ಭಾನುವಾರ, ಜನವರಿ 19, 2020
24 °C

ಭದ್ರತಾ ಸಂಬಂಧ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ಜಂಟಿ ಸೇನಾ ತರಬೇತಿ ಕಾರ್ಯ-­ಕ್ರಮಗಳನ್ನು ಹಮ್ಮಿ­ಕೊ­ಳ್ಳುವುದರ ಮೂಲಕ ಭದ್ರತಾ ಕ್ಷೇತ್ರಕ್ಕೆ ಸಂಬಂಧಿಸಿದ ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ಕುರಿತು ಭಾರ­ತೀಯ ಸೇನೆಯ ಮುಖ್ಯಸ್ಥ ಜನರಲ್‌ ಬಿಕ್ರಮ ಸಿಂಗ್‌ ಮತ್ತು ಅಮೆರಿಕ ಸೇನೆಯ ಹಿರಿಯ ಅಧಿಕಾ­ರಿಗಳು ಚರ್ಚೆ ನಡೆಸಿದರು.ಅಮೆರಿಕಕ್ಕೆ ನಾಲ್ಕು ದಿನದ ಪ್ರವಾಸ ಕೈಗೊಂಡಿರುವ ಸಿಂಗ್‌ ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಗಳನ್ನೂ ಭೇಟಿ ಮಾಡಿದರು.

ಸೇನಾ ಸಹಕಾರ ಮತ್ತು ಅವಕಾಶಗಳ ಕುರಿತು ಸಿಂಗ್‌ ಮತ್ತು ಅಮೆರಿಕ ಸೇನೆಯ ಮುಖ್ಯಸ್ಥ ಜನರಲ್‌ ರಾಯ್‌ ಒಡಿಯೆರ್ನೊ ಮಾತುಕತೆ ನಡೆಸಿದರು.

ಪ್ರತಿಕ್ರಿಯಿಸಿ (+)