ಗುರುವಾರ , ಜೂನ್ 24, 2021
28 °C

ಬ್ಲೂ ಫಿಲಂ ಪ್ರಕರಣ: ಮತ್ತಷ್ಟು ಶಾಸಕರಿಗೆ ನೋಟಿಸ್ ಜಾರಿಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು, (ಪಿಟಿಐ): ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಬ್ಲೂ ಫಿಲಂ ವೀಕ್ಷಿಸಿದ ಬಿಜೆಪಿಯ ಮೂವರು ಶಾಸಕರು ಸಚಿವ ಸ್ಥಾನ ಕಳೆದುಕೊಳ್ಳುವಂತೆ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಸದನ ಸಮಿತಿಯ ಅಧ್ಯಕ್ಷ ಶ್ರೀಶೈಲಪ್ಪ ಬಿದರೂರು ಅವರು, ಇನ್ನೂ ಕೆಲವು ಶಾಸಕರನ್ನೂ ವಿಚಾರಣೆಗೊಳಿಪಡಿಸಲು ಚಿಂತನೆ ನಡೆಸುತ್ತಿದ್ದಾರೆ.

ಬ್ಲೂ ಫಿಲಂ ನೋಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಿಜೆಪಿ ಶಾಸಕರೊಂದಿಗೆ ಇನ್ನೂ ಕೆಲವು ಶಾಸಕರು ಅದನ್ನು ನೋಡಿದ್ದು ಗೊತ್ತಾಗಿದ್ದು, ಅವರನ್ನೂ ವಿಚಾರಣೆಗೆ ಕರೆಯಿಸುವ ಕುರಿತು ಕಾನೂನು ಏನು ಹೇಳುತ್ತದೆ ಎಂಬುದನ್ನು ಪರಿಶೀಲಿಸಿ, ಅವರಿಗೂ ಕೂಡ ಸಮನ್ಸ್  ಜಾರಿಗೊಳಿಸಲಾಗುವುದು ಎಂದು ಶ್ರೀಶೈಲಪ್ಪ ಬಿದರೂರು ಗುರುವಾರ ಇಲ್ಲಿ ತಿಳಿಸಿದ್ದಾರೆ. 

 

ಲಕ್ಷ್ಮಣ್ ಎಸ್. ಸವದಿ, ಸಿ. ಸಿ. ಪಾಟೀಲ್ ಮತ್ತು ಜೆ. ಕೃಷ್ಣ ಪಾಲೆಮರ್ ಅವರು ಸದನದಲ್ಲಿ ಅಶ್ಲೀಲ ಚಿತ್ರದ ತುಣುಕುಗಳನ್ನು ವೀಕ್ಷಿಸಿದ ಆರೋಪದ ಮೇಲೆ ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆಯನ್ನು ನೀಡಿದ್ದರು.ಈ ಮೂವರು ಬಿಜೆಪಿ ಶಾಸಕರು ಪ್ರಕರಣದ ತನಿಖಾ ಸಮಿತಿಯ ಮುಂದೆ ಗುರುವಾರ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದರು.~ಮೂವರು ಬಿಜೆಪಿ ಶಾಸಕರು ಇಂದು ಸಮಿತಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದಾರೆ. ಸಮಿತಿಯ ಮುಂದಿನ ಸಭೆಯು ಮಾರ್ಚ್ 15ರಂದು ನಡೆಯಲಿದೆ. ನಾಳೆ ವಿಧಾನಸಭೆಯ ಸ್ಪೀಕರ್ ಅವರನ್ನು ಸಂಪರ್ಕಿಸಿ, ಈ ಹಿಂದೆ ಪ್ರಕರಣದ ತನಿಖಾ ವರದಿಯನ್ನು ಸಲ್ಲಿಸಲು ನಿಗದಿ ಪಡಿಸಿರುವ ಮಾರ್ಚ್ 13 ದಿನಾಂಕವನ್ನು ವಿಸ್ತರಿಸುವಂತೆ ಕೋರಿಕೊಳ್ಳಲಾಗುವುದು~ ಎಂದು ಅವರು ತಿಳಿಸಿದರು.`ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಬ್ಲೂ ಫಿಲಂ ವೀಕ್ಷಣೆಯನ್ನು ಕೇವಲ ಮೂವರು ಶಾಸಕರಷ್ಟೇ ಮಾಡಿಲ್ಲ. ಅವರೊಂದಿಗೆ ಇನ್ನೂ 8-10 ಬೇರೆ ಬೇರೆ ಪಕ್ಷಗಳ ಶಾಸಕರು ಇದ್ದಾರೆಂದು ಹೇಳಿ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಶಾಸಕ ನೆಹರೂ ಓಲೇಕಾರ ಅವರು ಭಾನುವಾರ ರಾಜಕೀಯ ವಲಯದಲ್ಲಿ ಕಂಪನವನ್ನು ಎಬ್ಬಿಸಿದ್ದರು.~

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.