ಸೋಮವಾರ, ಜೂನ್ 21, 2021
28 °C
ವಿದೇಶಿ ಸಂಕ್ಷಿಪ್ತ ಸುದ್ದಿಗಳು

ಭಾರತೀಯನಿಗೆ ಅಮೆರಿಕದ ಉನ್ನತ ಹುದ್ದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ಕೇರಳ ಮೂಲದ ಭಾರತೀಯ ಅಮೆರಿಕ ಪ್ರಜೆ ಅರುಣ್‌ ಎಂ. ಕುಮಾರ ಅವರನ್ನು ಅಮೆ­ರಿಕ ಸಂಸತ್‌ ಪ್ರಮುಖ ಆಡಳಿತ ಹುದ್ದೆಗೆ ನೇಮಕ ಮಾಡಿದೆ.



ಅಮೆರಿಕದ ಅಂತರರಾಷ್ಟ್ರೀಯ ವ್ಯಾಪಾರ ಆಡಳಿತ  ಕಚೇರಿಯಲ್ಲಿ ಸಹಾ­ಯಕ ವಾಣಿಜ್ಯ ಕಾರ್ಯದರ್ಶಿ ಮತ್ತು ಮಹಾ ನಿರ್ದೇಶಕರಾಗಿ ಅವ­ರನ್ನು ನೇಮಿ­ಸ­ಲಾಗಿದೆ. ಈ ಹುದ್ದೆಯಂತೆ ಅವರು ವಿದೇಶ ವ್ಯಾಪಾ­ರದ ಜವಾ­ಬ್ದಾರಿ ನೋಡಿ­ಕೊಳ್ಳ­ಬೇಕಾಗಿದೆ.



ಕೇರಳ ವಿಶ್ವವಿದ್ಯಾಲಯದಿಂದ ಭೌತ ವಿಜ್ಞಾನ ಪದವಿ ಪಡೆದು, ನಂತರ ಮೆಸಾ­ಚುಸೆಟ್ಸ್ ತಾಂತ್ರಿಕ ವಿವಿಯಲ್ಲಿ ಆಡಳಿತ ವ್ಯವಹಾರಗಳ ವಿಷಯದಲ್ಲಿ ಅವರು ಉನ್ನತ ಪದವಿ ಪಡೆದಿದ್ದಾರೆ.



ಲಾಡೆನ್ ಅಳಿಯನ ವಿರುದ್ಧ ಸಾಕ್ಷಾಧಾರ

ನ್ಯೂಯಾರ್ಕ್ (ಎಪಿ):
ಅಲ್‌ಖೈದಾ ಸಂಘ­ಟನೆಯ ವಕ್ತಾರ ಮತ್ತು ಒಸಾಮ ಬಿನ್‌ ಲಾಡೆನ್ ಅಳಿಯ ಅಬು ಗೈತ್‌, ಅಮೆರಿಕ ಪ್ರಜೆಗಳನ್ನು ಕೊಲ್ಲಲು ಸಂಚು ನಡೆಸಿದ್ದ ಬಗ್ಗೆ ಸಾಕಷ್ಟು ಸಾಕ್ಷಾಧಾರಗಳು ಇರುವು­ದರಿಂದ ಆತನ ವಿರುದ್ಧದ ಪ್ರಕ­ರಣ ರದ್ದು­ಪಡಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ನ್ಯಾಯಾಧೀಶ ಲೆವಿಸ್‌ ಕಪ್ಲಾನ್‌ ತಿಳಿಸಿದ್ದಾರೆ.



ನೈಜೀರಿಯ: ಘರ್ಷಣೆಗೆ 200 ಬಲಿ

ಅಬುಜಾ (ಐಎಎನ್‌ಎಸ್‌):
ಬಂಡು­ಕೋರರು ಹಾಗೂ  ಸೇನಾ ಸಿಬ್ಬಂದಿಯ  ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 212 ಜನರು  ಮೃತಪಟ್ಟ ಘಟನೆ ನೈಜೀರಿಯದಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆ ಹಿಂದೆ ‘ಬೋಕೊ ಹರಾಮ್‌’ ಎಂಬ ಜಿಹಾದಿ ಗುಂಪಿನ ಕೈವಾಡ ಇದೆ ಎಂದು ಶಂಕಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.