ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕಟಿಬದ್ಧ: ಪಾಕ್

ಭಾನುವಾರ, ಮೇ 26, 2019
22 °C

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕಟಿಬದ್ಧ: ಪಾಕ್

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ತಾನೂ ಯಾವತ್ತೂ ಕಟಿಬದ್ಧವಾಗಿರುತ್ತೇನೆ ಎಂದು ಪಾಕಿಸ್ತಾನ ಪುನರುಚ್ಚರಿಸಿದೆ.ಅಮೆರಿಕದ ಅವಳಿ ವಾಣಿಜ್ಯ ಕಟ್ಟಡಗಳ ಮೇಲೆ ಉಗ್ರರು ನಡೆಸಿದ ದಾಳಿಗೆ 10 ವರ್ಷದ ತುಂಬಿದ ಹಿನ್ನೆಲೆಯಲ್ಲಿ ಪಾಕ್‌ನ ವಿದೇಶಾಂಗ ಸಚಿವಾಲಯ ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ ಎಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.`ಪಾಕಿಸ್ತಾನವು ಸ್ವತಃ ತನ್ನ ನೆಲದಲ್ಲಿಯೇ ಭೀಕರ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಇದನ್ನು ಮೂಲೋತ್ಪಾಟನೆ ಮಾಡಲು ನಾವು ವಿದೇಶಗಳ ಸಹಕಾರವನ್ನೂ ಬಯಸಿದ್ದೇವೆ~ ಎಂದು ಹೇಳಿಕೆ ನೀಡಿದೆ.ಶ್ರದ್ಧಾಂಜಲಿ:

ನ್ಯೂಯಾರ್ಕ್‌ನ ಅವಳಿ ವಾಣಿಜ್ಯ ಕಟ್ಟಡದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಭಾನುವಾರ ಇಸ್ಲಾಮಾಬಾದ್‌ನ ಅಮೆರಿಕದ ರಾಯಭಾರ ಕಚೇರಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry