ಗುರುವಾರ , ಏಪ್ರಿಲ್ 15, 2021
24 °C

ಬ್ರಿಟಿಷ್ ಗುಪ್ತಚರ ಸಂಸ್ಥೆ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಎಎಫ್‌ಪಿ): ಸಿರಿಯಾ ಸರ್ಕಾರದ ವಿರುದ್ಧ ಸಂಘರ್ಷ ನಡೆಸುತ್ತಿರುವ ಅಲ್ಲಿಯ ಬಂಡುಕೋರರು ಯಶಸ್ವಿ ದಾಳಿ ನಡೆಸಲು ಬ್ರಿಟಿಷ್ ಗುಪ್ತಚರ ಸಂಸ್ಥೆ ನೆರವು ನೀಡುತ್ತಿದೆ ಎಂದು ವಿರೋಧ ಪಕ್ಷದ ನಾಯಕರೊಬ್ಬರನ್ನು ಉಲ್ಲೇಖಿಸಿ `ಸಂಡೇ ಟೈಮ್ಸ~ ವರದಿ ಮಾಡಿದೆ.2011ರಲ್ಲಿ ಆರಂಭಗೊಂಡ ಸಿರಿಯಾ ಸರ್ಕಾರ ವಿರೋಧಿ ಸಂಘರ್ಷಕ್ಕೆ ಬ್ರಿಟಿಷ್ ಗುಪ್ತಚರ ಸಂಸ್ಥೆಯು ಬೆಂಬಲ ನೀಡುತ್ತಿದೆ. ಸಿರಿಯಾ ವಿರುದ್ಧ ದಂಗೆ ಎದ್ದಿರುವ `ಫ್ರೀ ಸಿರಿಯನ್ ಆರ್ಮಿ~ (ಎಫ್‌ಎಸ್‌ಎ)ಗೆ ಬ್ರಿಟಿಷ್ ಗುಪ್ತಚರ ಸಂಸ್ಥೆ ನೆರವು ನೀಡಿದೆ. ಸಿರಿಯಾದ ಎಲ್ಲ ವಿದ್ಯಮಾನಗಳನ್ನು ಬ್ರಿಟಿಷ್ ಗುಪ್ತಚರ ಸಂಸ್ಥೆ ಸೈಪ್ರಸ್ ಮೂಲಕ ಗಮನಿಸುತ್ತಿದೆ.ಸಿರಿಯಾ ಬೆಳವಣಿಗೆಗಳ ಕುರಿತು ಅಮೆರಿಕ ಹಾಗೂ ಟರ್ಕಿ ದೇಶಕ್ಕೆ ಬ್ರಿಟಿಷ್ ಗುಪ್ತಚರ ಸಂಸ್ಥೆ ಕಾಲಕಾಲಕ್ಕೆ ಮಾಹಿತಿ ನೀಡುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಾರ್ವಜನಿಕವಾಗಿ ಕಾಣಿಸಿಕೊಂಡ ಅಸಾದ್

ಡಮಾಸ್ಕಸ್ (ಎಎಫ್‌ಪಿ):
ರಕ್ಷಣಾ ಸಚಿವ ಸೇರಿ ಮೂವರನ್ನು ಬಲಿ ತೆಗೆದುಕೊಂಡ ಬಾಂಬ್ ದಾಳಿಯ ನಂತರ ಸಾರ್ವಜನಿಕರಿಂದ ದೂರವಾಗಿದ್ದ ಸಿರಿಯಾದ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಭಾನುವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.ರಂಜಾನ್ ಹಬ್ಬದ ಪ್ರಯುಕ್ತ ಇಲ್ಲಿಯ ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದ ಅಸ್ಸಾದ್ ಅವರನ್ನು ಸರ್ಕಾರಿ ಸ್ವಾಮ್ಯದ ಟಿವಿಯಲ್ಲಿ ತೋರಿಸಲಾಗಿದೆ.  ಜುಲೈ 4 ರಂದು ಸಂಸತ್ತಿನಲ್ಲಿ ಭಾಷಣ ಮಾಡಿದ ಅಸ್ಸಾದ್ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.ಸರ್ಕಾರಿ ಪಡೆಗಳು ಹಾಗೂ ಬಂಡುಕೋರರ ನಡುವೆ ನಿತ್ಯವೂ ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಜುಲೈ 18 ರಂದು ರಾಜಧಾನಿಯಲ್ಲಿರುವ ರಕ್ಷಣಾ ಪಡೆಗಳ ಕೇಂದ್ರ ಕಚೇರಿ ಮೇಲೆ ಬಂಡುಕೋರರು ನಡೆಸಿದ ಬಾಂಬ್ ದಾಳಿಯಲ್ಲಿ ಅಸ್ಸಾದ್ ಅವರ ಹತ್ತಿರದ ಸಂಬಂಧಿ ಸೇರಿ ಐವರು ಹತ್ಯೆಗೀಡಾಗಿದ್ದು ಇದು ಸರ್ಕಾರಕ್ಕೆ ದೊಡ್ಡ ಹಿನ್ನಡೆ ಎನಿಸಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.