ಗುರುವಾರ , ಮೇ 6, 2021
31 °C

ಭದ್ರಾವತಿ: ಡೆಂಗೆ ವಿರುದ್ಧ ಜಾಗೃತಿ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: ಡೆಂಗೆ ವಿರುದ್ಧ ಜಾಗೃತಿ ಅವಶ್ಯ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಗುಡದಪ್ಪ ಹೇಳಿದರು. 

ಸೋಮವಾರ ತಾಲ್ಲೂಕು ಆಡಳಿತ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜರುಗಿದ ಡೆಂಗೆ ಕುರಿತ  ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ನಡೆಸಲಾದ ಕಾರ್ಯಕ್ರಮ ಉದ್ಘಾಟಿಸಿ   ಮಾತನಾಡಿದರು.ಇಲ್ಲಿ ತನಕ ತಾಲ್ಲೂಕಿನಲ್ಲಿ 21 ಡೆಂಗೆ ಜ್ವರದ ಪ್ರಕರಣಗಳು ದಾಖಲಾಗಿದ್ದು, ಆಪೈಕಿ 5 ಪ್ರಕರಣಗಳು ಗ್ರಾಮಾಂತರ ಪ್ರದೇಶಗಳಲ್ಲಿ ಕಂಡು ಬಂದಿದೆ.  ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜನರ ಬಳಿ ತೆರಳಿ ಮನೆ ಜಾಗೃತಿ ಮೂಡಿಸುವ ಕೆಲಸ ನಡೆಸಿದ್ದಾರೆ ಎಂದರು.ತಹಶೀಲ್ದಾರ್ ಸಿದ್ದಮಲ್ಲಪ್ಪ, ಉಪ ತಹಸೀಲ್ದಾರ್ ನಫೀಜಾ ಬೇಗಂ, ತಾ.ಪಂ. ಕಾರ್ಯನಿರ್ವಹ ಣಾಧಿಕಾರಿ ಮಲ್ಲೇಶಪ್ಪ, ನಗರಸಭಾ ಆಯುಕ್ತ ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಯ್ಯ, ಮಾಜಿ ನಗರಸಭಾ ಸದಸ್ಯರಾದ ಬಿ.ಟಿ.ನಾಗರಾಜ್, ದಿಲ್‌ದಾರ್, ಅಂಜುಮಾನ್ ಸಂಸ್ಥೆ ಪೀರ್ ಶರೀಫ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ, ಶಿಕ್ಷಕರು, ವಿದ್ಯಾರ್ಥಿಗಳು  ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.