ಭಾನುವಾರ, ಸೆಪ್ಟೆಂಬರ್ 15, 2019
23 °C

ಭಾರತೀಯನಿಗೆ ಪ್ರಶಸ್ತಿ

Published:
Updated:

ಬೀಜಿಂಗ್ (ಪಿಟಿಐ): ಚೀನಾ ತನ್ನ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯನ್ನು ಚೀನಿ ಭಾಷೆಯ  88 ಶ್ರೇಷ್ಠ ಕವನಗಳನ್ನು ಹಿಂದಿ ಭಾಷೆಗೆ ತರ್ಜುಮೆ ಮಾಡಿರುವ ಪ್ರೊ. ಬಿ.ಆರ್. ದೀಪಕ್ ಅವರಿಗೆ ನೀಡಿದೆ.ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಚೀನಾ ಮತ್ತು ಆಗ್ನೇಯ ಏಷ್ಯ ಅಧ್ಯಯನ ಕೇಂದ್ರದ ದೀಪಕ್ ಅವರು ಚೀನಾದ ಅಧ್ಯಯನ, ತರ್ಜುಮೆ, ಚೀನಿ ಪುಸ್ತಕಗಳ ಪ್ರಕಟಣೆ ಮತ್ತು ಸಾಂಸ್ಕೃತಿಕ ವಿನಿಮಯಗಳಿಗೆ ನೀಡಿರುವ ಕೊಡುಗೆಗಾಗಿ  `ವಿಶೇಷ ಪುಸ್ತಕ ಪ್ರಶಸ್ತಿ~ ಪಡೆದ ಮೊದಲ ಭಾರತೀಯರಾಗಿದ್ದಾರೆ. ಇದು 11 ರಿಂದ 12ನೇ ಶತಮಾನದ 88 ಶ್ರೇಷ್ಠ ಕವನಗಳನ್ನು ಹಿಂದಿ ಭಾಷೆಗೆ ತರ್ಜುಮೆ ಮಾಡಿರುವ ಮೊದಲ ಪುಸ್ತಕವಾಗಿದೆ. ಚೀನಾ ಇತಿಹಾಸದ  ಪ್ರಿ ಕ್ವಿನ್ ಶಿಜಿಂಗ್ ನಿಂದ ಯುವಾನ್ ರಾಜಸಂತತಿಯ ಜಿಜಿಯಾಂಗ್‌ಜಿ ವರೆಗಿನ ವಿವಿಧ ಕಾಲಘಟ್ಟಗಳಿಂದ ಕವನಗಳನ್ನು ಆರಿಸಲಾಗಿದೆ.ಅಣು ತ್ಯಾಜ್ಯಕ್ಕೆ ಧಕ್ಕೆ ಇಲ್ಲ

ವಾಷಿಂಗ್ಟನ್ (ಎಎಫ್‌ಪಿ): ಅಮೆರಿಕದಲ್ಲಿ ಕಳೆದ ತಿಂಗಳು ಸಂಭವಿಸಿದ  ಭೂಕಂಪದಿಂದಾಗಿ ಅಣು ಸ್ಥಾವರವೊಂದರ ಪರಮಾಣು ತ್ಯಾಜ್ಯ ಸಂಗ್ರಹ ಟ್ಯಾಂಕ್‌ಗಳು ಹಲವು ಸೆಂ.ಮೀಗಳಷ್ಟು ದೂರ ಸರಿದಿದ್ದರೂ, ಯಾವುದೇ ಹಾನಿ ಉಂಟಾಗಿಲ್ಲ ಎಂದು ಸ್ಥಾವರ ನಿರ್ವಾಹಕರು ತಿಳಿಸಿದ್ದಾರೆ.

 

Post Comments (+)