ಇಸ್ಲಾಮಾದ್ (ಪಿಟಿಐ): ದೇಶದ ಮುಖ್ಯ ಜಲ ಸಂಪನ್ಮೂಲವಾಗಿರುವ ಸಿಯಾಚಿನ್ನಲ್ಲಿ ಭಾರತೀಯ ಸೇನೆಯು ಪರಿಸರವನ್ನು ಮಲೀನ ಮಾಡುತ್ತಿದೆ ಎಂದು ಬುಧವಾರ ಆರೋಪಿಸಿರುವ ಪಾಕಿಸ್ತಾನವು, ಭಾರತ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಹೇಳಿದೆ.

ಪಾಕಿಸ್ತಾನದ ಪ್ರಧಾನಮಂತ್ರಿಗಳಿಗೆ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ವ್ಯವಹಾರಗಳ ಸಲಹೆಗಾರರಾಗಿರುವ ಸರ್ತಾಜ್ ಅಜೀಜ್ ಅವರು ಸಿಯಾಚಿನ್ನಲ್ಲಿರುವ ಭಾರತೀಯ ಸೇನೆಯು ಪಾಕಿಸ್ತಾನದ ಪರಿಸರಕ್ಕೆ `ಗಂಭೀರ ಅಪಾಯ' ಉಂಟು ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ ನೀರಿನ ಕೊರತೆ ಎದುರಿಸುತ್ತಿದೆ. ಪಾಕ್ನ ಜಲ ಮೂಲವಾದ ಸಿಯಾಚಿನ್ನಲ್ಲಿ ಭಾರತದ ಸೈನಿಕರು ದೈನಂದಿನ ಚಟುವಟಿಕೆಗಳಿಗೆ ಬಳಸಿದ ವಸ್ತುಗಳ ಬಿಸಾಡುವ ಮೂಲಕ ಹಿಮವನ್ನು ಮಲೀನಗೊಳಿಸುತ್ತಿದ್ದು, ಇದು ಹಿಮನದಿಗಳ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದು ಅಜೀಜ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.