ಭಾರತಕ್ಕೆ ಆರು ಚಿನ್ನ

7

ಭಾರತಕ್ಕೆ ಆರು ಚಿನ್ನ

Published:
Updated:

ನವದೆಹಲಿ (ಪಿಟಿಐ): ಉತ್ತಮ ಪ್ರದರ್ಶನ ಮುಂದುವರಿಸಿರುವ ಭಾರತದ ಸ್ಪರ್ಧಿಗಳು ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗಗಳಲ್ಲಿ ಆರು ಚಿನ್ನದ ಪದಕ ಜಯಿಸಿದರು.ನಾಲ್ಕನೇ ದಿನವಾದ ಶುಕ್ರವಾರ ಎಲ್. ಮೋನಿಕಾ ದೇವಿ (ಮಹಿಳೆಯರ ಸೀನಿಯರ್) 69 ಕೆ.ಜಿ. ಭಾರ ಎತ್ತುವ ವಿಭಾಗದಲ್ಲಿ ಚಿನ್ನ ಗೆದ್ದರು. ಇವರು (96+117 ಒಟ್ಟು 213) ಎತ್ತಿದರು. ಮಾಂಗ್ಟೆ ಪಿ. ಕೋಮ್ (69 ಕೆ.ಜಿ. ಜೂನಿಯರ್ ಮಹಿಳಾ ವಿಭಾಗ) ಸಹ ಸ್ವರ್ಣದ ಪದಕಕ್ಕೆ ಕೊರಳೊಡ್ಡಿದರು. ಈ ಸ್ಪರ್ಧಿ (80+100 ಒಟ್ಟು 180 ಕೆಜಿ) ಭಾರ ಎತ್ತಿದರು. ಈ ಮೂಲಕ ಭಾರತ ಈ ಚಾಂಪಿಯನ್‌ಷಿಪ್‌ನಲ್ಲಿ ಜಯಿಸಿದ ಪದಕಗಳ ಸಂಖ್ಯೆಯನ್ನು 95ಕ್ಕೆ ಹೆಚ್ಚಿಸಿಕೊಂಡಿತು.ಗುರುವಾರ ಭಾರತದ ಸ್ಪರ್ಧಿಗಳು 17 ಚಿನ್ನ ಸೇರಿದಂತೆ ಒಟ್ಟು 56 ಪದಕ ಜಯಿಸಿದ್ದರು. ಸ್ನ್ಯಾಚ್, ಕ್ಲೀನ್ ಹಾಗೂ ಜೆರ್ಕ್ ವಿಭಾಗದಲ್ಲಿ ತಲಾ ಒಂದೊಂದು ಪದಕಗಳು ಭಾರತದ ಮಡಿಲಿಗೆ ಸೇರಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry