ಲಂಡನ್ (ಪಿಟಿಐ): `ಅಮೃತಸರದ ಸ್ವರ್ಣಮಂದಿರದಲ್ಲಿ 1984ರಲ್ಲಿ ನಡೆದ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ನೇತೃತ್ವದ ವಹಿಸಿದ್ದ ಲೆಫ್ಟಿನೆಂಟ್ ಜನರಲ್ ಕುಲದೀಪ್ ಸಿಂಗ್ ಬ್ರಾರ್ ಮೇಲೆ ಲಂಡನ್ನಲ್ಲಿ ಮೂವರು ಸಿಖ್ ಯುವಕರು ನಡೆಸಿದ ಮಾರಣಾಂತಿಕ ಹಲ್ಲೆ ಪೂರ್ವ ಯೋಜಿತ ಸೇಡಿನ ದಾಳಿಯಾಗಿತ್ತು' ಎಂದು ಬ್ರಿಟನ್ ನ್ಯಾಯಾಲಯ ಹೇಳಿದೆ.

ಮಂದೀಪ್ ಸಿಂಗ್ ಸಂಧು (34), ದಿಲ್ಬಾಗ್ ಸಿಂಗ್ (36) ಮತ್ತು ಹರ್ಜೀತ್ ಕೌರ್ (38) ಸೆಪ್ಟೆಂಬರ್ನಲ್ಲಿ ಬ್ರಾರ್ ಗಂಟಲು ಕತ್ತರಿಸಲು ಪ್ರಯತ್ನಿಸಿದ್ದರು. ಮಂಗಳವಾರ ಸೌತ್ವರ್ಕ್ ಕ್ರೌನ್ ಕೋರ್ಟ್ನಲ್ಲಿ ವಿಚಾರಣೆಗೆ ಹಾಜರಾಗಿದ್ದ ಈ ಮೂವರು, ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದರು.

ಇವರ ಜತೆಯಲ್ಲಿದ್ದ ಬರ್ಜೀಂದರ್ ಸಿಂಗ್ ಸಂಗಾ (33) ದಾಳಿಯಲ್ಲಿ ತನ್ನ ಪಾತ್ರದ ಬಗ್ಗೆ ಈಗಾಗಲೇ ಕೋರ್ಟ್ನಲ್ಲಿ ಹೇಳಿಕೆ ನೀಡಿದ್ದಾನೆ. `ಬ್ರಾರ್, ಪತ್ನಿ ಮೀನಾ ಜತೆ ಲಂಡನ್ನ ವೆಸ್ಟ್ ಎಂಡ್ನಲ್ಲಿ ಖಾಸಗಿಯಾಗಿ ರಜಾ ದಿನ ಕಳೆಯಲು ಬಂದ ವಿಷಯವನ್ನು ಹರ್ಜೀತ್ ಕೌರ್ ಪತ್ತೆ ಹಚ್ಚಿ, ಶಂಕಿತ ಖಲೀಸ್ತಾನಿಗಳಿಗೆ ವಿಷಯ ಮುಟ್ಟಿಸಿದ್ದ. ಬಳಿಕ ಮೂವರೂ ಸೇರಿ ಬ್ರಾರ್ ಕೊಲೆಗೆ ಯತ್ನಿಸ್ದ್ದಿದಾರೆ' ಎಂದು ಪ್ರಾಸಿಕ್ಯೂಟರ್ ಅನಾಬೆಲ್ ದಾರ್ಲೊ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.