ಶನಿವಾರ, ಫೆಬ್ರವರಿ 27, 2021
20 °C

ಭರತನಾಟ್ಯ ರಂಗಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭರತನಾಟ್ಯ ರಂಗಪ್ರವೇಶ

ಆರಾಧನಾ ಸ್ಕೂಲ್ ಆಫ್ ಡಾನ್ಸ್: ಶುಕ್ರವಾರ  ಸೌಮ್ಯ ಆರ್. ಪುರೋಹಿತ್ ಅವರ ಭರತನಾಟ್ಯ ರಂಗಪ್ರವೇಶ, ಅತಿಥಿಗಳು: ಎಚ್. ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಡಾ. ಮಹೇಶ ಜೋಶಿ, ಎಸ್. ಐ. ಭಾವಿಕಟ್ಟಿ, ಡಾ. ಎಂ. ಸೂರ್ಯ ಪ್ರಸಾದ್.

ಸೌಮ್ಯ 5ರ ಎಳವೆಯಲ್ಲೇ ಭರತನಾಟ್ಯ ಕಲಿಯಲಾರಂಭಿಸಿದವರು.13 ವರ್ಷದಿಂದ ಸಂಜಯ್ ನಗರದ ಆರಾಧನಾ ನೃತ್ಯ ಶಾಲೆಯಲ್ಲಿ ನೃತ್ಯಾಭ್ಯಾಸ ಮಾಡುತ್ತ್ದ್ದಿದು, ಮಹಾಬಲಿಪುರಂ ಉತ್ಸವ, ತಂಜಾವೂರಿನ ಭಾರತೀಯ ನೃತ್ಯ ಉತ್ಸವ, ಹಂಪಿ ಉತ್ಸವ, ಪಣಜಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ಮುಂಬೈನಲ್ಲಿ ನಡೆದ ಅಖಿಲ ಭಾರತ ಗಮಕ ಸಮ್ಮೇಳನಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆಭರತನಾಟ್ಯದ ಜೊತೆ 6ನೇ ವರ್ಷದಲ್ಲೇ ಸಂಗೀತಾಭ್ಯಾಸವನ್ನು ಆರಂಭಿಸ್ದ್ದಿದವರು. ಸಂಗೀತದಲ್ಲಿ ಜ್ಯೂನಿಯರ್ ಪರೀಕ್ಷೆ, ಮೀರಜ್‌ನ ಗಂಧರ್ವ ಮಹಾವಿದ್ಯಾಲಯದ ಸಂಗೀತ ಪರೀಕ್ಷೆಯಲ್ಲೂ ಉತ್ತಮ ಗ್ರೇಡ್ ಪಡೆದು ತೇರ್ಗಡೆಯಾಗಿದ್ದಾರೆ.ಪ್ರತಿಭಾ ಹೆಗ್ಡೆ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಪಂಡಿತ್ ವಿಶ್ವನಾಥ ನಾಕೋಡ ಅವರ ಬಳಿ ಸುಗಮ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.ಶಾಸ್ತ್ರೀಯ ನೃತ್ಯದಲ್ಲಿ ಪರಿಪೂರ್ಣತೆ ಮತ್ತು ಪರಿಶುದ್ಧತೆ ಇರಬೇಕೆಂದು ಬಯಸುವ ಸೌಮ್ಯ ಜ್ಞಾನದಾಹಿ. ಆಕೆಯ ಅಭಿನಯ ನೋಡುಗರ ಮೇಲೆ ಮಾಂತ್ರಿಕ ಜಾಲ ಬೀಸುತ್ತದೆ.ನೃತ್ಯ, ಸಂಗೀತದ ಜೊತೆ ಪಠ್ಯದಲ್ಲೂ ಮುಂದಿದ್ದು ಪಿಯುಸಿ ಪೂರ್ಣಗೊಳಿಸಿದ್ದಾರೆ. ಎಂಜಿನಿಯರಿಂಗ್ ಕಾಲೇಜು ಪ್ರವೇಶದ ನಿರೀಕ್ಷೆಯಲ್ಲಿದ್ದಾರೆ.ಸೌಮ್ಯಳ ಗುರು ವಿದ್ವಾನ್ ನಾಗಭೂಷಣ ಎರಡು ದಶಕಗಳಿಂದ ಭರತನಾಟ್ಯ ಕ್ಷೇತ್ರದಲ್ಲಿ ಇದ್ದಾರೆ.ಚೆನ್ನೈ ಕಲಾಕ್ಷೇತ್ರ ಮಾದರಿಯ ನೃತ್ಯಕ್ಕೆ ಹೆಸರಾದ ಉಷಾ ದಾತಾರ್ ಮತ್ತು ವಿದುಷಿ ಗೀತಾ ಅನಂತ್‌ನಾರಾಯಣನ್ ಅವರ ಶಿಷ್ಯರು. ಅವರ ಆರಾಧನಾ ನೃತ್ಯ ಶಾಲೆ ಹಲವು ಪ್ರತಿಭೆಗಳಿಗೆ ವೇದಿಕೆಯಾಗಿದೆ.ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 6. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.