ಭಾ ರತ - ಅಮೆರಿಕ ಮಧ್ಯದ ನಾಲ್ಕನೇ ಕಾರ್ಯತಂತ್ರ ಸಂವಾದಕ್ಕಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಅವರು ಭಾರತ ಪ್ರವಾಸದಲ್ಲಿದ್ದಾರೆ. ವಿದೇಶಾಂಗ ಕಾರ್ಯದರ್ಶಿಯಾಗಿ ಭಾರತಕ್ಕೆ ಕೆರ್ರಿ ಅವರ ಮೊದಲ ಭೇಟಿ ಇದು.

ಕೆರ್ರಿ ಅವರು ಪಾಕಿಸ್ತಾನ ಭದ್ರತಾ ವ್ಯವಸ್ಥೆ ಬಗ್ಗೆ ಸಹಾನುಭೂತಿ ನಿಲುವು ಹೊಂದಿದವರು ಎಂದು ಹೆಸರಾದವರು. ಹೀಗಾಗಿಯೇ ಭಾರತಕ್ಕೆ ಆಗಮಿಸಿದ ನಂತರ ಮಾಡಿದ ಮೊದಲ ಭಾಷಣದಲ್ಲಿಯೇ ಪಾಕಿಸ್ತಾನದ ಜೊತೆಗಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಭಾರತಕ್ಕೆ ಸಲಹೆ ಮಾಡಿದ್ದು ರಾಜತಾಂತ್ರಿಕ ವಲಯದಲ್ಲಿ ಇರಿಸುಮುರಿಸು ಸೃಷ್ಟಿಸಿದ್ದು ಹೌದು.

ಈ ಸಂವಾದ ಅತ್ಯಂತ ಪ್ರಮುಖ ಕಾಲಘಟ್ಟದಲ್ಲಿ ನಡೆಯುತ್ತಿದೆ ಎಂಬುದನ್ನು ನಾವು ಮರೆಯುವಂತಿಲ್ಲ. 2014ರಲ್ಲಿ ಅಮೆರಿಕ ನೇತೃತ್ವದ ಸೇನಾಪಡೆಗಳು ಆಫ್ಘಾನಿಸ್ತಾನದಿಂದ ವಾಪಸಾಗಲಿವೆ. ಇದು ಭಾರತದ ಪ್ರಾದೇಶಿಕ ಭದ್ರತೆಯ ಕಾಳಜಿಯೊಂದಿಗೆ ಹೆಣೆದುಕೊಂಡಿದೆ. ಅಂತರರಾಷ್ಟ್ರೀಯ ಭಯೋತ್ಪಾದನೆಗೆ ಆಫ್ಘಾನಿಸ್ತಾನ ಮತ್ತೆ ಕೇಂದ್ರವಾಗಬಾರದು ಎಂಬುದು ಭಾರತದ ಕಳಕಳಿ. ಅಮೆರಿಕದ ಆಫ್ಘಾನಿಸ್ತಾನ ನೀತಿ ಕುರಿತಂತೆ, ಭಾರತ ಯಾವುದೇ ರಾಜಿಗೂ ಒಳಗಾಗದಿರುವುದು ಒಳಿತು.

ಈ ನಿಟ್ಟಿನಲ್ಲಿ ತಾಲಿಬಾನ್ ಹಾಗೂ ಪಾಕಿಸ್ತಾನ ಮೂಲದ ಹಕಾನಿ ನೆಟ್ವರ್ಕ್ ಜೊತೆ ದೋಹಾದಲ್ಲಿ ಸಂಧಾನ ಯತ್ನವನ್ನು ಅಮೆರಿಕ ಆರಂಭಿಸಿರುವುದು ಭಾರತಕ್ಕೆ ಕಳವಳಕಾರಿಯಾದುದಾಗಿದೆ. ಕಾಬೂಲ್ನಲ್ಲಿ ಭಾರತ ರಾಯಭಾರ ಕಚೇರಿಯ ಮೇಲೆ ಈ ಹಿಂದೆ ಆಕ್ರಮಣ ನಡೆಸಿದ್ದ ಹಕಾನಿ ನೆಟ್ವರ್ಕ್, ಪಾಕಿಸ್ತಾನ ಸೇನೆ ಜೊತೆಗೂ ನಿಕಟವಾಗಿರುವುದು ತಿಳಿದ ಸಂಗತಿ. ಅಮೆರಿಕದ ಈ ಅವಕಾಶವಾದಿ ಕ್ರಮ ಭಾರತಕ್ಕೆ ನೀಡಲಾಗಿದ್ದ ಆಶ್ವಾಸನೆಗಳಿಗೆ ವಿರುದ್ಧವಾಗಿದೆ.

