ಗುರುವಾರ , ಮೇ 19, 2022
23 °C

ಭವಿಷ್ಯನಿಧಿ ಪಿಂಚಣಿ ಪರಿಷ್ಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭವಿಷ್ಯನಿಧಿ ಪಿಂಚಣಿ ಯೋಜನೆ 1995 ನೇ ನವೆಂಬರ್‌ನಲ್ಲಿ ಪ್ರಾರಂಭವಾಗಿದ್ದು ಅದನ್ನು ಇದುವರೆಗೂ ಪರಿಷ್ಕರಿಸಿಯೇ ಇಲ್ಲ. ಇದಾದ  ನಂತರ ಎರಡು ವೇತನ ಪರಿಷ್ಕರಣೆಯಾಗಿದ್ದರೂ  ಇದನ್ನು  ಮಾತ್ರ ಕೇಂದ್ರ ಸರ್ಕಾರ ಮರತೇಬಿಟ್ಟಂತಿದೆ.ಈ ಪಿಂಚಣಿಯ ಗರಿಷ್ಠ  ಮೊತ್ತ  2000 ರೂಪಾಯಿಯನ್ನೂ ದಾಟಿಲ್ಲ. ನೌಕರರು ನಿವೃತ್ತಿಯಾದ ಮೇಲೆ  ಕಂಪೆನಿಯಿಂದ ಸವಲತ್ತುಗಳೂ ಇರುವುದಿಲ್ಲ. ಕೇಂದ್ರ  ಸರ್ಕಾರಿ  ಸ್ವಾಮ್ಯದ  ಕಂಪೆನಿಗಳೂ ಸೇರಿದಂತೆ  ಎಲ್ಲ ವರ್ಗದ ಇ ಪಿ ಎಫ್ ಪಿಂಚಣಿದಾರರದೂ ಇದೇ  ಕಥೆ.

 

ವಾಸ್ತವ ಪರಿಸ್ಥಿತಿ  ಹೀಗಿರುವಾಗ, ಕೇಂದ್ರ  ಸರ್ಕಾರ ಈ ಪಿಂಚಣಿಯನ್ನು ಪುನರ್‌ಪರಿಶೀಲಿಸಿ, ಈ ಯೋಜನೆಗಾಗಿ ಭವಿಷ್ಯ ನಿಧಿಯಲ್ಲಿ ಮೊದಲೇ ಹಣ ನೀಡಿದ ನೌಕರರ ಹಿತವನ್ನು ಕಾಯುವ ಬಗೆಗೆ ಗಮನಹರಿಸುವುದು ಅವಶ್ಯ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.