ನವದೆಹಲಿ (ಪಿಟಿಐ/ಐಎಎನ್ಎಸ್): ಮೂರು ರಾಜ್ಯಗಳಲ್ಲಿ ಸೋಮವಾರ ನಡೆದ ಕೊನೆಯ ಹಂತದ ಮತದಾನದೊಂದಿಗೆ ಮಹಾಚುನಾವಣೆ ಅಂತ್ಯಗೊಂಡಿದೆ. ಈ ಬಾರಿ ಶೇ 66.38ರಷ್ಟು ಭರ್ಜರಿ ಮತದಾನವಾಗಿರುವುದು ಲೋಕಸಭೆ ಚುನಾವಣೆಯ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.

1984ರಲ್ಲಿ ನಡೆದ ಚುನಾವಣೆಯಲ್ಲಿ ಶೇ 64.01ರಷ್ಟು ಮತದಾನವಾಗಿತ್ತು. 2009ರಲ್ಲಿ ಈ ಪ್ರಮಾಣ ಶೇ 58.19ರಷ್ಟು ಇತ್ತು.
ಉತ್ತರಪ್ರದೇಶ (18 ಕ್ಷೇತ್ರ) ಪಶ್ಚಿಮ ಬಂಗಾಳ (17) ಹಾಗೂ ಬಿಹಾರ (6) ರಾಜ್ಯಗಳ ಶೇ 60ರಷ್ಟು ಮತದಾರರು ಕೊನೆಯ ಹಂತದ

ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಎಲ್ಲ ಹಂತಗಳೂ ಸೇರಿ 50 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ನ ಅಜಯ್ ರಾಯ್ ಅಖಾಡಕ್ಕಿಳಿದ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರ ಅಂತಿಮ ಹಂತದ ಮತದಾನದಲ್ಲಿ ಇಡೀ ದೇಶದ ಗಮನ ಸೆಳೆದಿತ್ತು.

ಪಶ್ಚಿಮಬಂಗಾಳದಲ್ಲಿ ಸಿಪಿಎಂ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ನಡೆದ ಮಾರಾಮಾರಿ ಬಿಟ್ಟರೆ, ಬಹುತೇಕ ಶಾಂತಿಯುತ ಮತದಾನ ನಡೆಯಿತು. ಮೋದಿ ಅವರು ವಿಡಿಯೊ ಸಂದೇಶ ಬಿಡುಗಡೆ ಮಾಡಿದ್ದು ಹಾಗೂ ಅಜಯ್ ರಾಯ್ ತಮ್ಮ ಕುರ್ತಾದ ಮೇಲೆ ಪಕ್ಷದ ಚಿನ್ಹೆಯನ್ನು ಅಂಟಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಯಿತು.

ಪಶ್ಚಿಮಬಂಗಾಳದಲ್ಲಿ ಶೇ 79.96 ರಷ್ಟು, ಬಿಹಾರದಲ್ಲಿ ಶೇ 58 ಹಾಗೂ ಉ.ಪ್ರದೇಶದಲ್ಲಿ ಶೇ 55.29ರಷ್ಟು ಮತದಾನವಾಗಿದೆ.
ಪ್ರತಿಷ್ಠಿತ ವಾರಾಣಸಿ ಕ್ಷೇತ್ರದಲ್ಲಿ ಶೇ 55.34ರಷ್ಟು ಮತದಾನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.