ಜೊತೆಗೆ, ತಾಲಿಬಾನ್ ಜೊತೆ ಯಾವುದೇ ಮಾತುಕತೆ ನಡೆಸಲು ಅಂತರರಾಷ್ಟ್ರೀಯ ಸಮುದಾಯ ಈ ಹಿಂದೆಯೇ ರೂಪಿಸಿರುವ ಪೂರ್ವ ಷರತ್ತುಗಳ (ಕೆಂಪು ಸಾಲುಗಳು) ಉಲ್ಲಂಘನೆಯೂ ಆದಂತಾಗುತ್ತದೆ ಎಂಬ ಭಾರತದ ಆತಂಕವನ್ನು ಗ್ರಹಿಸುವುದು ಅಗತ್ಯ.

ಭಾರತದ ಆತಂಕವನ್ನು ಶಮನ ಮಾಡುವ ಪ್ರಯತ್ನವನ್ನು ಕೆರ್ರಿ ಮಾಡಿದ್ದಾರೆ. ಆಫ್ಘಾನಿಸ್ತಾನದಲ್ಲಿನ `ಕ್ಲಿಷ್ಟತೆ'ಗಳ ಕುರಿತಂತೆ ಅಮೆರಿಕ ವಾಸ್ತವಿಕ ದೃಷ್ಟಿ ಹೊಂದಿದೆ ಎಂದೂ ಸ್ಪಷ್ಟಪಡಿಸಲು ಕೆರ್ರಿ ಯತ್ನಿಸಿದ್ದಾರೆ. ಭಾರತದ ಮಾರುಕಟ್ಟೆಗೆ ಸಂಪರ್ಕ ಪಡೆದುಕೊಳ್ಳಲು ಯತ್ನಿಸುತ್ತಿರುವ ಅಮೆರಿಕ, ಭಾರತದ ಆಯಕಟ್ಟಿನ ಹಿತಾಸಕ್ತಿಗಳ ರಕ್ಷಣೆಗೆ ಬದ್ಧವಾಗಲು ಸಿದ್ಧವಾಗಿರಬೇಕು ಎಂಬುದನ್ನು ಅಮೆರಿಕಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ.

ಶೀತಲ ಸಮರ ಅಂತ್ಯವಾದ ನಂತರ ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಹಾಗೂ ಅಮೆರಿಕ ಮಧ್ಯದ ಬಾಂಧವ್ಯ ಚಿಗುರಿತ್ತು. ಆದರೆ ಈಚಿನ ವರ್ಷಗಳಲ್ಲಿ ಈ ಬಾಂಧವ್ಯ ಹೊಸ ಎತ್ತರಗಳನ್ನು ತಲುಪಲು ಸಾಧ್ಯವಾಗಿಲ್ಲ. ಸಹಕಾರದ ಹೊಸ ಹಾದಿಗಳನ್ನು ಹುಡುಕುವಲ್ಲಿ ಎರಡೂ ರಾಷ್ಟ್ರಗಳು ಗಂಭೀರ ಪ್ರಯತ್ನಗಳನ್ನು ನಡೆಸಿಲ್ಲ.

ವಲಸೆ ಹಾಗೂ ಹೊರಗುತ್ತಿಗೆಗೆ ಸಂಬಂಧಿಸಿದಂತೆ ಅಮೆರಿಕ ತಾಳಿರುವ ಬಿಗಿ ನೀತಿಗಳು ಭಾರತಕ್ಕೆ ಅನುಕೂಲಕರವಾಗಿಲ್ಲ. ಈ ವಿಚಾರದಲ್ಲಿ ಐಟಿ ವೃತ್ತಿಪರರು ಮತ್ತು ಕೌಶಲ ಹೊಂದಿದ ಕಾರ್ಮಿಕರ ಕಾಳಜಿಗಳು ಅಮೆರಿಕ - ಭಾರತ ಬಾಂಧವ್ಯದಲ್ಲಿ ಮುಖ್ಯವಾಗುತ್ತದೆ. ಎರಡೂ ರಾಷ್ಟ್ರಗಳು ತಮ್ಮದೇ ನೆಲೆಗಳಲ್ಲಿ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿರುವುದರಿಂದ ಸಮಾನ ನೆಲೆಯಲ್ಲಿ ಕೊಡುಕೊಳ್ಳುವಿಕೆಯ ಧೋರಣೆ ಮುಖ್ಯವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.