಲ್ಲಿ ಚಾಂಪಿಯನ್ ಆದವು.



ಕಂಠೀರವ ಕ್ರೀಡಾಂಗಣದ ಕೋರ್ಟ್‌ನಲ್ಲಿ ಗುರುವಾರ ನಡೆದ `ಬಿ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಐಬಿಬಿಸಿ 62-52 ರಲ್ಲಿ ಸ್ಪೋರ್ಟ್ಸ್ ಹಾಸ್ಟೆಲ್ ಬೆಂಗಳೂರು ತಂಡವನ್ನು ಮಣಿಸಿ ಎಂ.ಸಿ. ಶ್ರೀನಿವಾಸ ಸ್ಮಾರಕ ಟ್ರೋಫಿ ಗೆದ್ದುಕೊಂಡಿತು.



ವಿರಾಮದ ವೇಳೆಗೆ 27-22 ರಲ್ಲಿ ಮುನ್ನಡೆ ಸಾಧಿಸಿದ್ದ ವಿಜಯಿ ತಂಡದ ಪರ ಕರಣ್ (25) ಮತ್ತು  ಶಿವ (11) ಉತ್ತಮ ಪ್ರದರ್ಶನ ನೀಡಿದರು.



ಎಸ್. ರಂಗರಾಜನ್ ಸ್ಮಾರಕ ಟ್ರೋಫಿಗೆ ನಡೆದ `ಸಿ' ಡಿವಿಷನ್ ಲೀಗ್‌ನ ಫೈನಲ್‌ನಲ್ಲಿ ಬಾಷ್ ತಂಡ 52-46 ರಲ್ಲಿ ಓರಿಯನ್ಸ್ ವಿರುದ್ಧ ಜಯ ಪಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.