ಗುರುವಾರ , ಮೇ 6, 2021
32 °C

ಬ್ರಿಟನ್ ವೀಸಾ ನಿಯಮ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬ್ರಿಟನ್‌ನಲ್ಲಿ ವಾಸಂಗ ಮುಗಿಸಿದ ನಂತರ ಅಲ್ಲಿಯೇ ಕೆಲಸ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳು ಉದ್ಯೋಗ ವೀಸಾಕ್ಕೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಲೋಕಸಭೆಗೆ ತಿಳಿಸಲಾಯಿತು.

ಭಾರತೀಯ ವಿದ್ಯಾರ್ಥಿಗಳು ಬ್ರಿಟನ್‌ನಲ್ಲಿ ವ್ಯಾಸಂಗ ಮಾಡಿದ ನಂತರ ಎರಡು ವರ್ಷಗಳ ಕಾಲ ಅದೇ ವೀಸಾದಲ್ಲಿ ಅಲ್ಲಿ ಉದ್ಯೋಗ ಮಾಡಲು ಅವಕಾಶವಿತ್ತು. ಆದರೆ ಈಗ ನಿಯಮ ಬದಲಾಗಿದ್ದು, ವಿದ್ಯಾರ್ಥಿಗಳು ವ್ಯಾಸಂಗದ ಬಳಿಕ  ಟೈರ್-2 ಸ್ಪಾನ್ಸರ್ ವೀಸಾ ಪಡೆಯಬೇಕಾಗುತ್ತದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಡಿ. ಪುರಂದೇಶ್ವರಿ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.